`ಸರ್ಕಾರದ ಪ್ರತಿಯೊಂದು ಯೋಜನೆಯಲ್ಲಿ ಬಿಜೆಪಿ ಮಂತ್ರಿಗಳಿಗೆ ಕಮಿಷನ್ ಹೋಗ್ತಾ ಇದೆ`
ಬಿಜೆಪಿ ಸರ್ಕಾರ ೪೦% ಕಮಿಷನ್ ಸರ್ಕಾರವಾಗಿದೆ. ಸರ್ಕಾರದ ಪ್ರತಿಯೊಂದು ಯೋಜನೆಯಲ್ಲಿ ಮಂತ್ರಿಗಳಿಗೆ ಕಮಿಷನ್ ಹೋಗ್ತಾ ಇದೆ.ಇನ್ನೂ ಮಲ್ಲೇಶ್ವರಂನಲ್ಲಿ ಪ್ರತಿಯೊಂದು ಕಾಮಗಾರಿಗಳಲ್ಲಿ ಅಶ್ವತ್ಥ ನಾರಾಯಣನಿಗೆ ಕಮಿಷನ್ ಹೋಗ್ತಿದೆ.ಮಲ್ಲೇಶ್ವರಂನಲ್ಲಿರುವ ಬಹುತೇಕ ಕಾಂಟ್ರಾಕ್ಟರ್ ಗಳು ಸಚಿವರ ಸಂಬಂಧಿಗಳೇ ಇದ್ದಾರೆ ಎಂದು ಎಂದು ವಿಧಾನಪರಿಷತ್ ವಿಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ಕಿಡಿ ಕಾರಿದ್ದಾರೆ.
ಬೆಂಗಳೂರು: ಬಿಜೆಪಿ ಸರ್ಕಾರ ೪೦% ಕಮಿಷನ್ ಸರ್ಕಾರವಾಗಿದೆ. ಸರ್ಕಾರದ ಪ್ರತಿಯೊಂದು ಯೋಜನೆಯಲ್ಲಿ ಮಂತ್ರಿಗಳಿಗೆ ಕಮಿಷನ್ ಹೋಗ್ತಾ ಇದೆ.ಇನ್ನೂ ಮಲ್ಲೇಶ್ವರಂನಲ್ಲಿ ಪ್ರತಿಯೊಂದು ಕಾಮಗಾರಿಗಳಲ್ಲಿ ಅಶ್ವತ್ಥ ನಾರಾಯಣನಿಗೆ ಕಮಿಷನ್ ಹೋಗ್ತಿದೆ.ಮಲ್ಲೇಶ್ವರಂನಲ್ಲಿರುವ ಬಹುತೇಕ ಕಾಂಟ್ರಾಕ್ಟರ್ ಗಳು ಸಚಿವರ ಸಂಬಂಧಿಗಳೇ ಇದ್ದಾರೆ ಎಂದು ಎಂದು ವಿಧಾನಪರಿಷತ್ ವಿಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ಕಿಡಿ ಕಾರಿದ್ದಾರೆ.
ಇನ್ನೂ ಮುಂದುವರೆದು ಮಾತನಾಡಿದ ಅವರು 'ಈಗ ಪಿಎಸೈ ನೇಮಕಾತಿಯಲ್ಲಿ ಸಚಿವರ ಸಹೋದರನೇ ಭಾಗಿಯಾಗಿರುವ ಗಂಭೀರ ಆರೋಪ ಕೇಳಿ ಬಂದಿದೆ.ಹೀಗಾಗಿ ಅಶ್ವತ್ಥ ನಾರಾಯಣ್ ಮಲ್ಲೇಶ್ವರಂ ನಲ್ಲಿ ಗುಳುಂ ನಾರಾಯಣ ಎಂದೇ ಖ್ಯಾತಿ ಪಡೆದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ- 109 ವರ್ಷಗಳ ಹಿಂದೆ ತಯಾರಾದ ಬಾಲಿವುಡ್ ಮೊದಲ ಚಲನಚಿತ್ರದ ಬಜೆಟ್ ಎಷ್ಟಿತ್ತು ಗೊತ್ತಾ?
ಭ್ರಷ್ಟಾಚಾರಕ್ಕೆ ಆರ್ ಎಸ್ ಎಸ್ ಕುಮ್ಮಕ್ಕು ಇದೆ.ಅದರ ಹಣದಿಂದಲೇ ಶ್ರೀಮಂತ ಎನ್ ಜಿಓ ಆಗಿ ಆರ್ ಎಸ್ ಎಸ್ ಇದೆ.ಪ್ರತಿಯೊಬ್ಬ ಸಚಿವರ ಬಳಿ ಆರ್ ಎಸ್ ಎಸ್ ಒಎಸ್ ಡಿ ಇದ್ದಾರೆ.ಹಣ ಕಲೆಕ್ಷನ್ ಮಾಡುವುದೇ ಒಎಸ್ಡಿಗಳ ಫುಲ್ ಟೈಂ ಡ್ಯುಟಿಯಾಗಿದೆ.ಹಾಗಾಗಿ ಅವರು ಹಾವಿನಪುರದಲ್ಲಿ ಕುಳಿತು ಹಣ ಕಲೆಕ್ಷನ್ ಮಾಡ್ತಾರೆ ಎಂದು ಅವರು ಟೀಕಾ ಪ್ರಹಾರ ನಡೆಸಿದರು.ಖರೀದಿ ಮಾಡಿದ್ದು 90 ಎಲೆಕ್ಟ್ರಿಕ್ ಬಸ್- ಆದ್ರೆ ರಸ್ತೆಗಿಳಿದಿರೋದು ಕೇವಲ 28 ಬಸ್
ನಿನ್ನೆ ಅಮಿತ್ ಶಾ ಬಂದಿದ್ರು, ಯಾವುದೇ ಕ್ರಮ ಕೈಗೊಂಡಿಲ್ಲ,40% ಕಮಿಷನ್ ಹಾಗೂ ಅಕ್ರಮ ಪಿಎಸೈ ನೇಮಕಾತಿಯಲ್ಲಿ ಅಮಿತ್ ಶಾ ಪಾಲು ತೆಗೆದುಕೊಳ್ಳಲು ಬಂದಿದ್ದಾರೆ.ಈಗ ಅಮಿತ್ ಶಾ ಆಗಮನದಿಂದ ರಾಜ್ಯದ ಜನರಿಗೆ ನಯಾಪೈಸೆ ಪ್ರಯೋಜನವಾಗಿಲ್ಲ ಎಂದು ಹರಿಪ್ರಸಾದ್ ಹರಿಹಾಯ್ದರು.
ಇದೇ ವೇಳೆ ಹರಿಪ್ರಸಾದ್ ಅವರು ಸಚಿವ ಅಶ್ವಥ್ ನಾರಾಯಣ್ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ರಾಜೀನಾಮೆ ನೀಡಬೇಕು ಮತ್ತು ಅವರ ಮೇಲೆ ಬಂದಿರುವ ಆರೋಪಗಳ ವಿಚಾರವಾಗಿ ಗಂಭೀರವಾಗಿ ತನಿಖೆಯಾಗಬೇಕು ಮಲ್ಲೇಶ್ವರಂನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಒತ್ತಾಯಿಸಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.