ಬೆಂಗಳೂರು: ಶತಮಾನದ ಪ್ರವಾಹದಿಂದ ಕೇರಳ ತತ್ತರಿಸಿದೆ. ಕೇರಳ ಹೊರತಾಗಿ ಕರ್ನಾಟಕದ ಹೆಚ್ಚಿನ ಭಾಗವೂ ಪ್ರವಾಹದಿಂದ ನಲುಗಿದೆ. ಕೇರಳಕ್ಕೆ ದೇಶದ ಎಲ್ಲಾ ಭಾಗದ ಜನರೂ ತಮ್ಮ ಸಹಾಯ ಹಸ್ತ ಚಾಚಿದ್ದಾರೆ. ಕೇರಳದ ಹೊರತಾಗಿ, ಕರ್ನಾಟಕದ ಹೆಚ್ಚಿನ ಭಾಗವೂ ಪ್ರವಾಹವನ್ನು ಎದುರಿಸುತ್ತಿದೆ. ಇಂತಹ ಒಂದು ಸನ್ನಿವೇಶದಲ್ಲಿ, ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್.ಆರ್. ನಾರಾಯಣ್ ಮೂರ್ತಿಯವರ ಪತ್ನಿ ಸುಧಾ ಮೂರ್ತಿಯವರು ಪ್ರವಾಹ ಪೀಡಿತರಿಗೆ ಖುದ್ದಾಗಿ ಅಗತ್ಯ ಸಾಮಾಗ್ರಿಗಳನ್ನು ಪ್ಯಾಕ್ ಮಾಡುತ್ತಿರುವ ದೃಶ್ಯ ವೈರಲ್ ಪಡೆಯುತ್ತಿದೆ. ಇದರಲ್ಲಿ, ಅವರು ಪ್ರವಾಹ ಸಂತ್ರಸ್ತರಿಗೆ ಸರಕುಗಳನ್ನು ಪ್ಯಾಕಿಂಗ್ ಮಾಡುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಈ ದೃಶ್ಯದಲ್ಲಿ ಒಂದು ದೊಡ್ಡ ಹಾಲ್ ನಲ್ಲಿ ಪ್ರವಾಹ ಸಂತ್ರಸ್ತರಿಗಾಗಿ ಅಗತ್ಯವಿರುವ ಸಾಮಾಗ್ರಿಗಳನ್ನು ಪ್ಯಾಕ್ ಮಾಡಲಾಗುತ್ತಿದೆ. ಸುಧಾಮೂರ್ತಿ ಕೆಲಸಗಾರರ ಜೊತೆ ಸೇರಿ ಖುದ್ದಾಗಿ ಪ್ಯಾಕಿಂಗ್ ಕೆಲಸದಲ್ಲಿ ನಿರತರಾಗಿದ್ದಾರೆ. ಕರ್ನಾಟಕ ಬಿಜೆಪಿ ನಾಯಕ ಮತ್ತು ಕೇಂದ್ರ ಸಚಿವ ಸದಾನಂದ ಗೌಡ ಸೇರಿದಂತೆ ಹಲವು ಜನರು ಈ ವೀಡಿಯೊ ಹಂಚಿಕೊಂಡಿದ್ದಾರೆ.



ಕೊಡಗಿನಲ್ಲಿ ಉಂಟಾದ ಭೀಕರ ಪ್ರವಾಹದಿಂದಾಗಿ ಸಾವಿರಾರು ಜನ ನಿರಾಶ್ರಿತರಾಗಿದ್ದು, ಸಂತ್ರಸ್ತರಿಗೆ ಪರಿಹಾರ ಒದಗಿಸುವ ಕಾರ್ಯ ನಡೆಯುತ್ತಿದೆ. ರಾಜ್ಯದಾದ್ಯಂತ ಜನರು ಕೊಡಗಿನ ಜನರ ಕಣ್ಣೀರಿಗೆ ಮರುಗಿದ್ದಾರೆ. ಹಣಸಂಪಾದಿಸುವುದು ದೊಡ್ಡದಲ್ಲ, ಆದರೆ ಒಂದು ಪ್ರತಿಷ್ಠಿತ ಕಂಪನಿಯಲ್ಲಿ, ಆಯಕಟ್ಟಿನ ಹುದ್ದೆಯಲ್ಲಿದ್ದೂ ಮಾನವೀಯತೆ ಮರೆಯದೇ ಬದುಕುವುದು, ಕಣ್ಣೀರಿಗೆ ಮಿಡಿಯುವುದು ಆದರ್ಶದ ಬದುಕು ನಡೆಸುವುದು ಮುಖ್ಯ ಎಂಬುದನ್ನು ಇನ್ಫೋಸಿಸ್ ಪ್ರತಿಷ್ಠಾನದ ಚೇರ್ ಪರ್ಸನ್ ಸುಧಾಮೂರ್ತಿ ಸಾಬೀತು ಪಡಿಸಿದ್ದಾರೆ.