ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ರಾಮನಗರ ಕ್ಷೇತ್ರದ ಜತೆಗೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದಲೂ ಸ್ಪರ್ಧಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಪಿ. ಯೋಗಿಶ್ವರ್, ಎಚ್ಡಿಕೆ ನನ್ನನ್ನ ಸೋಲಿಸಬೇಕು ಅಂತಾ ಎದುರಾಳಿಯಾಗಿ ನಿಲ್ಲುತ್ತಿದ್ದಾರೆ. ಆದರೆ ನನ್ನ ಎದುರು ಯಾರೇ ನಿಂತರೂ ಜನ ನನ್ನ ಪರವಾಗಿದ್ದಾರೆ ಎಂದು ವಿಶ್ವಾಸದ ಮಾತುಗಳನ್ನಾಡಿದರು.


COMMERCIAL BREAK
SCROLL TO CONTINUE READING

ಇದುವರೆಗೂ ನನ್ನನ್ನು ಗೆಲ್ಲಿಸಿರುವ ಜನತೆ ಈ ಬಾರಿಯೂ ನನ್ನನ್ನು ಗೆಲ್ಲಿಸುವ ಭರವಸೆ ಇದೆ ಎಂದ ಯೋಗಿಶ್ವರ್, ನನ್ನ ವಿರುದ್ದ ನಿಲ್ಲೋದಿಕ್ಕೆ ಅನೇಕ ಕಾರಣಗಳು ಇರಬಹುದು.  ಆದರೆ ಜಾತಿ, ಸಮುದಾಯದ ನಾಯಕತ್ವದ ವಿಚಾರಕ್ಕಾಗಿ‌ ನನ್ನನ್ನ ಟಾರ್ಗೆಟ್ ಮಾಡಿದ್ದಾರೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.