Sudden heart attack : ನಮ್ಮ ಜೀವನಶೈಲಿ ಹೇಗಿರುತ್ತದೆ ಹಾಗೆ ನಮ್ಮ ಹೃದಯದ ಆರೋಗ್ಯ ಇರುತ್ತದೆ. ಹೃದಯದ ಆರೋಗ್ಯ ಹದಗೆಡಲು ಹಲವಾರು ಪ್ರಮುಖ ಕಾರಣಗಳು ಕಂಡುಬರುವ ಸಾಧ್ಯತೆ ಇರುತ್ತದೆ. ನಾವು ಜೀವನದಲ್ಲಿ ಇವುಗಳನ್ನು ನಿಯಂತ್ರಣ ಮಾಡಿಕೊಂಡರೆ ಎದುರಾಗುವ ಹೃದಯದ ತೊಂದರೆಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ.  


COMMERCIAL BREAK
SCROLL TO CONTINUE READING

ಕೆಲಸದ ಒತ್ತಡಗಳ ಮಧ್ಯೆ ಆರೋಗ್ಯದ ಕಡೆ ಗಮನಹರಿಸುವುದನ್ನೇ ಕಡಿಮೆ ಮಾಡಿಕೊಂಡಿದ್ದೇವೆ. ಹೀಗಾಗಿ ರಾಜ್ಯ ಸರ್ಕಾರ ಹಠಾತ್ ಹೃದಯಾಘಾತ ತಡೆಯಲು ಸಾರ್ವಜನಿಕ ಸ್ಥಳಗಳಲ್ಲಿಯೂ 'ಆಟೊಮೇಟೆಡ್ ಎಕ್ಸ್‌ಟರ್ನಲ್ ಡಿಫೈಬ್ರಿಲೇಟರ್ಸ್‌  ಸಾಧನ ಅಳವಡಿಸಲು ಮುಂದಾಗಿದೆ.  


ವ್ಯಕ್ತಿಗೆ ಹೃದಯಾಘಾತ ಸಂಭವಿಸಿದ ಒಂದು ಗಂಟೆ ನಿರ್ಣಾಯಕವಾಗಿರುತ್ತದೆ. ಆದ್ದರಿಂದ ಹಠಾತ್ ಹೃದಯಾಘಾತ ತಡೆಯಲು ಪುನೀತ್ ರಾಜ್‌ಕುಮಾರ್ ಹೆಸರಲ್ಲಿ ಯೋಜನೆ ರೂಪಿಸಲಾಗಿದೆ. ಈ ಯೋಜನೆಯಡಿ ಜಿಲ್ಲಾ ಆಸ್ಪತ್ರೆ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಎಇಡಿ ಸಾಧನಗಳನ್ನು ಅಳವಡಿಸಲಾಗುತ್ತದೆ. 


ಇದನ್ನೂ ಓದಿ-ಹು-ಧಾ ಜಿಲ್ಲೆಯಲ್ಲಿ ಅನಧಿಕೃತ ಲೇಔಟ್‌ಗಳಿಗಿಲ್ಲ ಬ್ರೇಕ್


ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಚಿಕಿತ್ಸೆಯ ಬಗ್ಗೆ ಕಾರ್ಯಾಚರಣೆ ಮಾಡಲಿದೆ. ಹೃದಯಾಘಾತದ ಅಪಾಯ ತಡೆಗೆ ಪ್ರಾಥಮಿಕ ಅರೋಗ್ಯ ಕೇಂದ್ರಗಳ ಮಟ್ಟದಲ್ಲಿಯೂ ಮಾತ್ರೆಗಳನ್ನು ಒದಗಿಸಲಾಗುವುದು.ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಅಸ್ಪತ್ರೆಗೆ ಕರೆದೊಯ್ಯಲಾಗುತ್ತದೆ. ಎರಡು ವಾರಗಳಲ್ಲಿ ಟೆಂಡರ್ ಕರೆದು, ರಾಜ್ಯದಾದ್ಯಂತ ಯೋಜನೆ ಜಾರಿಗೆ ಕ್ರಮವಹಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡುರಾವ್‌ ಹೇಳಿದ್ದಾರೆ. 


ಬಸ್, ರೈಲ್ವೆ, ವಿಮಾನ ನಿಲ್ದಾಣ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿಯೂ ಎಇಡಿ ಸಾಧನ ಅಳವಡಿಕೆ ಮಾಡಲಾಗುವುದು. ಇದರಿಂದಾಗಿ ಸಾರ್ವಜನಿಕ ಸ್ಥಳಗಳಲ್ಲಿ ಹೃದಯ ಸಂಬಂಧಿ ಸಮಸ್ಯೆ ಕಂಡು ಬಂದರೆ ಅಲ್ಲಿಯೇ ತುರ್ತು ಚಿಕಿತ್ಸೆ ಸಾಧ್ಯವಾಗುತ್ತದೆ. 


ಮಧುಮೇಹ, ಅಧಿಕ ರಕ್ತದೊತ್ತಡ ಸೇರಿ ವಿವಿಧ ಅನಾರೋಗ್ಯ ಸಮಸ್ಯೆಗಳು ಜನರನ್ನು ಕಾಡುತ್ತಿವೆ. ಈ ಕಾಯಿಲೆಗಳನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಮಾಡಿದರೆ ರೋಗವನ್ನು ವಾಸಿ ಮಾಡಬಹುದು.


ಆರೋಗ್ಯ ಶಿಬಿರಕ್ಕೆ ಸಾವಿರಾರು ಜನರು ಭೇಟಿ ನೀಡಿ ಉಚಿತ ಚಿಕಿತ್ಸೆಯ ಲಾಭ ಪಡೆದುಕೊಂಡರು. 16 ಕೌಂಟರ್ 10 ಫಾರ್ಮಸಿ ಸೆಂಟರ್‌ಗಳಲ್ಲಿ 100ಕ್ಕೂ ಹೆಚ್ಚು ತಜ್ಞ ವೈದ್ಯರು ಸೇವೆ ನೀಡಿದರು. 3 ಕೋಟಿ ಮೌಲ್ಯದ ಔಷಧಗಳನ್ನು ಒದಗಿಸಲಾಯಿತು. ವೈದ್ಯರು ಸೇರಿ 70 ಆರೋಗ್ಯ ಸಿಬ್ಬಂದಿ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಸ್ತ್ರೀ ರೋಗ ಮಕ್ಕಳ ತಜ್ಞರು ಸಹ ಶಿಬಿರದಲ್ಲಿ ಇದ್ದರು. ಹೃದಯ ಮೂತ್ರಪಿಂಡ ಯಕೃತ್ತು ಸೇರಿ ವಿವಿಧ ಅಂಗಾಂಗಗಳ ಸಮಸ್ಯೆಗಳಿಗೂ ಚಿಕಿತ್ಸೆ ನೀಡಲಾಯಿತು.


ಇದನ್ನೂ ಓದಿ-ಚಂದ್ರಯಾನ-3 ಯಶಸ್ವಿಯಾಗಲೆಂದು ಶ್ರೀಕಂಠೇಶ್ವರನ ಸನ್ನಿಧಿಯಲ್ಲಿ ವಿದ್ಯಾರ್ಥಿಗಳ ಪ್ರಾರ್ಥನೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.