ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ನಂತರ ಯಾವುದೇ ಪಕ್ಷವು ಬಹುಮತ ಸಿಗದೇ ಇದ್ದ ಪಕ್ಷದಲ್ಲಿ ಜೆಡಿಎಸ್ ಕಾಂಗ್ರೆಸ್ ಪಕ್ಷದ ಜೊತೆ ಸೇರಿ ಸರ್ಕಾರ ರಚಿಸುವ ಸಾಧ್ಯತೆಯನ್ನು ಜೆಡಿಎಸ್ ನ ರಾಷ್ಟ್ರೀಯ ವಕ್ತಾರ ಡ್ಯಾನಿಶ್ ಅಲಿ ಈ ಸುಳಿವನ್ನು ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಡ್ಯಾನಿಷ್ ಅಲಿ ಹೇಳುವಂತೆ" ದೇವೇಗೌಡರಿಗೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಆಸಕ್ತಿ ಇಲ್ಲ,ಆದರೆ ಅವರು ಕಾಂಗ್ರೆಸ್ ನ ಮಾತಿನ ವೈಖರಿಗೆ ಬೇಸರಗೊಂಡಿದ್ದಾರೆ, ಅದರಲ್ಲೂ ರಾಹುಲ್ ಗಾಂಧಿಯವರು ವಯಕ್ತಿಕವಾಗಿ ಟೀಕೆ ಮಾಡುತ್ತಿರುವುದು ಸರಿ ಕಾಣುತ್ತಿಲ್ಲ" ಎಂದು ತಿಳಿಸಿದ್ದಾರೆ.


ಇನ್ನು ಮುಂದುವರೆದು ಮಾತನಾಡಿದ ಡ್ಯಾನಿಶ್ ಅಲಿ "ರಾಹುಲ್ ಗಾಂಧಿಯವರು ಕಾಂಗ್ರೆಸ್ ನ ಅಧ್ಯಕ್ಷರು,ಅವರಿಗೆ ವಿರೋಧ ಪಕ್ಷಗಳನ್ನು ಒಗ್ಗಟ್ಟಾಗಿ ತೆಗೆದುಕೊಂಡು ಹೋಗುವ ಜವಾಬ್ದಾರಿ ಇದೆ,ಆದ್ದರಿಂದ ಅವರು ಸ್ಥಳೀಯ ನಾಯಕರ ಮಾತಿಗೆ ಗಮನ ನೀಡಬಾರದು,ಏಕಂದರೆ ಅವರೆಲ್ಲರಿಗೂ ತಮ್ಮದೇ ಆದ ವೈಯಕ್ತಿಕ ಆಸಕ್ತಿಗಳನ್ನು ಹೊಂದಿದ್ದಾರೆ ಎಂದರು. 


ನಾವು ವಿರೋಧ ಪಕ್ಷದ ಐಕ್ಯತೆಯಲ್ಲಿ ನಾವು ಬಾಗಿಯಾಗಿದ್ದೇವೆ,ಆದ್ದರಿಂದ ನಾನು ಜೆಡಿಎಸ್ ನ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಹೇಳುವುದಿಷ್ಟೇ ಕಾಂಗ್ರೆಸ್ ನ ಅಧ್ಯಕ್ಷ ರಾಹುಲ್ ಗಾಂಧಿಯವರು ಸ್ಥಳೀಯ ಕಾಂಗ್ರೆಸ್ ನಾಯಕರ ಮಾತಿಗೆ ಕಿವಿಗೊಡದೆ  ಧಕ್ಕೆ ಉಂಟು ಮಾಡಿಕೊಳ್ಳಬಾರದು ಎಂದು ಡ್ಯಾನಿಶ್ ಅಲಿ ತಿಳಿಸಿದರು,