ಬೆಂಗಳೂರು: ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಕೂಗನ್ನು ಎತ್ತಿರುವ ಸಚಿವ ಉಮೇಶ್ ಕತ್ತಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ದಿನೇಶ್ ಗುಂಡುರಾವ್ 'ಪದೇ ಪದೇ ಪ್ರತ್ಯೇಕ ರಾಜ್ಯದ ಮಾತಾನಾಡುವ ಸಚಿವ ಉಮೇಶ್ ಕತ್ತಿಯವರು ನಾಡದ್ರೋಹಿಯಲ್ಲದೆ‌ ಮತ್ತೇನು.? ಉಮೇಶ್ ಕತ್ತಿಯವರಿಗೆ ಕರ್ನಾಟಕದಲ್ಲಿ ಇರಲು ಸಂಕಟವಾದರೆ ರಾಜ್ಯ ಬಿಟ್ಟು ತೊಲಗಲಿ" ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಇನ್ನು ಮುಂದುವರೆದು ಮಾತನಾಡಿರುವ ಅವರು 'ನಮ್ಮಲ್ಲಿ ಉತ್ತರ‌ ಕರ್ನಾಟಕ-ದಕ್ಷಿಣ ಕರ್ನಾಟಕ ಎಂಬ ಬೇಧವಿಲ್ಲ.‌ ತಾಯಿನುಡಿ ಕನ್ನಡ ಮಾತಾಡುವವರೆಲ್ಲಾ ಕನ್ನಡಿಗರೇ ಮತ್ತು ತಾಯಿ ಭುವನೇಶ್ವರಿಯ ಮಕ್ಕಳೆ ಎಂದು ಅವರು ಹೇಳಿದರು.


ಉಮೇಶ್ ಕತ್ತಿಯವರು ಪ್ರತ್ಯೇಕ ರಾಜ್ಯದ ಕೂಗು ಹಬ್ಬಿಸುತ್ತಿರುವ ಹಿಂದಿನ ಉದ್ದೇಶವೇನು? ಪ್ರತ್ಯೇಕ ರಾಜ್ಯವಾದರೆ ಹಾಳೂರಿಗೆ ಉಳಿದವನೆ ಗೌಡ ಎಂಬಂತೆ‌ ಗೌಡಿಕೆ ಮೆರೆಯುವ ಹುನ್ನಾರವೇ.?  ನಿಜವಾದ ಕನ್ನಡಿಗರ‌್ಯಾರು ಕರ್ನಾಟಕ ಇಬ್ಭಾಗವಾಗುವುದನ್ನು ಬಯಸುವುದಿಲ್ಲ. ಕತ್ತಿಯವರು ತಲೆಹರಟೆ ಮಾಡುವುದನ್ನು ಬಿಟ್ಟು ಏಕೀಕರಣದ ಹೋರಾಟದ ಹಿನ್ನೆಲೆ ತಿಳಿಯಲಿ ಎಂದು ದಿನೇಶ್ ಗುಂಡುರಾವ್ ತಿಳಿಹೇಳಿದ್ದಾರೆ.


ಇದನ್ನೂ ಓದಿ : Maharashtra Political Crisis : ಉದ್ಧವ್ ಠಾಕ್ರೆಗೆ ಓಪನ್ ಚಾಲೆಂಜ್ ಹಾಕಿದ ಏಕನಾಥ್ ಶಿಂಧೆ!


ರಾಜ್ಯ ಒಡೆಯಲು MES ಪುಂಡರು ತುದಿಗಾಲಲ್ಲಿ ನಿಂತಿದ್ದಾರೆ. ಬೆಳಗಾವಿ MES ಪುಂಡರ ಆಪರೇಟಿಂಗ್ ಸೆಂಟರ್. ಉಮೇಶ್ ಕತ್ತಿ ಇಂತಹ ಸೂಕ್ಷ್ಮ ಪ್ರದೇಶ ಬೆಳಗಾವಿಯಲ್ಲೇ ರಾಜ್ಯ ಒಡೆಯುವ ಮಾತಾನಾಡಿದ್ಯಾಕೆ.? ಉಮೇಶ್ ಕತ್ತಿಯವರು MES ನವರ ಜೊತೆ‌ ಗುಪ್ತ ವಿವಾಹ ಮಾಡಿಕೊಂಡಿದ್ದಾರೆಯೇ.? MES ಜೊತೆಗಿನ ಅಕ್ರಮ ಸಂಬಂಧವನ್ನು ಸಕ್ರಮಗೊಳಿಸಲು ಈ ಹೇಳಿಕೆಯೆ.? ಎಂದು ಅವರು ಪ್ರಶ್ನಿಸಿದರು.


ನಾಡದ್ರೋಹಿ ಸಚಿವ ಉಮೇಶ್ ಕತ್ತಿ ಸಂಪುಟದಲ್ಲಿರಲು ಯಾವ ಅರ್ಹತೆಯೂ ಇಲ್ಲ. CM ಬೊಮ್ಮಾಯಿಯವರಿಗೆ ತಮ್ಮ ಮಾತೃಭಾಷೆ, ಈ ನೆಲದ ಅಸ್ಮಿತೆ,   ಏಕೀಕರಣದ ಚಳವಳಿಯ ಐತಿಹಾಸಿಕ ಹಿನ್ನೆಲೆಯ ಬಗ್ಗೆ ಗೌರವವಿದ್ದರೆ ಸಚಿವ ಉಮೇಶ್ ಕತ್ತಿಯವರನ್ನು ಕೂಡಲೇ ಸಂಪುಟದಿಂದ ವಜಾ ಮಾಡಲಿ. ಇಲ್ಲವೇ ತಾವೂ ನಾಡದ್ರೋಹಿ ಎಂದು ಬಹಿರಂಗವಾಗಿ ಒಪ್ಪಿಕೊಳ್ಳಲಿ ಎಂದು ಸವಾಲು ಹಾಕಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.