ಬೆಂಗಳೂರು: ಕಳೆದ ರಾತ್ರಿ 8:07 ರಲ್ಲಿ ದುಷ್ಕರ್ಮಿಗಳಿಂದ ಬಲಿಯಾದ ಸಾಹಿತಿ, ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಅಂತಿಮ ಸಂಸ್ಕಾರವು ಚಾಮರಾಜ ಪೇಟೆಯ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿ. 


COMMERCIAL BREAK
SCROLL TO CONTINUE READING

ಈ ಕುರಿತು ಮಾತನಾಡಿರುವ ಗೌರಿ ತಮ್ಮ ಇಂದ್ರಜಿತ್ ಲಂಕೇಶ್ ನನ್ನ ಅಕ್ಕ ಎಂದಿಗೂ ಧಾರ್ಮಿಕ ಆಚರಣೆಗಳ ಮೇಲೆ ನಂಬಿಕೆ ಇಟ್ಟಿರಲಿಲ್ಲ. ಹೀಗಾಗಿ ಅವಳ ಅಂತ್ಯ ಕ್ರಿಯೆಯಲ್ಲಿ ಯಾವುದೇ ಆಚರಣೆಗಳನ್ನು ಪಾಲಿಸುವುದಿಲ್ಲ ಎಂದು ತಿಳಿಸಿದ್ದಾರೆ. 


ಸಹೋದರಿಯ ತತ್ವಗಳಿಗೆ ಧಕ್ಕೆ ತರುವ ಯಾವುದೇ ನಿಯಮಗಳನ್ನು ಅಂತ್ಯ ಕ್ರಿಯೆಯಲ್ಲಿ ಮಾಡುವುದಿಲ್ಲ. ಪಾರ್ಥಿವ ಶರೀರದ ಮೇಲೆ ಪುಷ್ಪವನ್ನಿರಿಸಿ ಅಂತ್ಯ ಸಂಸ್ಕಾರ ಮಾಡಲಾಗುವುದು ಎಂದು ಇಂದ್ರಜಿತ್ ಮಾಧ್ಯಮಗಳಿಗೆ ಸ್ಪಷ್ಟ ಪಡಿಸಿದ್ದಾರೆ.


ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ರಾಮಲಿಂಗಾರೆಡ್ಡಿ ಸೇರಿದಂತೆ ಅನೇಕ ರಾಜಕೀಯ, ಸಾಹಿತ್ಯ, ಸಿನಿಮಾ ರಂಗದ ಹಲವು ಗಣ್ಯರು ಗೌರಿ ಲಂಕೇಶ್ ಅವರ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದ್ದಾರೆ.