ಬೆಂಗಳೂರು: ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿವಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಪದವಿ ಪಡೆಯಬೇಕೆಂಬ ಬಹುದಿನದ ಕನ್ನಡಿಗರ ಆಸೆ ಕೊನೆಗೂ ಕೈಗೂಡುತ್ತಿದೆ. ಕಾರಣವಿಷ್ಟೇ ಮೂರು ವರ್ಷದ ಹಿಂದೆ ಯುಜಿಸಿಯು ಕೆಎಸ್ಓಯುಗೆ ಇರುವ ಮಾನ್ಯತೆಯನ್ನು ರದ್ದುಗೊಳಿಸಿದ ನಂತರ ಸುಮಾರು 5000 ವಿಧ್ಯಾರ್ಥಿಗಳು ಇಗ್ನೋದಲ್ಲಿ ಪ್ರವೇಶಾತಿಯನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಿದ್ದರು.ಆದ್ದರಿಂದಾಗಿ ಅಂತಹ ವಿಧ್ಯಾರ್ಥಿಗಳಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಇಗ್ನೋ ಹೊಸ ಕ್ರಮಗಳನ್ನು ಕೈಗೊಂಡಿದೆ ಅದರಲ್ಲಿ ಪ್ರಮುಖವಾಗಿ ಇಂಗ್ಲೀಷ ಮತ್ತು ಹಿಂದಿ ಪುಸ್ತಕಗಳನ್ನು ಕನ್ನಡಕ್ಕೆ ತರ್ಜುಮೆಗೊಳಿಸುವ ಮಹತ್ತರ ನಿರ್ಧಾರವನ್ನು ಈ ಹಿನ್ನಲೆಯಲ್ಲಿ ತೆಗೆದುಕೊಂಡಿದೆ.


COMMERCIAL BREAK
SCROLL TO CONTINUE READING

ಇತ್ತೀಚೆಗೆ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿವಿಯಲ್ಲಿ ದೂರಶಿಕ್ಷಣದ ಮೂಲಕ ಕೋರ್ಸ್ಗಳಿಗೆ ಪ್ರವೇಶಾತಿ ಪಡೆಯುವವರ ಸಂಖ್ಯೆಯು ತೀವ್ರಗತಿಯಲ್ಲಿ ಹೆಚ್ಚಳಗೊಂಡಿರುವ ಕಾರಣ, ಕರ್ನಾಟಕದ ವಿದ್ಯಾರ್ಥಿಗಳಿಗೆ ಅದರಲ್ಲೂ ಕನ್ನಡ ಮಾದ್ಯಮದಲ್ಲಿ ಓದಬೇಕೆನ್ನುವರಿಗೆ ಅನುಕೂಲಕರವಾಗುವ ನಿಟ್ಟಿನಲ್ಲಿ ಕರ್ನಾಟಕ ವಿಭಾಗದ ಇಗ್ನೋ ಕೇಂದ್ರ ಇಂಗ್ಲೀಶ್ ಮತ್ತು ಹಿಂದಿ ಭಾಷೆಗಳ ಹೊರತಾಗಿ ಕನ್ನಡದಲ್ಲಿಯೂ ಸಹಿತ ಪಠ್ಯಗಳನ್ನು ಪ್ರಕಟಿಸುವ ಕಾರ್ಯಕ್ಕೆ ಚಾಲನೆ ನೀಡಿದೆ.ಈಗಾಗಲೇ ಸಮಾಜಶಾಸ್ತ್ರ, ರಾಜಕೀಯ ವಿಜ್ಞಾನ, ಸಾರ್ವಜನಿಕ ಆಡಳಿತ,ಇತಿಹಾಸಕ್ಕೆ ಸೇರಿದ ಪಠ್ಯಗಳನ್ನು ಕನ್ನಡಕ್ಕೆ ಭಾಷಾಂತರಿಸುವ ಕಾರ್ಯವು ಪ್ರಗತಿಯಲ್ಲಿದೆ ಇದಕ್ಕಾಗಿ  ಒಂದು ವಿಶೇಷ ಸೆಲ್ ನ್ನು ಸಹಿತ ತೆರೆಯಲಾಗಿದೆ ಎನ್ನುತ್ತಾರೆ ಇಲ್ಲಿನ ಇಗ್ನೋ ಪ್ರಾದೇಶಿಕ ಕೇಂದ್ರದ ನಿರ್ದೇಶಕರಾದ ಜಿ.ಎಚ್.ಇಮ್ರಾಪುರ್.ಸಾಧ್ಯವಾದಷ್ಟು ಮಟ್ಟಿಗೆ ಕೆಎಸ್ಓಯುನ ವಿದ್ಯಾರ್ಥಿಗಳನ್ನು ಇಂಗ್ಲೀಷ ಅಥವಾ ಹಿಂದಿಯಲ್ಲಿ ಓದುವಂತೆ ಒತ್ತಾಯಿಸುವ ಬದಲು ಅವರ ಇಚ್ಚೆಯ ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾದುವ ಅವಕಾಶವನ್ನು ಇಲ್ಲಿನ ದೂರಶಿಕ್ಷಣಕೇಂದ್ರ ಮಾಡಿಕೊಡುತ್ತದೆ ಎಂದು ತಿಳಿಸಿದರು.