ಮದುವೆ ಎಂದರೆ ಪತ್ನಿ ಮೇಲೆ ಅತ್ಯಾಚಾರ ಎಸೆಗಲು ಇರುವ ಅನುಕೂಲತೆಯಲ್ಲ- ಕರ್ನಾಟಕ ಹೈಕೋರ್ಟ್
ಪತ್ನಿಯ ಮೇಲೆ ಅತ್ಯಾಚಾರವೆಸಗಿದ ಪತಿ ಮೇಲೆ ಪ್ರಕರಣ ದಾಖಲಿಸಲು ಕರ್ನಾಟಕ ಹೈಕೋರ್ಟ್ (Karnataka High Court) ಬುಧುವಾರದಂದು ಅನುಮತಿ ನೀಡಿದೆ.ವಿವಾಹದ ಸಂಸ್ಥೆಯಲ್ಲಿ ಯಾವುದೇ ವಿಶೇಷ ಪುರುಷ ಸವಲತ್ತುಗಳನ್ನು ಅನುಮತಿಸುವುದಿಲ್ಲ ಮತ್ತು ಅತ್ಯಾಚಾರವನ್ನು ಅತ್ಯಾಚಾರವೆಂದೆ ಪರಿಗಣಿಸಬೇಕು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಬೆಂಗಳೂರು: ಪತ್ನಿಯ ಮೇಲೆ ಅತ್ಯಾಚಾರವೆಸಗಿದ ಪತಿ ಮೇಲೆ ಪ್ರಕರಣ ದಾಖಲಿಸಲು ಕರ್ನಾಟಕ ಹೈಕೋರ್ಟ್ (Karnataka High Court) ಬುಧುವಾರದಂದು ಅನುಮತಿ ನೀಡಿದೆ.ವಿವಾಹದ ಸಂಸ್ಥೆಯಲ್ಲಿ ಯಾವುದೇ ವಿಶೇಷ ಪುರುಷ ಸವಲತ್ತುಗಳನ್ನು ಅನುಮತಿಸುವುದಿಲ್ಲ ಮತ್ತು ಅತ್ಯಾಚಾರವನ್ನು ಅತ್ಯಾಚಾರವೆಂದೆ ಪರಿಗಣಿಸಬೇಕು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: "ಇದು ಹಿಜಾಬ್ ಗೆ ನೀಡಿದ ತಡೆಯಲ್ಲ, ನಮ್ಮ ಶಿಕ್ಷಣದ ತಡೆ" ಹೈ ಕೋರ್ಟ್ ಮೆಟ್ಟಿಲೇರಿದ್ದ ವಿದ್ಯಾರ್ಥಿನಿಯರ ಅಳಲು
ಪತಿ ತಮ್ಮ ಮಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.ಈ ಹಿನ್ನಲೆಯಲ್ಲಿ ಅರ್ಜಿ ವಿಚಾರಣೆಯನ್ನು ನಡೆಸಿದ ನ್ಯಾಯಾಲಯವು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿರುವ ಆರೋಪಗಳನ್ನು ಒಳಗೊಂಡಂತೆ ಪತಿ ವಿರುದ್ಧದ ಎಲ್ಲಾ ಆರೋಪಗಳನ್ನು ರದ್ದುಗೊಳಿಸಲಾಗುವುದಿಲ್ಲ ಎಂದು ನ್ಯಾಯಾಲಯವು ಹೇಳಿದೆ.
ಇದನ್ನೂ ಓದಿ: ದೇಶದ್ರೋಹಿ ಶಕ್ತಿಗಳನ್ನು ಸಹಿಸಲಾಗುವುದಿಲ್ಲ -ಸಿಎಂ ಬಸವರಾಜ ಬೊಮ್ಮಾಯಿ
ಮದುವೆಯೊಳಗೆ ಲೈಂಗಿಕ ಚಟುವಟಿಕೆಗೆ ವಿನಾಯಿತಿ ನೀಡುವ ಭಾರತೀಯ ದಂಡ ಸಂಹಿತೆಯ ವಿಭಾಗವನ್ನು ನ್ಯಾಯಾಲಯವು ಪರಿಶೀಲಿಸಿತು, ಅಸಮಾನತೆಯ ಕಾನೂನು ಕಾರಣಗಳು ಮತ್ತು ಮದುವೆಯ ಸಂಸ್ಥೆಯಿಂದ ನೀಡಲಾದ ಪುರುಷ ಸವಲತ್ತುಗಳಾಗಿವೆ.ಈಗ ಈ ವಿಚಾರವಾಗಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಮದುವೆ ಎಂದರೆ ಪತ್ನಿ ಮೇಲೆ ಅತ್ಯಾಚಾರ ಎಸೆಗಲು ಇರುವ ಅನುಕೂಲತೆಯಲ್ಲ, ಅತ್ಯಚಾರ ಅತ್ಯಚಾರ ಅಷ್ಟೇ ಎಂದು ಹೇಳಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.