ಬೆಂಗಳೂರು: ಜನವರಿ 27 1948ರಂದು ಜನಿಸಿದ ಖಮರುಲ್ ಇಸ್ಲಾಂ ಆರು ಬಾರಿ ಶಾಸಕರಾಗಿ, ಒಂದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಅವರು ವಸತಿ, ಕಾರ್ಮಿಕ, ಸಣ್ಣಕೈಗಾರಿಕೆ ಮತ್ತು ಅಲ್ಪಸಂಖ್ಯಾತ ಸಚಿವರಾಗಿ ಸೇವೆ ಸಲ್ಲಿಸಿದ್ದರು.


COMMERCIAL BREAK
SCROLL TO CONTINUE READING

ಅಲ್ಲದೆ ಹೈದರಾಬಾದ್ ಕರ್ನಾಟಕದ ಪ್ರದೆಶಾಭಿವೃದ್ಧಿ ಮಂಡಳಿಯ ಪ್ರಥಮ ಅಧ್ಯಕ್ಷರಾಗಿ ಎರಡು ವರ್ಷ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಉತ್ತರ ಕಲಬುರಗಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಕೇರಳ ರಾಜ್ಯದ ಕಾಂಗ್ರೇಸ್  ಉಸ್ತುವಾರಿಯಾಗಿದ್ದರು. 


ಮಾಜಿ ಸಚಿವ ಖಮರುಲ್ ಇಸ್ಲಾಂ ಅವರ ಬದುಕಿನ ಪ್ರಮುಖ ಹೆಜ್ಜೆಗಳು-


* 1978 ರಲ್ಲಿ ಮುಸ್ಲಿಂ ಲೀಗ್ ನಿಂದ ಶಾಸಕರಾಗಿ ರಾಜಕೀಯ ಪ್ರವೇಶ
* 1989 ರಲ್ಲಿ ಇಂಡಿಯನ್ ನ್ಯಾಷನಲ್ ಲೀಗ್ ಪಕ್ಷದಿಂದ ಶಾಸಕರಾಗಿ ಆಯ್ಕೆ
* 1994 ರಲ್ಲಿ ಇಂಡಿಯನ್ ನ್ಯಾಷನಲ್ ಲೀಗ್ ನಿಂದಲೇ ಆಯ್ಕೆ
* 1996 ರಲ್ಲಿ ಜನತಾದಳ ಸೇರ್ಪಡೆ, ಸಂಸದರಾಗಿ ಆಯ್ಕೆ.
* 1999 ರಲ್ಲಿ ಕಾಂಗ್ರೆಸ್ ಸೇರ್ಪಡೆ, ಶಾಸಕರಾಗಿ ಮತ್ತೊಮ್ಮೆ ಆಯ್ಕೆ
* 2008 ಮತ್ತು 2013 ರಲ್ಲಿ ಮತ್ತೆ ಶಾಸಕರಾಗಿ ಸತತ ಆಯ್ಕೆ.
* ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಪ್ರಥಮ ಅಧ್ಯಕ್ಷರಾಗಿ ಎರಡು ವರ್ಷ ಸೇವೆ.