ಬೆಂಗಳೂರು: ಅಖಿಲ ಭಾರತ ಕಾರ್ಮಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷೆಯಾದ ಆರ್.ಗಿರಿಜಮ್ಮ ಅವರು, ಮತ್ತಿತರೆ ಮಹಿಳೆಯರು ಕಾಂಗ್ರೆಸ್ ನಾಯಕರ ಮೇಲೆ ದೂರು ಕೊಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ಇತ್ತೀಚೆಗೆ ಬಾಲಿವುಡ್ ನಟಿ, ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಸಂಸದರಾದ ಹೇಮಾ ಮಾಲಿನಿ ಅವರ ಬಗ್ಗೆ ಮಾನಹಾನಿಕರ ಹೇಳಿಕೆ ನೀಡಿದ್ದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸುರ್ಜೆವಾಲ ಹಾಗೂ ಮಹಿಳೆಯರು ಅಡುಗೆ ಮಾಡುವುದಕ್ಕೆ ಲಾಯಕ್ಕು ಎಂದು ಹೇಳಿದ್ದ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ಅವರ ವಿರುದ್ಧ ಅವರು ದೂರು ನೀಡಿದ್ದಾರೆ.


ಇದನ್ನೂ ಓದಿ-ಹಿಂದುತ್ವ -ಅಭಿವೃದ್ಧಿ ಎರಡೂ ನಮ್ಮ ಪಕ್ಷದಲ್ಲಿ ಇದೆ


ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಅವರು ಮುನ್ನಡೆಸಿದ ಅಖಿಲ ಭಾರತೀಯ ಕಾಂಗ್ರೆಸ್‌ ಪಕ್ಷದ ಅನೇಕ ನಾಯಕರು ಸಮಾಜದಲ್ಲಿ ಅತ್ಯಂತ ಗೌರವ, ಸದ್ಬಾವನೆಯಿಂದ ಗೌರವಿಸಲ್ಪಡುವ ಮಹಿಳೆಯರ ಬಗ್ಗೆ ಅಪಮಾನ ಮಾಡಿರುತ್ತಾರೆ ಹಾಗೂ ಮಹಿಳೆಯರ ಗೌರವಕ್ಕೆ ಧಕ್ಕೆ ಉಂಟು ಮಾಡುವಂತಹ ಹೇಳಿಕೆಗಳನ್ನು ಕೊಟ್ಟಿದ್ದು, ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅವರು ಮಹಿಳಾ ಆಯೋಗಕ್ಕೆ ನೀಡಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ.


ಸಂಸದರು, ಪ್ರಖ್ಯಾತ ನಟರೂ ಆಗಿರುವ ಹೇಮಾಮಾಲಿನಿ ಅವರ ಬಗ್ಗೆ ಕರ್ನಾಟಕ ಕಾಂಗ್ರೆಸ್‌ ಪಕ್ಷದ ಉಸ್ತುವಾರಿ ಹೊಂದಿರುವ ರಂದೀಪ್‌ ಸುರ್ಜೇವಾಲ ಅತ್ಯಂತ ಕೆಟ್ಟದ್ದಾಗಿ, ಹೇಮಾಮಾಲಿನಿ ಅವರ ತೇಜೋವಧೆ ಮಾಡಿ ಅವರ ವೈಯಕ್ತಿಕ ಚಾರಿತ್ರ್ಯಹರಣ ಮಾಡುವ ರೀತಿಯಲ್ಲಿ ಹೇಳಿಕೆ ನೀಡಿರುತ್ತಾರೆ.


ಇದನ್ನೂ ಓದಿ-ಕಾಯಕ ಯೋಗಿ ಮೋದಿಗೆ ವೋಟ್‌ ಹಾಕಲು ಜನ ಕಾಯ್ತಿದಾರೆ ಎಂದ ತೇಜಸ್ವಿ ಸೂರ್ಯ


"ನಾವೇಕೆ ಶಾಸಕ, ಸಂಸದರನ್ನು ಆಯ್ಕೆ ಮಾಡುತ್ತೇವೆ? ನಮ್ಮ ಪರ ದನಿ ಎತ್ತಲಿ ಅಂತ. ನಮ್ಮ ಪರವಾಗಿ ಕೆಲಸ ಮಾಡಲಿ ಅಂತ. ಆದರೆ, ಹೇಮಾಮಾಲಿನಿಯವರನ್ನು ನೆಕ್ಕಲು ಬಿಜೆಪಿಯವರು ಸಂಸದೆಯನ್ನಾಗಿ ಮಾಡುತ್ತಿದ್ದಾರೆಯೇ" ಎಂದು ರಂದೀಪ್‌ ಸುರ್ಜೆವಾಲ ಹೇಳಿಕೆ ನೀಡಿದ್ದರು. ಸುರ್ಜೇವಾಲ ಅವರು ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷದ ಉಸ್ತುವಾರಿ ಆಗಿರುವ ಕಾರಣದಿಂದ ಅವರ ಹೇಳಿಕೆ ರಾಜ್ಯದ ಮಹಿಳೆಯರ ಬಗ್ಗೆ ಅಪಮಾನ ಮಾಡಿದಂತೆ ಆಗಿರುತ್ತದೆ. ಇಂಥ ಚಾರಿತ್ರ್ಯಹೀನ ಹೇಳಿಕೆ ನೀಡಿರುವ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು ಎಂದು ಒತ್ತಾಯ ಮಾಡುತ್ತೇವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.


ಸ್ತ್ರೀಯರು ಅಡುಗೆ ಮಾಡುವುದಕ್ಕೆ ಲಾಯಕ್ಕು ಎಂದು ಹೇಳಿಕೆ ನೀಡಿರುವ ಕಾಂಗ್ರೆಸ್‌ ಪಕ್ಷದ ನಾಯಕರ ಸ್ತ್ರೀದ್ವೇಷಿ ಮನೋಭಾವವನ್ನು ತೋರಿಸುತ್ತದೆ. ಆಕೆಗೆ ಮಾತನಾಡಲು ಬರುವುದಿಲ್ಲ. ಆಕೆ ಮನೆಯಲ್ಲಿ ಇರಲು ಲಾಯಕ್ಕು ಎಂದು ಶಾಮನೂರು ಶಿವಶಂಕರಪ್ಪ ಅವರು ದಾವಣಗೆರೆಯ ಬಿಜೆಪಿ ಅಭ್ಯರ್ಥಿಯನ್ನು ಗುರಿಯಾಗಿಸಿ ಹೇಳಿರುವುದು ಅಕ್ಷಮ್ಯ ಹಾಗೂ ಸಂವಿಧಾನಕ್ಕೆ ಎಸಗಿದ ಅಪಚಾರ. ಹೀಗಾಗಿ ಇವರ ವಿರುದ್ಧವೂ ಕಠಿಣ ಕೈಗೊಳ್ಳಬೇಕು ಎಂದು ಒತ್ತಾಯ ಮಾಡುತ್ತೇವೆ ಎಂದು ಗಿರಿಜಮ್ಮ ಅವರು ದೂರಿನಲ್ಲಿ ಮನವಿ ಮಾಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.