ರೈತರಿಗೆ ಸರಕಾರ ಸಿಹಿ ಸುದ್ದಿ ನೀಡಿದೆ. ಕೈಗಾರಿಕೆಗೆ ಭೂಮಿ ಕೊಟ್ಟ ರೈತರಿಗೆ ಪರಿಹಾರವಾಗಿ ನೀಡುತ್ತಿದ್ದ ಅಭಿವೃದ್ಧಿಪಡಿಸಿದ ಜಮೀನಿನ ವಿಸ್ತೀರ್ಣವನ್ನು ಹೆಚ್ಚಿಸಿದೆ. ಭೂ ಪರಿಹಾರದ (ಹಣ) ಬದಲಾಗಿ ರೈತರಿಗೆ ನೀಡುತ್ತಿದ್ದ ಅಭಿವೃದ್ಧಿಪಡಿಸಿದ ಜಮೀನಿನ ವಿಸ್ತಿರ್ಣವನ್ನು ಪರಿಷ್ಕರಿಸಿ, ಈ ಮೊದಲಿದ್ದ ಪರಿಹಾರದ ಜಮೀನನ್ನು 9583 ಚದರ ಅಡಿಯಿಂದ 10,781 ಚದರ ಅಡಿಗೆ ವಿಸ್ತರಿಸಿ ಮಾ.9ರಂದು ಆದೇಶ ಹೊರಡಿಸಿದೆ. ಹೆಚ್ಚಿನ ಜಮೀನು ನೀಡುವಂತೆ ರಾಜ್ಯ ಸರಕಾರಕ್ಕೆ ಮೂರು ವರ್ಷಗಳಿಂದಲೂ ರೈತರು/ಭೂ ಮಾಲೀಕರು ಒತ್ತಾಯಿಸುತ್ತಿದ್ದರು.


COMMERCIAL BREAK
SCROLL TO CONTINUE READING

ನಡೆಸುವ ಭೂಸ್ವಾಧೀನ ಪ್ರಕ್ರಿಯೆಯಲ್ಲಿನ ಭೂಮಾಲೀಕರಿಗೆ(Land Owner) ಮಾತ್ರ ಈ ಯೋಜನೆ ಅನ್ವಯಿಸುತ್ತದೆ.


KSRTC Bus: ಶಿವಸೇನೆ ಪುಂಡಾಟಿಕೆ; ಕರ್ನಾಟಕ-ಮಹಾರಾಷ್ಟ್ರ ಬಸ್ ಸಂಚಾರ ಬಂದ್!


ಕೆಐಎಡಿಬಿ ಕೈಗಾರಿಕಾ ಪ್ರದೇಶಾಭಿವೃದ್ಧಿಗೆ ರಾಜ್ಯದಲ್ಲಿ ಹೆಚ್ಚಿನ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಪರಿಹಾರವಾಗಿ ನಗದು ನೀಡಲು ಕೆಐಎಡಿಬಿ(KIADB)ಯಲ್ಲಿ ಆರ್ಥಿಕ ಮೂಲ ಸಾಕಷ್ಟಿಲ್ಲದ ಹಿನ್ನೆಲೆಯಲ್ಲಿ 2007ರ ಆ.13ರಂದು ಸರಕಾರ ಈ ಯೋಜನೆ ಜಾರಿಗೆ ತಂದಿತ್ತು. ಈ ಮೊದಲು ಒಂದು ಬಾರಿ ಆದೇಶವನ್ನು ಪರಿಷ್ಕರಿಸಿದ್ದ ರಾಜ್ಯ ಸರಕಾರ, ಇದೀಗ ಎರಡನೇ ಬಾರಿ ಆದೇಶ ಪರಿಷ್ಕರಿಸಿದೆ. ಕೈಗಾರಿಕಾ ಪ್ರದೇಶಾಭಿವೃದ್ಧಿಗೆ ನೀಡಿದ ಭೂಪ್ರದೇಶದಲ್ಲೇ ಅಭಿವೃದ್ಧಿಪಡಿಸಿದ ಜಮೀನು ಪಡೆಯಲು ರೈತರಿಗೆ ಅವಕಾಶ ಕಲ್ಪಿಸಲಾಗಿದ್ದು, ಅಭಿವೃದ್ಧಿಪಡಿಸಿದ ಜಮೀನು ಲಭ್ಯವಿಲ್ಲದ ಪಕ್ಷದಲ್ಲಿ ನಗದು ರೂಪದಲ್ಲಿಯೇ ರಾಜ್ಯ ಸರಕಾರ ಭೂ ಪರಿಹಾರ ನೀಡಲಿದೆ.


Petrol-Diesel: 'ಬಡ, ಮಧ್ಯಮ ವರ್ಗಕ್ಕೆ ಕೈಗೆಟುಕುವ ದರದಲ್ಲಿ ಸಿಗಲಿದೆ ಶೀಘ್ರದಲ್ಲಿ ಪೆಟ್ರೋಲ್'


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.