ಬೆಂಗಳೂರು: ಐಎಂಎ ಹಗರಣಕ್ಕೆ ಸಂಬಂಧಿಸಿದಂತೆ ಐಎಂಎ ಕಂಪನಿಯ ಸ್ಥಾಪಕ-ಮಾಲೀಕ ಮೊಹಮ್ಮದ್ ಮನ್ಸೂರ್ ಖಾನ್ ಅವರಿಂದ 2 ಕೋಟಿ ರೂ. ತೆಗೆದುಕೊಂಡ ಆರೋಪದ ಮೇಲೆ ಶಿವಾಜಿನಗರ ಪೊಲೀಸ್ ಠಾಣೆಯ ರೌಡಿಶೀಟರ್ ಇಫ್ತಿಯಾಕ್ ಅಹ್ಮದ್ ನನ್ನು ತನಿಖಾ ತಂಡದ ಅಧಿಕಾರಿಗಳು ಬಂಧಿಸಿದ್ದಾರೆ.


COMMERCIAL BREAK
SCROLL TO CONTINUE READING

ಶಿವಾಜಿನಗರ ಪೊಲೀಸ್ ಠಾಣೆಯ ರೌಡಿಶೀಟರ್ 50 ವರ್ಷದ ಇಫ್ತಿಯಾಕ್ ಅಹ್ಮದ್, ಪ್ರಕರಣದ ಪ್ರಮುಖ ಆರೋಪಿ ಮಹಮ್ಮದ್ ಮನ್ಸೂರ್ ಖಾನ್'ನಿಂದ 2 ಕೋಟಿ ರೂ. ಹಣ ಪದೆದುಕೊಂದಿರುತ್ತಾನೆ ಎಂಬ ಮಾಹಿತಿ ಮೇರೆಗೆ ಜುಲೈ 30, 2019ರಂದು ಈತನನ್ನು ದಸ್ತಗಿರಿ ಮಾಡುವಲ್ಲಿ ಐಎಂಎ ಬಹುಕೋಟಿ ವಂಚನೆ ಪ್ರಕರಣದ ವಿಶೇಷ ತನಿಖಾ ತಂಡವು ಯಶಸ್ವಿಯಾಗಿದೆ ಎಂದು ಡಿಐಜಿ ಮತ್ತು ಮುಖ್ಯ ತನಿಖಾಧಿಕಾರಿಗಳ ಕಚೇರಿ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.


ದಸ್ತಗಿರಿಯಾಗಿರುವ ರೌಡಿಶೀಟರ್ ಇಫ್ತಿಯಾಕ್ ಅಹ್ಮದ್, 1993ರಿಂದಲೂ ಹಲವಾರು ಘೋರ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು, ಈತನ ವಿರುದ್ಧ ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 48 ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಹೇಳಲಾಗಿದೆ.


ಡಿಐಜಿ ಬಿ.ಆರ್.ರವಿಕಾಂತ ಗೌಡ ನೇತೃತ್ವದ 11 ಸದಸ್ಯರ ಎಸ್‌ಐಟಿ ತಂಡ ಐಎಂಎ ಬಹುಕೋಟಿ ವಂಚನೆ ಬಗ್ಗೆ ತನಿಖೆ ನಡೆಸುತ್ತಿದೆ.