ನವದೆಹಲಿ: ಭಾರತದ ನಿರುದ್ಯೋಗ ದರವು ಫೆಬ್ರವರಿಯಲ್ಲಿ 7.78% ಕ್ಕೆ ಏರಿದೆ, ಇದು 2019 ರ ಅಕ್ಟೋಬರ್‌ನಿಂದ ಗರಿಷ್ಠವಾಗಿದೆ ಮತ್ತು ಜನವರಿಯಲ್ಲಿ 7.16% ರಷ್ಟಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಮ್‌ಐಇ) ಸೋಮವಾರ ಬಿಡುಗಡೆ ಮಾಡಿದ ಮಾಹಿತಿ ತಿಳಿಸಿದೆ. ಇದು ಆರ್ಥಿಕತೆಯ ಮಂದಗತಿಯ ಪರಿಣಾಮವನ್ನು ಪ್ರತಿಬಿಂಬಿಸುತ್ತದೆ.


COMMERCIAL BREAK
SCROLL TO CONTINUE READING

2019 ರ ಕೊನೆಯ ಮೂರು ತಿಂಗಳಲ್ಲಿ ಆರು ವರ್ಷಗಳಲ್ಲೇ ಹೆಚ್ಚು ನಿಧಾನಗತಿಯಲ್ಲಿ ಭಾರತದ ಆರ್ಥಿಕತೆಯು ವಿಸ್ತರಿಸಿದೆ, ಜಾಗತಿಕ ಕರೋನಾ ವೈರಸ್ ಹೆಚ್ಚಳದಿಂದಾಗಿ ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆಯ ಬೆಳವಣಿಗೆ ಮತ್ತಷ್ಟು ಕುಸಿಯಲಿದೆ ಎಂದು ಆರ್ಥಿಕ ತಜ್ಞರು ಭವಿಷ್ಯ ನುಡಿದಿದ್ದಾರೆ.


ಗ್ರಾಮೀಣ ಪ್ರದೇಶಗಳಲ್ಲಿ, ನಿರುದ್ಯೋಗ ದರವು ಹಿಂದಿನ ತಿಂಗಳಲ್ಲಿ 5.97% ರಿಂದ ಫೆಬ್ರವರಿಯಲ್ಲಿ 7.37% ಕ್ಕೆ ಏರಿತು, ಆದರೆ ನಗರ ಪ್ರದೇಶಗಳಲ್ಲಿ ಇದು 9.70% ರಿಂದ 8.65% ಕ್ಕೆ ಇಳಿದಿದೆ ಎಂದು ಮುಂಬೈ ಮೂಲದ ಖಾಸಗಿ ಥಿಂಕ್-ಟ್ಯಾಂಕ್ ಹೇಳಿದೆ.