Horticultural Mela 2024 : ಬೆಂಗಳೂರಿನ ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ ಮೂರು ದಿನಗಳ ತೋಟಗಾರಿಕೆ ಮೇಳ 2024 ಆಯೋಜನೆ ಮಾಡಲಾಗಿದ್ದು, ಮಾರ್ಚ್ 5 ರಿಂದ ಪ್ರಾರಂಭವಾಗಿ 6 ,7 ರವರೆಗೆ ನಡೆಯಲಿದೆ. 


COMMERCIAL BREAK
SCROLL TO CONTINUE READING

ಈ ಬಾರಿಯ ತೋಟಗಾರಿಕೆ ಮೇಳವನ್ನು 'ಸುಸ್ಥಿರ ಅಭಿವೃದ್ಧಿಗಾಗಿ ನವೀನ ಪೀಳಿಗೆಯ ತೋಟಗಾರಿಕೆ ತಂತ್ರಜ್ಞಾನಗಳು' ಎಂಬ ಶೀರ್ಷಿಕೆಯಡಿ ಆಯೋಜನೆ ಮಾಡಲಾಗಿದೆ. ಕರ್ನಾಟಕ ಮಾತ್ರವಲ್ಲ ಬೇರೆ ರಾಜ್ಯಗಳಿಂದಲೂ ಸಹ ರೈತರು, ಆಸಕ್ತರು ಆಗಮಿಸುತ್ತಾರೆ. ಆದ್ದರಿಂದ 50 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಐಸಿಎಆರ್ ಉಪ ಪ್ರಧಾನ ವ್ಯವಸ್ಥಾಪಕ (ತೋಟಗಾರಿಕೆ ವಿಜ್ಞಾನ) ಸಂಜಯ್ ಕುಮಾರ್ ಸಿಂಗ್ ಹೇಳಿದ್ದಾರೆ.


ಇದನ್ನು ಓದಿ : Deepika Padukone : ಬಾಜಿರಾವ್ 'ಮಸ್ತಾನಿ'  ಬೆಡಗಿಯ ಟ್ರೆಡಿಷನಲ್ ಫೋಟೋಸ್ ವೈರಲ್ 


ಸ್ಟಾರ್ಟ್ ಅಪ್‌ಗಳಿಗೆ ಆದ್ಯತೆ: 
 ಬೀಜ ಸಂಸ್ಕರಣಾ ಘಟಕ, ಇನ್‌ಕ್ಯುಬೇಷನ್ ಸೆಂಟರ್‌ಗಳ ಬಗ್ಗೆಯೂ ಆಸಕ್ತರಿಗೆ ಮೇಳದಲ್ಲಿ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗಿದ್ದು, ತೋಟಗಾರಿಕೆ ಕ್ಷೇತ್ರದಲ್ಲಿ ಯುವ ರೈತರು ಹಾಗೂ ತಂತ್ರಜ್ಞರಿಗೆ ಪ್ರೋತ್ಸಾಹ ನೀಡಲು ಈ ಬಾರಿ ಸ್ಟಾರ್ಟಪ್‌ಗಳಿಗೆ ಒತ್ತು ನೀಡಲಾಗಿದೆ.  ಈ ಬಾರಿಯ ತೋಟಗಾರಿಕೆ ಮೇಳದಲ್ಲಿ 300ಕ್ಕೂ ಅಧಿಕ ಮಳಿಗೆಗಳು ಇರಲಿವೆ. ಹೊಸ ತಳಿಗಳು, ಹೊಸ ಆವಿಷ್ಕಾರಗಳ ಕುರಿತು ರೈತರಿಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಲಾಗುತ್ತದೆ. ಈರುಳ್ಳಿ ನಾಟಿ ಮಾಡುವ ಯಂತ್ರ, ಅಧಿಕ ಇಳುವರಿಯ ಆರ್ಕಾ ನಿಹಿರ ಮೆಣಸಿನಕಾಯಿ ಹಾಗೂ ಆರ್ಕಾ ಬೃಂಗರಾಜ ಸೊರಗು ರೋಗ ನಿರೋಧಕ ತಳಿಗಳನ್ನು ಮೇಳದಲ್ಲಿ ಕಾಣಬಹುದು.


ಈ ಬಾರಿಯ ಮೇಳದ ಪ್ರಮುಖ ಆಕರ್ಷಣೆ ಮಿಲೆಟ್ ಜ್ಯೂಸ್. ಈಗಾಗಲೇ ಡ್ರ್ಯಾಗನ್ ಪ್ರೂಟ್ ತಳಿಯನ್ನು ಅಭಿವೃದ್ಧಿಪಡಿಸಿ ರೈತರಿಗೆ ವಿತರಿಸುತ್ತಿದೆ. ಇದೀಗ ಈ ಹಣ್ಣಿಗೆ ಕೆಲವು ಸಿರಿಧಾನ್ಯಗಳನ್ನು ಮಿಶ್ರಣ ಮಾಡಿ ಮಿಲೆಟ್ ಜ್ಯೂಸ್ ತಯಾರಿಸುವ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗಿದೆ. ವಿಶಿಷ್ಟ ರುಚಿ ಮತ್ತು ಅನುಭವ ನೀಡುವ ಈ ಜ್ಯೂಸ್ ಮೇಳದ ಆಕರ್ಷಣೆಯಾಗಿದೆ.


ಇದನ್ನು ಓದಿ : Mysore : ಬಹುನಿರೀಕ್ಷಿತ ನವೀಕೃತ ಅಶೋಕಪುರಂ ರೈಲು ನಿಲ್ದಾಣ ಮಾರ್ಚ್ 4ರಂದು ಉದ್ಘಾಟನೆ


150ಕ್ಕೂ ಮಳಿಗೆಗಳು ಈಗಾಗಲೇ ನೋಂದಣಿ ಮಾಡಿಕೊಂಡಿದ್ದು, ಸ್ಮಾರ್ಟ್‌ ನೀರಾವರಿ, ಸಸ್ಯ ಆರೋಗ್ಯ ಕ್ಲಿನಿಕ್, ಸಸಿಗಳನ್ನು ಖರೀದಿ ಮಾಡಲು ಮಾಲ್ ಮಾದರಿಯ ನರ್ಸರಿ ವ್ಯವಸ್ಥೆಯನ್ನು ಮೇಳದಲ್ಲಿ ಮಾಡಲಾಗಿದೆ. ಮೇಳದಲ್ಲಿ ಪಾಳ್ಗೊಳ್ಳಲು ಆನ್‌ಲೈನ್ ಮೂಲಕ ನೋಂದಣಿ ವ್ಯವಸ್ಥೆ ಮಾಡಲಾಗಿದೆ. 


ತೋಟಗಾರಿಕೆ ಮೇಳದ ಕುರಿತು ರೈತರಿಗೆ ಮಾಹಿತಿ ನೀಡಲು ಮತ್ತು ಸಹಾಯಕ್ಕಾಗಿ ಸಹಾಯವಾಣಿಯನ್ನು ಆರಂಭಿಸಲಾಗಿದೆ. 
ಹೆಚ್ಚಿನ ಮಾಹಿತಿಗಾಗಿ ಈ 9403891704 ಸಂಖ್ಯೆಗೆ ಕರೆ ಮಾಡಬಹುದು ಎಂದು ತಿಳಿಸಲಾಗಿದೆhttps://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.