ಬೆಂಗಳೂರು: ದೇಶಾದ್ಯಂತ ತನ್ನ 3ಜಿ ತಾಂತ್ರಿಕ ಸೇವೆಯನ್ನು ಸ್ಥಗಿತಗೊಳಿಸಲು ಮುಂದಾಗಿರುವ ಭಾರ್ತಿ ಏರ್ಟೆಲ್ ಗುರುವಾರ ಕರ್ನಾಟಕದಲ್ಲಿಯೂ ಕೂಟ ತನ್ನ  3ಜಿ ತಂತ್ರಜ್ಞಾನ ಸೇವೆಯನ್ನು ನಿಲ್ಲಿಸುವುದಾಗಿ ಘೋಷಿಸಿದೆ.  ಇದರಿಂದಾಗಿ ಇನ್ಮುಂದೆ ಕರ್ನಾಟಕದಲ್ಲಿ ಏರ್ಟೆಲ್ ಬ್ರಾಡ್ ಬ್ಯಾಂಡ್ ಸೇವೆ ಕೇವಲ ಹೈ ಸ್ಪೀಡ್ ನೆಟ್ವರ್ಕ್ ಮೂಲಕ ಲಭಿಸಲಿದ್ದು, ಇದು ಎಚ್.ಡಿ. ಕ್ವಾಲಿಟಿ VOLTE ಒಳಗೊಂಡಿರಲಿದೆ ಎಂದು ಕಂಪನಿ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದೆ.


COMMERCIAL BREAK
SCROLL TO CONTINUE READING

ಆದರೆ, ಇನ್ನೊಂದೆಡೆ ಸಂಸ್ಥೆ ಕರ್ನಾಟಕದಲ್ಲಿ ತನ್ನ 2ಜಿ ತಂತ್ರಜ್ಞಾನದ ಸೇವೆಯನ್ನು ಎಂದಿನಂತೆ ಮುಂದುವರೆಸಲಿದ್ದು,  ಗ್ರಾಮೀಣ ಹಾಗೂ ನಗರ ಭಾಗಗಳಲ್ಲಿ ಫೀಚರ್ ಫೋನ್ ಹೊಂದಿದ ಗ್ರಾಹಕರನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಭಾರ್ತಿ ಏರ್ಟೆಲ್ ತನ್ನ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.