ಬೆಂಗಳೂರು: ನಿನ್ನೆ ಮಾರ್ಗಸೂಚಿ (Covid Guidelines) ಬಿಡುಗಡೆ ಮಾಡಿದ್ದೇವೆ. ಜನರಿಗೆ ಮನವಿ ಮಾಡ್ತೀನಿ. ಮುಂದಿನ 4 ರಿಂದ 6 ವಾರಗಳ ಕಾಲ ಸೋಂಕು ಹೆಚ್ಚಾಗಿ ಹರಡುತ್ತೆ. ಈ ಅಲೆ ದೀರ್ಘ ಕಾಲ ಇರೋದಿಲ್ಲ. ವೇಗವಾಗಿ ಹರಡುತ್ತೆ. ಅಷ್ಟೇ ಬೇಗ ಮುಕ್ತಾಯ ಆಗುತ್ತೆ. ಹೀಗಾಗಿ ಕನಿಷ್ಟ 4 ರಿಂದ 6 ವಾರ ಜನ ಎಚ್ಚರಿಕೆವಹಿಸಬೇಕು ಎಂದು ಆರೋಗ್ಯ ಸಚಿವ ಸುಧಾಕರ್ (Health Minister Sudhakar)ಹೇಳಿದರು.


COMMERCIAL BREAK
SCROLL TO CONTINUE READING

ಯಾರು ಆತಂಕವಾಗೋದು ಬೇಡ:


ಕೊರೊನಾ ಬಂದ್ರು ಯಾರು ಆತಂಕವಾಗೋದು ಬೇಡ. ಒಮಿಕ್ರಾನ್ ಶ್ವಾಸಕೋಶಕ್ಕೆ ಹೋಗೋದು ಕಡಿಮೆ. ಗಂಟಲಲ್ಲಿ ಮಾತ್ರ ಒಮಿಕ್ರಾನ್ ಇರುತ್ತೆ. ಹೀಗಾಗಿ ಯಾರು ಆತಂಕ ಆಗುವ ಅವಶ್ಯಕತೆ ಇಲ್ಲ. ಎರಡು ‌ಡೋಸ್ ಲಸಿಕೆ ಪಡೆದರೆ ಒಮಿಕ್ರಾನ್ ಪ್ರಭಾವ ಕಡಿಮೆ ಇರುತ್ತೆ. ಹೀಗಾಗಿ ಜನ ಎರಡು ಡೋಸ್ ಲಸಿಕೆ ಪಡೆಯಬೇಕು ಎಂದರು.


ಇದನ್ನೂ ಓದಿ: 'ನೀರಿಗಾಗಿ ನಡಿಗೆ', ಪಾದಯಾತ್ರೆ ಮಾಡೇ ಮಾಡುತ್ತೇವೆ: ಸರ್ಕಾರಕ್ಕೆ ಡಿಕೆಶಿ ಸವಾಲ್


60 ವರ್ಷ ಮೇಲ್ಪಟ್ಟವರಿಗೆ 3ನೇ ಡೋಸ್ ಜನವರಿ 10 ರಿಂದ ಕೊಡಲಾಗುತ್ತೆ. ಕೊರೊನಾ ವಾರಿಯರ್ಸ್ ಗೆ 3ನೇ ಡೋಸ್ ಲಸಿಕೆ ಹಾಕಲಾಗುತ್ತೆ. ಫ್ರಂಟ್ ಲೈನ್ ವಾರಿಯರ್ಸ್ ಗೂ 3 ನೇ ಡೋಸ್ ಲಸಿಕೆ ಕೊಡಲಾಗುತ್ತೆ ಎಂದು ತಿಳಿಸಿದರು.


15 ರಿಂದ 18 ವರ್ಷದವರಿಗೆ ಲಸಿಕೆ ವಿಚಾರ:


15-18 ಲಸಿಕೆ ಈವರೆಗೂ 3 ಲಕ್ಷ 50 ಸಾವಿರ ಮಕ್ಕಳಿಗೆ ಲಸಿಕೆ ಹಾಕಲಾಗಿದೆ. ಲಸಿಕೆ ಹಾಕೋದ್ರಲ್ಲಿ ನಾವು ದೇಶದಲ್ಲಿ 3 ನೇ ಸ್ಥಾನದಲ್ಲಿದ್ದೇವೆ. ರಾಜ್ಯದಲ್ಲಿ ಈಗಾಗಲೇ 25% ಮಕ್ಕಳಿಗೆ ಲಸಿಕೆ ನೀಡಲಾಗಿದೆ. 28 ದಿನಗಳು ಆದ ಮೇಲೆ ಎರಡನೇ ಡೋಸ್ ಕೊಡ್ತೀವಿ. ಕೋವ್ಯಾಕ್ಸಿನ್ ಮಾತ್ರ ಎರಡು ಡೋಸ್ ಕೊಡಲಾಗುತ್ತೆ ಎಂದು ಹೇಳಿದರು.


ಕೊರೊನಾ ನಿಯಂತ್ರಣ ಸಂಬಂಧ ಐಎಎಸ್, ಐಪಿಎಸ್ ಅಧಿಕಾರಿಗಳ ನೇಮಕ:


ಬೆಂಗಳೂರಿನಲ್ಲಿ ಕೋವಿಡ್ ಹೆಚ್ಚಳ ಹಿನ್ನೆಲೆ ಕೊರೊನಾ ನಿಯಂತ್ರಣ ಸಂಬಂಧ ಐಎಎಸ್, ಐಪಿಎಸ್ ಅಧಿಕಾರಿಗಳ ನೇಮಕ ಮಾಡಲಾಗಿದೆ. ಏರ್ಪೋರ್ಟ್‌ ಕೋವಿಡ್ ಉಸ್ತುವಾರಿ ಸಿ. ಶಿಖಾ ಅವರನ್ನು ನೇಮಕ ಮಾಡಲಾಗಿದೆ.  


ಖಾಸಗಿ ವೈದ್ಯಕೀಯ ಸಂಸ್ಥೆಯಲ್ಲಿ ಹಾಸಿಗೆ ಮೀಸಲು ಉಸ್ತುವಾರಿಗಳ ಪಟ್ಟಿ ಇಂತಿದೆ:


  • ಪೂರ್ವವಲಯ -1 ಕ್ಯಾ. ಮಣಿವಣ್ಣನ್ ಮತ್ತು ಅಲೋಕ್ ಕುಮಾರ್.

  • ಪೂರ್ವ ವಲಯ-2 ಮೊಹಮ್ಮದ್ ಮೋಹಿಸಿನ್ ಮತ್ತು ಹರಿಶೇಖರನ್.

  • ಮಹದೇವಪುರ- ಉಮಾ ಮಹದೇವನ್ ಮತ್ತು ಹಿತೇಂದ್ರ.

  • ಪಶ್ಚಿಮ ವಲಯ- ಎಂ.ಟಿ ರೇಜು ಮತ್ತು ಕೆ.ಟಿ ಬಾಲಕೃಷ್ಣ.

  • ದಕ್ಷಿಣ ವಲಯ- ರಾಜೇಂದ್ರ ಚೋಳನ್ ಮತ್ತು ಡಾ. ರಾಮಚಂದ್ರ ರಾವ್.

  • ಆರ್.ಆರ್ ನಗರ- ಡಾ. ವಿ ರಾಮ್ ಪ್ರಸಾತ್ ಮನೋಹರ್ ಮತ್ತು ಹೇಮಂತ್ ನಿಂಬಾಳ್ಕರ್.

  • ಯಲಹಂಕ ಮತ್ತು ದಾಸರ ಹಳ್ಳಿ- ಏಕ್ ರೂಪ್ ಕೌರ್ ಮತ್ತು ಎಸ್ ರವಿ.

  • ಬಿಬಿಎಂಪಿ ವ್ಯಾಪ್ತಿಯ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಬೆಡ್ ಕಾದಿರಿಸೋ ಬಗ್ಗೆ- ಉಸ್ತುವಾರಿ ಎನ್ ಜಯರಾಮ್.

  • ಟ್ರೇಸಿಂಗ್, ಅನ್ ಟ್ರೇಸ್ಡ್ ಪೇಶೆಂಟ್- ಉಸ್ತುವಾರಿ ಡಿ.ಸಿ.ಪಿ ಅನುಚೇತ್.

  • ಕೋವಿಡ್ ಮೃತರ ಅಂತ್ಯಸಂಸ್ಕಾರ- ರಾಜೇಂದ್ರ ಕುಮಾರ್ ಕಠಾರಿಯಾ.

  • ಕಂಟೋನ್ಮೆಂಟ್ ಝೋನ್- ಉಸ್ತುವಾರಿ ಸತ್ಯವತಿ.


ಇದನ್ನೂ ಓದಿ: BDA: ಭೂಗಳ್ಳರಿಗೆ ಬಿಗ್ ಶಾಕ್..! ₹300 ಕೋಟಿ ಮೌಲ್ಯದ ಜಾಗ ವಶಕ್ಕೆ..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.