Banglore : ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಯ ಲಾಭ ಪಡೆಯಲು ಜನ‌ ಸೈಬರ್ ಸೆಂಟರ್ ಗಳತ್ತ ಮುಖ ಮಾಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರ್ತಿದ್ದಂತೆ,  ಚುನಾವಣೆ ಸಂದರ್ಭದಲ್ಲಿ ತಾವು ನೀಡಿದ್ದ ಐದು ಗ್ಯಾರಂಟಿಗಳ ಲಾಭವನ್ನ ಪಡೆಯಲು ಜನ ಉತ್ಸುಕರಾಗಿದ್ದಾರೆ. ಇದೀಗಾ ಜನ 
ಬಿಪಿಎಲ್ ಕಾರ್ಡ್ ಮಾಡಿಸಲು ಸೈಬರ್ ಸೆಂಟರ್ ಗಳಲ್ಲಿ ಮುಗಿಬೀಳುತಿದ್ದಾರೆ. 


COMMERCIAL BREAK
SCROLL TO CONTINUE READING

ನಿತ್ಯ ೨೦ ರಿಂದ ೩೦ ಜನ ಒಂದೊಂದು ಸೈಬರ್ ಸೆಂಟರ್ ಗಳಿಗೆ ಅರ್ಜಿ ಹಾಕಲು ಬರ್ತಿದ್ದಾರೆ. ಹೊಸ ಕಾರ್ಡ್ ಮಾಡಿಸಲು ಜನ ಬೆಂಗಳೂರು ಒನ್ ಹಾಗೂ ಸೈಬರ್ ಸೆಂಟರ್ಗೆ ಧಾವಿಸುತ್ತಿದ್ದಾರೆ. ಆದ್ರೆ, ಸರ್ಕಾರದಿಂದ ಹೊಸ ರೇಷನ್ ಕಾಡ್೯ಗೆ ಅರ್ಜಿ ಸಲ್ಲಿಸಲು ಇನ್ನು ಯಾವುದೇ ಸೂಚನೆ ನೀಡಿಲ್ಲ. ಹೀಗಾಗಿ ಅರ್ಜಿ ಸಲ್ಲಿಸಲು ಬಂದವರು ವಾಪಾಸ್ ಮರಳುತ್ತಿದ್ದಾರೆ. ಇನ್ನೂ ಕೆಲವು ಸೈಬರ್ ಸೆಂಟರ್ ಮಾಲೀಕರು ಕೂಡ ಹೊಸ ಅರ್ಜಿಗಳಿಗೆ ಅವಕಾಶ ನೀಡಿದೆಯೋನೋ ಅಂತ ಇಲಾಖಾ ವೆಬ್ ಸೈಟ್ ಓಪನ್ ಮಾಡಿ ಪರಿಶೀಲಿಸ್ತಿದ್ದಾರೆ. 


ಇದನ್ನೂ ಓದಿ-Loksabha Election: 2024ರ ಲೋಕಸಭೆ ಚುನಾವಣೆಗೆ ಮಾಜಿ ಪಿಎಂ ದೇವೇಗೌಡರ ಕ್ಷೇತ್ರ ಇದೇನಾ?


ಹೀಗಾಗಿ ಸೈಬರ್ ಸೆಂಟರ್ ಗಳಲ್ಲಿ ಸೈಬರ್ ಸ್ಲೋ ಪ್ರಾಬ್ಲಂ ಶುರುವಾಗಿದೆ. ಬಿಪಿಎಲ್ ಕಾರ್ಡ್ ಮಾಡಿಸಲು ಇಷ್ಟು ದಿನ ಗ್ರಾಮೀಣ ಭಾಗಗಳಲ್ಲಿ ಜನ ಮುಗಿಬಿದ್ದಿದ್ರು.‌ ಇದೀಗಾ ಬೆಂಗಳೂರಿನಲ್ಲೂ ಈ ಪರಿಸ್ಥಿತಿ ನಿರ್ಮಾಣವಾಗ್ತಿದೆ. ರಾಜ್ಯ ಸರ್ಕಾರ ತಾವು ನೀಡಿದ ಐದು ಗ್ಯಾರಂಟಿಗಳನ್ನು ಮೊದಲ ದಿನವೇ ಪೂರೈಸುವ ಘೋಷಣೆ ಮಾಡಿದ್ದರಿಂದ ತಮಗೆ ಉಚಿತ ವಿದ್ಯುತ್, ಗೃಹಲಕ್ಷ್ಮಿ, ಮಹಿಳೆಯರಿಗೆ ಉಚಿತ ಬಸ್ ಪಾಸ್, 10 ಕೆಜಿ ಅಕ್ಕಿ ಸಿಗುವ ನಿರೀಕ್ಷೆಯಲ್ಲಿ ಜನರಿದ್ದಾರೆ. ಹೀಗಾಗಿ ಈ ಯೋಜನೆಗೆ ಅಗತ್ಯವಾಗಿ ಬೇಕಾದ ಬಿಪಿಎಲ್ ಕಾರ್ಡ್ ಬೇಡಿಕೆ ಹೆಚ್ಚಾಗಿದ್ದು, ಆಹಾರ ಇಲಾಖೆ ಕಚೇರಿಗೆ ಮುಗಿಬೀಳುತಿದ್ದಾರೆ.


ಇದನ್ನೂ ಓದಿ-ರಾಜ್ಯದಲ್ಲಿ ಇನ್ನೂ 3 ದಿನ ಗುಡುಗು ಸಹಿತ ಭಾರೀ ಮಳೆ: ಹಲವು ಜಿಲ್ಲೆಗಳಲ್ಲಿ 'ಯೆಲ್ಲೊ ಅಲರ್ಟ್'


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.