ಬೆಂಗಳೂರು: ಇತ್ತೀಚೆಗೆ ಪುಲ್ವಾಮಾದಲ್ಲಿ ಭಯೋತ್ಪಾದಕರ ಆತ್ಮಾಹುತಿ ದಾಳಿಯಿಂದ ನಮ್ಮ ಯೋಧರು ಆತ್ಮಸ್ಥೈರ್ಯ ಕಳೆದುಕೊಂಡಿಲ್ಲ. ಪಾಕ್ ಜೊತೆ ಯಾವುದೇ ಸಂದರ್ಭದಲ್ಲಿ ಯುದ್ಧಕ್ಕೆ ನಾವು ಸಿದ್ಧ ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಪುಲ್ವಾಮ ಉಗ್ರರ ದಾಳಿಯಿಂದ ನಾವು ನೈತಿಕ ಸ್ಥೈರ್ಯ ಕಳೆದುಕೊಂಡಿಲ್ಲ. ನಮ್ಮ ಮೇಲೆ ದಾಳಿ ನಡೆದ ದಿನವೇ ಯೋಧರು ಪ್ರತಿದಾಳಿಗೆ ಸಿದ್ಧರಿದ್ದರು. ಈಗಲೂ ಯೋಧರು ದಾಳಿ ನಡೆಸಲು ತಯಾರಿದ್ದಾರೆ. ಅದಕ್ಕೆ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಕೂಡ ಕೈಜೋಡಿಸಲಿದ್ದಾರೆ. ಸದ್ಯ ನಿರಂತರವಾಗಿ ಕಾಶ್ಮೀರದ ಅಧಿಕಾರಿಗಳ ಜತೆ ಸಂಪರ್ಕದಲ್ಲಿದ್ದೇವೆ. ಹೀಗಾಗಿ ಯಾವುದೇ ಸಂದರ್ಭದಲ್ಲೂ ಯುದ್ದಕ್ಕೆ ಸಿದ್ದರಿದ್ದೇವೆ ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​​​ ತಿಳಿಸಿದ್ದಾರೆ.


ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿನ ದಾಳಿ ಬಗ್ಗೆ ಸಾರ್ವಜನಿಕವಾಗಿ ಹೆಚ್ಚು ಹೇಳಲು ಸಾಧ್ಯವಿಲ್ಲ. ಈ ಹಿಂದೆ ಮುಂಬೈನಲ್ಲಿಯೂ ದಾಳಿ ನಡೆದಿತ್ತು. ಆಗ ಪಾಕಿಸ್ತಾನಕ್ಕೆ ಸಾಕ್ಷಿ ಸಮೇತ ಸಾದರಪಡಿಸಿದ್ದೆವು. ಆದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಆದರೆ ಇದು ದೇಶದಲ್ಲಿ ಯಾರು ಕೂಡ ಊಹಿಸದಂತಹ ದುರ್ಘಟನೆ. ಹೀಗಾಗಿ ಭಯೋತ್ಪಾದನೆ ನಿರ್ಮೂಲನೆಗೆ ಪಣತೊಡಲೇಬೇಕಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.