ಬೆಂಗಳೂರು: ಭಾರತವು ಪ್ರಸ್ತುತ ಚೀನಾದಿಂದ ಆಮದಾಗುತ್ತಿರುವ ಲಿಥಿಯಂ ಮೇಲಿನ ಅವಲಂಬನೆಯನ್ನು ಸಂಪೂರ್ಣವಾಗಿ ತೊಡೆದುಹಾಕಲು ಪ್ರಯತ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತ ಅರ್ಜೆಂಟೀನಾದ ಕಂಪನಿಯೊಂದಿಗೆ (India Argentina agreement for lithium) ಒಪ್ಪಂದ ಮಾಡಿಕೊಂಡಿದೆ. ಇದುವರೆಗೆ ಚೀನಾದಿಂದಾ ಭಾರಿ ಪ್ರಮಾಣದಲ್ಲಿ ಲಿಥಿಯಂ ಅನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಏತನ್ಮಧ್ಯೆ ಕರ್ನಾಟಕ ರಾಜ್ಯದಲ್ಲಿ ಭಾರತಕ್ಕೆ ಭಾರಿ ಲಿಥಿಯಂ ಭಂಡಾರ ದೊರೆತಿದೆ. ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಗಳಲ್ಲಿ ಬಳಸಲಾಗುವ ಲಿಥಿಯಂ ನಿಕ್ಷೇಪ ಬೆಂಗಳೂರಿನಿಂದ ಸುಮಾರು 100 ಕಿ. ಮೀ ದೂರದಲ್ಲಿರುವ ಮಂಡ್ಯ ಜಿಲ್ಲೆಯಲ್ಲಿ ದೊರೆತಿದೆ. ಇದರಿಂದ ದೇಶದಲ್ಲಿ ಇ-ವೆಹಿಕಲ್ (e-Vehicle) ಗಳ ಉತ್ಪಾದನೆ ಹಾಗೂ ಬಳಕೆ ಹೆಚ್ಚಿಸುವಲ್ಲಿ ಭಾರಿ ಸಹಕಾರ ದೊರೆಯಲಿದೆ. ಈ ಭಂಡಾರ 1600 ಟನ್ ಗಳಷ್ಟು ಇರಲಿದೆ ಎಂದು ವಿಜ್ಞಾನಿಗಳು ಅಂದಾಜು ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನು ಓದಿ- ದೇಶದ ಹೆದ್ದಾರಿಗಳಲ್ಲಿ ಚಲಿಸಲಿವೆ Electric ವಾಹನಗಳು


ಆಂಗ್ಲ ಮಾಧ್ಯಮದ ವೃತ್ತಪತ್ರಿಕೆಯೊಂದರಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ಇತರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಪತ್ತೆಯಾಗಿರುವ ಲಿಥಿಯಂ ನಿಕ್ಷೇಪ ಕಡಿಮೆಯಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಚಿಲಿ ದೇಶದಲ್ಲಿ ದೊರೆಯುವ 86 ಲಕ್ಷ ಟನ್, ಆಸ್ಟ್ರೇಲಿಯಾದ 28 ಲಕ್ಷ ಟನ್, ಅರ್ಜೆಂಟೀನಾ 17 ಲಕ್ಷ ಟನ್, ಪೋರ್ಚುಗೀಸ್ ನ 60 ಸಾವಿರ ಟನ್ ಭಂಡಾರಗಳಿಗೆ ಇದನ್ನು ಹೋಲಿಸಿದರೆ 14,100 ಟನ್ ಅಧಿಕವಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.


ಇದನ್ನು ಓದಿ- 69 ಸಾವಿರ ಪೆಟ್ರೋಲ್ ಪಂಪ್‌ಗಳಲ್ಲಿ E-vehicle ಚಾರ್ಜಿಂಗ್ ಕಿಯೋಸ್ಕ್ ಅಳವಡಿಕೆ!


ಈ ಕುರಿತು ಮಾಹಿತಿ ನೀಡಿರುವ ಭಾರತೀಯ ವಿಜ್ಞಾನ ಸಂಸ್ಥೆಯ ಎಮಿರೇಟ್ಸ್ ಪ್ರಾಧ್ಯಾಪಕ ಮತ್ತು ಬ್ಯಾಟರಿ ತಂತ್ರಜ್ಞಾನ ತಜ್ಞ ಆನ್ ಮುನಿಚಂದ್ರಯ್ಯ, "ಇದುವರೆಗೆ ದೊರೆತ ಮಾಹಿತಿಯ ಪ್ರಕಾರ, ಸುಮಾರು 30,300 ಟನ್ ಎಲ್ಐ 20 ಮಂಡ್ಯದ ಸುಮಾರು 5 ಕೀ.ಮೀ ವ್ಯಾಪ್ತಿಯಲ್ಲಿ ಇರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಇದು ಸುಮಾರು 14,100  ಟನ್ ಲೀಥಿಯಂ ಲೋಹಕ್ಕೆ ಸಮಾನವಾಗಿದೆ ಎಂದು ಅವರು ಹೇಳಿದ್ದಾರೆ.


ಇದನ್ನು ಓದಿ- ಬ್ಯಾಟರಿಗಳಿಲ್ಲದೆ ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡಬಹುದು ಎಂದ ಕೇಂದ್ರ ಸರ್ಕಾರ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.