ಬೆಂಗಳೂರು: ಈ ಹಿಂದೆ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಪಠ್ಯ ಪುಸ್ತಕ ತಿದ್ದುಪಡಿಗೆ ರಾಜ್ಯ ಸರ್ಕಾರ ಆದೇಶ ನೀಡಿದೆ.ಈಗ ರಾಜ್ಯ ಸರ್ಕಾರ ಹೊರಡಿಸಿರುವ ಸುತ್ತೋಲೆಯಲ್ಲಿ ಸಮಾಜ ವಿಜ್ಞಾನದ ವಿಷಯಗಳಿಗೆ ಬದಲಾವಣೆ ತರಲು ಸೂಚಿಸಿದೆ.


COMMERCIAL BREAK
SCROLL TO CONTINUE READING

ಈ ಸುತ್ತೋಲೆಯ ಭಾಗವಾಗಿ ರಾಜ್ಯ ಸರ್ಕಾರ ಕನ್ನಡ ಭಾಷಾ ಪುಸ್ತಕದಲ್ಲಿ 9 ಪಾಠಕ್ಕೆ, ಸಮಾಜ ವಿಜ್ಞಾನದಲ್ಲಿ 9 ಪಾಠಕ್ಕೆ ಹಾಗೂ ನಿಜವಾದ ಆದರ್ಶಪುರುಷ ಯಾರಾಗಬೇಕು? ಎನ್ನುವ ಪಠ್ಯಕ್ಕೆ ಕೊಕ್ ನೀಡಿದೆ.


ಇದನ್ನೂ ಓದಿ: ಅಷ್ಟು ಜನರನ್ನು ನೋಡಿ ಅವಿವಾ ಹೇಳಿದ್ದೇನು ಗೊತ್ತಾ..?


ಅಷ್ಟೇ ಅಲ್ಲದೆ ಕೇಶವ್ ಹೆಡ್ಗೇವಾರ್ ಬರೆದಿದ್ದ ಗದ್ಯ,ಚಕ್ರವರ್ತಿ ಸೂಲಿಬೆಲೆಯ ಪಠ್ಯ,ತಾಯಿ ಭಾರತಿಯ ಅಮರ ಪುತ್ರರು ಕುರಿತ ಪಾಠ,ಶತಾವಧಾನಿ ಆರ್ ಗಣೇಶ್ ಅವರ ಗದ್ಯ,ಶ್ರೇಷ್ಠ ಭಾರತೀಯ ಚಿಂತನೆಗಳು ಪಾಠಗಳನ್ನು ಸರ್ಕಾರ ತನ್ನ ಆದೇಶದಲ್ಲಿ ಕೈ ಬಿಟ್ಟಿದೆ.ಇನ್ನೂ ನಿರ್ಮಲಾ ಸುರತ್ಕಲ್, ರಮಾನಂದ ಆಚಾರ್ಯರ ಪಾಠ, ಪಾರಂಪಳ್ಳಿ ನರಸಿಂಹ ಐತಾಳ, ಲಕ್ಷ್ಮೀಶ, ಕೆ ಟಿ ಗಟ್ಟಿ ಅವರ ಪಾಠ, ಪಿ ಸತ್ಯನಾರಾಯಣ ಭಟ್ಟರ ಗದ್ಯಗಳಿಗೂ ರಾಜ್ಯ ಸರ್ಕಾರ ಕತ್ತರಿ ಹಾಕಿದೆ.ನಾಳೆಯಿಂದ ಗೃಹಜ್ಯೋತಿ ಯೋಜನೆ ಅರ್ಜಿ ಸಲ್ಲಿಕೆಗೆ ಚಾಲನೆ


ಈಗ  ಹೊರಡಿಸಿರುವ ಸುತ್ತೋಲೆಯಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯಸರ್ಕಾರ ಹೊಸ ಪಠ್ಯದ ಭಾಗವಾಗಿ ಸಾವಿತ್ರಿ ಪುಲೆ, ಜವಾಹರಲಾಲ್ ನೆಹರು, ಡಾ. ಬಿ.ಆರ್.ಅಂಬೇಡ್ಕರ್ ಅವರ ಪಠ್ಯ, ಸುಕುಮಾರಸ್ವಾಮಿ ಕುರಿತ ಪಠ್ಯಕ್ಕೆ ಅವಕಾಶ ಕಲ್ಪಿಸಿದೆ.ಇವುಗಳ ಜೊತೆಗೆ ಸಾರಾ ಅಬೂಬ್ಕರ್, ವಿಜಯಮಾಲಾ ರಂಗನಾಥ್, ವಾಲ್ಮೀಕಿ ಮಹರ್ಷಿ, ಉರುಸ್​ಗಳಲ್ಲಿ ಭಾವೈಕ್ಯತೆ ಪಾಠಗಳನ್ನು ನೂತನ ಪಠ್ಯದಲ್ಲಿ ಸೇರಿಸಿದೆ.ವೇದ ಕಾಲದ ಸಂಸ್ಕೃತಿ, ಹೊಸ ಧರ್ಮಗಳ ಉದಯ ಕುರಿತ ಅಧ್ಯಾಯ,ಹಾಗೂ ಮಿರ್ಜಾ ಇಸ್ಮಾಯಿಲ್. ವಿಶ್ವೇಶ್ವರಯ್ಯ, ಒಡೆಯರ್ ಕುರಿತ ಪಾಠಗಳನ್ನು ಸಹ ಸರ್ಕಾರ ಸೇರಿಸಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.