Indira Canteen Latest Update: ಬಡ, ಶ್ರಮಿಕ‌ ವರ್ಗದವರಿಗೆ ಆಸರೆ ಆಗಿದ್ದ ಇಂದಿರಾ ಕ್ಯಾಂಟೀನ್ ರಾಜ್ಯದಲ್ಲಿ ಮತ್ತೆ ಸದ್ದು ಮಾಡುತ್ತಿದೆ. ರಾಜ್ಯದಲ್ಲಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಸಿದ್ದರಾಮಯ್ಯ ಸರ್ಕಾರ, ರಾಜಧಾನಿಯಲ್ಲಿ ವಾರ್ಡ್‌ಗೊಂದರಂತೆ ಕ್ಯಾಂಟೀನ್ ತೆರೆಯಲು ಯೋಜಿಸುತ್ತಿದೆ. ಇನ್ನೊಂದೆಡೆ, ಇಂದಿರಾ ಕ್ಯಾಂಟೀನ್‌ ಫುಡ್ ಮೆನು ಬದಲಾವಣೆಗೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. 


COMMERCIAL BREAK
SCROLL TO CONTINUE READING

ಹೌದು, ನಿತ್ಯ ಸಾವಿರಾರು ಬಡ ಕೂಲಿ ಕಾರ್ಮಿಕರಿಗೆ, ಶ್ರಮಿಕರಿಗೆ ಕಡಿಮೆ ಹಣದಲ್ಲಿ ಊಟ ದೊರೆಯುವಂತೆ ಮಾಡಿದ್ದ ಇಂದಿರಾ ಕ್ಯಾಂಟೀನ್ ಸಿದ್ದು ಸರ್ಕಾರ ಆರಂಭವಾಗುತ್ತಿದ್ದಂತೆ ಮರು ಜೀವ ಪಡೆದುಕೊಳ್ಳುತ್ತಿದೆ. ಈ ಮಧ್ಯೆ, ಇಂದಿರಾ ಕ್ಯಾಂಟೀನ್‌ನ ಮೆನು ಬದಲಾವಣೆಗೆ ಒತ್ತಾಯವೂ ಕೇಳಿಬಂದಿದ್ದು ಅಪೌಷ್ಟಿಕತೆ ಹೋಗಲಾಡಿಸಲು ವಾರಕ್ಕೊಮ್ಮೆ ಕಡಿಮೆ ಬೆಲೆಯಲ್ಲಿ ಮೊಟ್ಟೆಯನ್ನೂ ವಿತರಿಸುವಂತೆ ಮನವಿ ಮಾಡಿದ್ದಾರೆ. 


ಇದನ್ನೂ ಓದಿ- ಗ್ಯಾರಂಟಿ ಯೋಜನೆಗೆ ಕಾದಿದ್ದ ಜನರಿಗೆ ಶಾಕ್


ಇನ್ಮುಂದೆ ಇಂದಿರಾ ಕ್ಯಾಂಟೀನ್‌ನಲ್ಲಿ ಸಿಗುತ್ತಾ ನಾನ್‌ವೆಜ್‌..? 
ಸಾಮಾಜಿಕ ಕಾರ್ಯಕರ್ತ ಅಮರೇಶ್ ಎಂಬುವವರು, ಇನ್ಮುಂದೆ ಇಂದಿರಾ ಕ್ಯಾಂಟೀನ್‌ನಲ್ಲಿ ವಾರಕ್ಕೊಮ್ಮೆಯಾದರೂ ಕಡಿಮೆ ಬೆಲೆಯಲ್ಲಿ ಮೊಟ್ಟೆ ನೀಡುವಂತೆ ಒತ್ತಾಯಿಸಿದ್ದರೆ, ಇನ್ನೊಂದೆಡೆ ಮೊಟ್ಟೆ ಜೊತೆ ಮಾಂಸಹಾರ ನೀಡುವಂತೆ ಮನವಿಯೂ, ವಾರಕ್ಕೊಮ್ಮೆ ಚಿಕನ್ ಇಲ್ಲವೇ ಮಟನ್ ಕಡಿಮೆ‌ ಬೆಲೆಗೆ ಕೊಡುವಂತೆ ಮನವಿ ಮಾಡಿದ್ದಾರೆ. 


ಇದನ್ನೂ ಓದಿ- ನಮ್ಮ ಕೊಡಗಿನಲ್ಲಿ ತಲೆ ಎತ್ತಿದೆ ದಕ್ಷಿಣ ಭಾರತದ ಎರಡನೇ ಗ್ಲಾಸ್‌ ಸ್ಕೈ ವಾಕ್ ಬ್ರಿಡ್ಜ್


ವಾಸ್ತವವಾಗಿ, ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಷ್ಠಿತ ಜನಪರ ಯೋಜನೆಗಳಿಂದಾಗಿ ಅನ್ನರಾಮಯ್ಯ ಎಂದೇ ಖ್ಯಾತಿ ಪಡೆದಿದ್ದಾರೆ. ಈ ಮೊದಲು ತಮ್ಮ ಹಿಂದಿನ ಸರ್ಕಾರದಲ್ಲಿ  ರಾಜ್ಯದಲ್ಲಿ ಯಾರೂ ಕೂಡ ಒಂದೊತ್ತಿನ ಊಟ ಇಲ್ಲದೆ ಇರಬಾರದೆಂದು ಅನ್ನಭಾಗ್ಯ ಯೋಜನೆಯನ್ನು ಆರಂಭಿಸಿ ಅನ್ನರಾಮಯ್ಯ ಎಂದೇ ಖ್ಯಾತಿ ಪಡೆದಿದ್ದರು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ