ಬೆಂಗಳೂರು: ಏರ್ ಲೈನ್ಸ್ ನಲ್ಲಿ ಕನ್ನಡ ಭಾಷೆಯಲ್ಲಿ ಮಾಹಿತಿ ನೀಡದಿರುವುದಕ್ಕೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್.ಕೆ ಅತೀಕ್ ತಮ್ಮ ಸಾಮಾಜಿಕ ಮಾಧ್ಯಮದ ವೇದಿಕೆ ಮೂಲಕ ಇಂಡಿಗೋ ಏರ್ ಲೈನ್ಸ್ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.



COMMERCIAL BREAK
SCROLL TO CONTINUE READING

ಬೆಂಗಳೂರಿನಿಂದ ಬಾಂದ್ರಾ ಗೆ ಬಂದಿಳಿದ ಎಲ್.ಕೆ ಲತಿಕ್ ಅವರು ಸಾಮಾಜಿಕ ವೇದಿಕೆಯಲ್ಲಿ ಈಗ ಕನ್ನಡಲ್ಲಿಯೇ ಸಮಸ್ಯೆಯ ಬಗ್ಗೆ ಗಮನ ಸೆಳೆದಿದ್ದಾರೆ "ಕರ್ನಾಟಕದಲ್ಲಿ @IndiGo6E ಹಾಗಗೂ ಇತರೆ ವಿಮಾನಯಾನ ಕಂಪನಿಗಳಿಗೆ ಕನ್ನಡದಲ್ಲಿ ಸೇವೆ ಸಲ್ಲಿಸಲು ಇರುವ ಸಮಸ್ಯೆ ಏನು?" ಎಂದು ಪ್ರಶ್ನಿಸಿದ್ದಾರೆ.



ಅಷ್ಟೇ ಅಲ್ಲದೆ ಈಗಾಗಲೇ ಬ್ರಿಟಿಶ್ ಏರ್ವೇಸ್, ಎಮಿರೇಟ್ಸ್ ಸಿಂಗಾಪೂರ್ ಏರ್ಲೈನ್ಸ್ ಗಳೆಲ್ಲವೂ ಕೂಡ ಕನ್ನಡದಲ್ಲಿ ಸೇವೆಯನ್ನು ಒದಗಿಸುತ್ತಿವೆ. ಆದರೆ ಇಂಡಿಗೋಗೆ ಕನ್ನಡದಲ್ಲಿ ಸೇವೆಯನ್ನು ಒದಗಿಸುವುದು ಕಷ್ಟವಾಗುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ.ಈ ಹಿಂದೆಯೂ ಕೂಡ ಇಂತಹ ಸಮಸ್ಯೆಯ ಬಗ್ಗೆ ಗಮನ ಸೆಳೆಯಲಾಗಿತ್ತು ಎಂದು ಅವರು ತಮ್ಮ ಹಳೆಯ ಟ್ವೀಟ್ ನ್ನು ನೆನಪಿಸಿದ್ದಾರೆ.