BY Vijayendra vs Madhu Bangarappa: ಇತ್ತೀಚೆಗಷ್ಟೇ ತಮ್ಮ ಕೇಶವಿನ್ಯಾಸದ ಬಗ್ಗೆ ಟೀಕಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿರುಗೇಟು ನೀಡಿದ್ದಾರೆ. ನನಗೆ ಕಟ್ಟಿಂಗ್ ಮಾಡುವವರು ಫ್ರೀ ಇಲ್ಲ, ವಿಜಯೇಂದ್ರ ಫ್ರೀ ಇದ್ದರೆ ಬಂದು ಕಟ್ಟಿಂಗ್ ಮಾಡಲಿ ಅಂತಾ ಕುಟುಕಿದ್ದಾರೆ. 


COMMERCIAL BREAK
SCROLL TO CONTINUE READING

ಶಾಲೆಗೆ ತೆರಳುವಾಗ ತಮ್ಮ ಮಕ್ಕಳು ತಲೆ ಬಾಚಿಕೊಂಡು ಶಿಸ್ತಿನಿಂದ ತೆರಳಬೇಕೆಂದು ಪೋಷಕರು ಭಾವಿಸುತ್ತಾರೆ. ಆದರೆ ಶಿಕ್ಷಣ ಸಚಿವರು ವಿಧಾನಸೌಧಕ್ಕೆ ಬರುವಾಗಲಾದರೂ ತಲೆ ಬಾಚಿಕೊಂಡು ಬರಬೇಕೆಂದು ಸಲಹೆ ವಿಜಯೇಂದ್ರ ಸಲಹೆ ನೀಡಿದ್ದಾರೆ. ಇದಕ್ಕೆ ಮಂಗಳವಾರ ಪ್ರತಿಕ್ರಿಯಿಸಿರುವ ಮಧು ಬಂಗಾರಪ್ಪ, ʼವಿಜಯೇಂದ್ರ ತುಂಬಾ ಭ್ರಮೆಯಲ್ಲಿದ್ದಾರೆ. ತಮ್ಮ ಅಪ್ಪ ಸಿಎಂ ಆಗಿದ್ದರೆಂಬ ಭ್ರಮೆಯಲ್ಲಿದ್ದಾರೆ. ಆ ಭ್ರಮೆಯಿಂದ ಅವರು ಹೊರ ಬರಬೇಕು. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಏನು ಮಾಡಬೇಕೆಂದು ಯೋಚಿಸಲಿ ಅಂತಾ ಟೀಕಿಸಿದ್ದಾರೆ.  


ಇದನ್ನೂ ಓದಿ: ವಾಲ್ಮೀಕಿ ನಿಗಮದ ಅಧಿಕಾರಿ ಆತ್ಮಹತ್ಯೆ: ಸಿಎಂ ಸಿದ್ದರಾಮಯ್ಯ ವಿರುದ್ಧ ಸಿಟಿ ರವಿ ಆಕ್ರೋಶ!


ಸಿನಿಮಾ ಲೋಕದಲ್ಲಿದ್ದೇನೆಂಬ ಭ್ರಮೆಯಲ್ಲಿದ್ದಾರೆಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಮಧು ಬಂಗಾರಪ್ಪ, ಚಿತ್ರರಂಗದ ಬಗ್ಗೆ ವಿಜಯೇಂದ್ರ ಮಾತನಾಡುವ ಅಗತ್ಯವಿಲ್ಲ. ಜೂನ್ 4ಕ್ಕೆ ಬರಲಿರುವ ಅವರ ಹಣೆಬರಹವನ್ನು ಅವರೇ ನೋಡಿಕೊಳ್ಳಲಿ. ನನ್ನ ಹಣೆಬರಹವನ್ನು ನಾನು ನೋಡಿಕೊಳ್ಳುತ್ತೇನೆ. ನಮಗೇನು ತೊಂದರೆಯಿಲ್ಲವೆಂದು ಕಿಡಿಕಾರಿದ್ದಾರೆ.


ರಾಜ್ಯದಲ್ಲಿ ಬಿಜೆಪಿ ಇಷ್ಟು ವರ್ಷ ಹೊಲಸು ಮಾಡಿದ್ದು, ನಾವು ಅದನ್ನು ಸರಿ ಮಾಡುತ್ತಿದ್ದೇವೆ ಎಂದ ಮಧು ಬಂಗಾರಪ್ಪ ಇದೇ ವೇಳೆ ಸಿಟಿ ರವಿ ಹೇಳಿಕೆಗೂ ತಿರುಗೇಟು ನೀಡಿದರು. ಶಿಕ್ಷಣ ನೀತಿಯಲ್ಲಿ ಕಾಂಗ್ರೆಸ್ ಸರ್ಕಾರ ತುಘಲಕ್ ದರ್ಬಾರ್ ಮಾಡುತ್ತಿದೆ ಎಂಬ ಸಿಟಿ ರವಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪಠ್ಯ ಪರಿಷ್ಕರಣೆ ಪ್ರಣಾಳಿಕೆಯಲ್ಲಿ ನಾವು ಹೇಳಿದಂತೆ ಮಾಡಿದ್ದೇವೆ. ಬಿಜೆಪಿ ಹಣೆಬರಹಕ್ಕೆ ಶಿಕ್ಷಕರ ನೇಮಕಾತಿ ಮಾಡಲಾಗಿಲ್ಲ. ನಮ್ಮ ಸರ್ಕಾರ ಬಂದ ಬಳಿಕ ಶಿಕ್ಷಕರ ನೇಮಕಾತಿ ಆಗಿದೆ ಅಂತಾ ಕುಟುಕಿದರು.  


ಇದನ್ನೂ ಓದಿಪೆನ್‌ಡ್ರೈವ್‌ ಹಂಚಿಕೆ ಪ್ರಕರಣ ಸಂಬಂಧ ಇಬ್ಬರ ಬಂಧನ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.