ಬೆಂಗಳೂರು: ನಗರದ ಮೆಜೆಸ್ಟಿಕ್ ಮತ್ತು ಯಶವಂತಪುರ ಬಸ್ ನಿಲ್ದಾಣಗಳಲ್ಲಿ ತುರ್ತು ಆರೋಗ್ಯ ಸೇವೆ ಕಲ್ಪಿಸಲು 'ಇಂದಿರಾ ಕ್ಲಿನಿಕ್' ಅನ್ನು ತೆರೆಯಲು ಬಿಎಂಟಿಸಿ ಮುಂದಾಗಿದೆ. ಈ ಕ್ಲಿನಿಕ್ ನಲ್ಲಿ ವೈದ್ಯರು ತುರ್ತು ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆಯನ್ನು ನೀಡುತ್ತಾರೆ.


COMMERCIAL BREAK
SCROLL TO CONTINUE READING

ಆರೋಗ್ಯ ಇಲಾಖೆ ಸಹಯೋಗದಲ್ಲಿ ಇಂದಿರಾ ಹೆಸರಿನ ಕ್ಲಿನಿಕ್ ಅನ್ನು ಡಿ. 2 ರಿಂದ ತೆರೆಯಲು ಬಿಎಂಟಿಸಿ ಯೋಜನೆ ರೂಪಿಸಿದೆ. ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಆರೋಗ್ಯ ಏರು-ಪೇರಾದರೆ ಟ್ರಾನ್ಸ್ಸೆಟ್ ಚಿಕಿತ್ಸೆಗಾಗಿ ಕ್ಲಿನಿಕ್ ಒಂದನ್ನು ತೆರೆಯಲು ಬಿಎಂಟಿಸಿ ಮುಂದಾಗಿದೆ. ಇದಕ್ಕೆ 'ಇಂದಿರಾ ಟ್ರಾನ್ಸ್ಸೆಟ್ ಕ್ಲಿನಿಕ್' ಎಂದು ಹೆಸರಿಡಲಾಗುವುದು ಎಂದು ಹೇಳಲಾಗುತ್ತಿದೆ. 


ಆದರೆ ಇದಕ್ಕೆ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಬ್ರ್ಯಾಂಡ್ ಇಂದಿರಾ ಚುನಾವಣೆಯ ಗಿಮಿಕ್ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಬಿಎಂಟಿಸಿ ಈ ಹಿಂದೆಯೂ ಟ್ರಾನ್ಸ್ಸೆಟ್ ಕ್ಲಿನಿಕ್ ತೆರೆಯಬೇಕು ಎಂಬ ಆಲೋಚನೆಯನ್ನು ಹೊಂದಿತ್ತು. ಆದರೆ ಇಂದಿರಾ ಬ್ರ್ಯಾಂಡ್ ಹೆಸರಿನಲ್ಲಿ ಟ್ರಾನ್ಸ್ಸೆಟ್ ಕ್ಲಿನಿಕ್ ತೆರೆಯುತ್ತಿರುವುದು ಕೆಲವರ ಆಕ್ರೋಶಕ್ಕೆ ಕಾರಣವಾಗಿದೆ.