ಯೋಗಾಸನ ಎಂಬುದು ಎಲ್ಲರಿಗೂ ಒಲಿಯುವಂಥದ್ದಲ್ಲ. ಸಾಕಷ್ಟು ಏಕಾಗ್ರತೆ, ಪರಿಶ್ರಮ, ಕಠಿಣ ಅಭ್ಯಾಸ ಬೇಕೇ ಬೇಕು. ಇದಕ್ಕಾಗಿ ತಪಸ್ಸು ಮಾಡಬೇಕು. ಅದರಲ್ಲಿಯೂ ಬಳ್ಳಿಯಂತೆ ದೇಹ ಬಳುಕಿಸುವ ಈಕೆ ಸಾಧನೆ ಮೆಚ್ಚುವಂಥದ್ದು. ಜಿಲ್ಲೆ, ರಾಜ್ಯ ಮಟ್ಟದಲ್ಲಿಯೇ ಸಾಧನೆ ಮಾಡುವುದಂತೂ ಸುಲಭವಲ್ಲ. ಅಂಥಹದರಲ್ಲಿ ಈಕೆ ರಾಷ್ಟ್ರಮಟ್ಟದಲ್ಲಿಯೂ ತನ್ನದೇ ಆದ ಛಾಪು ಮೂಡಿಸಿದ್ದಾಳೆ. ಜೊತೆಗೆ ಅಂತಾರಾಷ್ಟ್ರೀಯ ಯೋಗ ಚಾಂಪಿಯನ್ ಆಗಿದ್ದಾಳೆ. 


COMMERCIAL BREAK
SCROLL TO CONTINUE READING

ಹರಿಹರದ ಯೋಗರಾಜ್ ಮತ್ತು ಶಾಂಬವಿ ದಂಪತಿ ಪುತ್ರಿ ಕೆ.ವೈ.ಸೃಷ್ಟಿ13 ವರ್ಷದವಳು . ಹರಿಹರದಲ್ಲಿನ ಶ್ರೀ ನೀಲಕಂಠೇಶ್ವರ ಪಬ್ಲಿಕ್ ಸ್ಕೂಲ್ ನಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.


ಇದನ್ನು ಓದಿ : Priya Mani : ಚಂದದ ಸೀರೆಯಲ್ಲಿ ಚಾರುಲತಾ : ಫೋಟೋಸ್ ಇಲ್ಲಿವೆ ನೋಡಿ 


ಮನಸ್ಸು ಮಾಡಿದರೆ ಸಾಧ್ಯ ಎಂಬಂತೆ ಈಕೆಯು ತಾಯಿ ಹಾಕಿಕೊಟ್ಟ ಮಾರ್ಗದಲ್ಲಿ ನಡೆದಿದ್ದಾಳೆ. ಸೃಷ್ಟಿ ತಾಯಿ ಸಹ ಯೋಗ ಶಿಕ್ಷಕಿ. ತಾಯಿ ಶಾಂಭವಿ ಇಷ್ಟೊಂದು ಸಾಧನೆ ಮಾಡದಿದ್ದರೂ ತಾಯಿಯ ಕನಸು ನನಸು ಮಾಡುತ್ತಿರುವ ಸೃಷ್ಟಿ ಯೋಗಾಸನದಲ್ಲಿ ಸೃಷ್ಟಿಸಿರುವ ದಾಖಲೆ ಮೆಚ್ಚುವಂಥದ್ದು.


ಒಟ್ಟು 52 ಚಿನ್ನದ ಪದಕಗಳನ್ನು ಗೆದ್ದಿರುವ ಈಕೆಗೆ ಗುರು ಮತ್ತು ತರಬೇತುದಾರರು ತಾಯಿಯೇ ಆಗಿದ್ದಾರೆ. ನೇಪಾಳ, ಜಮ್ಮುವಿನಲ್ಲಿ ನಡೆದ ಯೋಗಾಸನ ಪಂದ್ಯಾವಳಿಗಳಲ್ಲಿ ಕಂಚು ಮತ್ತು ಚಿನ್ನದ ಪದಕ ಗೆದ್ದಿದ್ದಾಳೆ. ಕಳೆದ 3 ವರ್ಷಗಳಿಂದ ಯೋಗಾಭ್ಯಾಸ ಮಾಡುತ್ತಿರುವ ಈಕೆ ತನ್ನ ದೇಹವನ್ನು ಹೇಗೆ ಬೇಕಾದರೂ ತಿರುಗಿಸುವ ಸಾಮರ್ಥ್ಯ ಹೊಂದಿದ್ದಾಳೆ. ಈ ಯೋಗ ಎಲ್ಲರಿಗೂ ಒಲಿಯುವಂಥದ್ದಲ್ಲ. ಸಾಕಷ್ಟು ಪರಿಶ್ರಮ, ಶ್ರಮ ಬೇಕು. ಇದಕ್ಕೆ ಕಠಿಣ ಅಭ್ಯಾಸ ಇರಲೇಬೇಕು. 


ಆನ್‌ಲೈನ್ ವಿಶ್ವ ಯೋಗ ಕಪ್ "ದಿ ಬೆಸ್ಟ್ ಪರ್ಫಾರ್ಮೆನ್ಸ್ ಯೋಗ ಪ್ರಶಸ್ತಿ"ಯೂ ಈಕೆಗೆ ಲಭಿಸಿದೆ. ಇಲ್ಲಿಯವರೆಗೆ 150 ಸ್ಪರ್ಧೆಗಳಲ್ಲಿ ಭಾಗವಹಿಸಿರುವ ಸೃಷ್ಟಿ ಒಂದಲ್ಲಾ ಒಂದು ಪದಕವನ್ನು ಗೆದ್ದುಕೊಂಡೇ ಬರುತ್ತಿದ್ದಾಳೆ. ಈ ಪೈಕಿ ಅತಿ ಹೆಚ್ಚು ಗೋಲ್ಡ್ ಮೆಡಲ್ ಗೆದ್ದಿರುವುದು ಸಾಧನೆಗೆ ಹಿಡಿದ ಕೈಗನ್ನಡಿ. 


ಇದನ್ನು ಓದಿ : Sidharth Malhotra : ಬ್ಲ್ಯಾಕ್ ಕೋಟ್ ನಲ್ಲಿ 'ಶೇರ್ ಶಾ' : ಫೋಟೋಸ್ ಇಲ್ಲಿವೆ


ಜೈಪುರದಲ್ಲಿ ನಡೆದ ಭಾರತದ ಸಾಂಪ್ರದಾಯಿಕ ಯೋಗಾಸನ 67ನೇ ರಾಷ್ಟ್ರೀಯ ಶಾಲಾ ಕ್ರೀಡಾಕೂಟದಲ್ಲಿ 4ನೇ ಸ್ಥಾನವನ್ನು ಗೆದ್ದಿದ್ದಾಳೆ. ಇದುವರೆಗೆ 150 ಪಂದ್ಯಾವಳಿಗಳಲ್ಲಿ ಪಾಲ್ಗೊಂಡು ಚಿನ್ನದ ಪದಕ-52, ಬೆಳ್ಳಿ-4, ಕಂಚು-4, ಪ್ರಶಸ್ತಿಗಳು 20 ಬಂದಿದ್ದು, ಆರು ದಾಖಲೆಗಳನ್ನು ಮಾಡಿದ ಶ್ರೇಯಸ್ಸುಇವಳದ್ದು. 


ನನ್ನ ತಾಯಿ ಯೋಗ ಶಿಕ್ಷಕಿ. ಬೇರೆ ಮಕ್ಕಳಿಗೂ ಹೇಳಿಕೊಡುತ್ತಿದ್ದನ್ನು ನೋಡುತ್ತಿದ್ದೆ. ನನಗೂ ಯೋಗ ಮಾಡಬೇಕೆಂಬ ಆಸೆ ಬಂತು. ತಾಯಿಯ ಬಳಿ ಕೇಳಿಕೊಂಡೆ. ಕೊರೊನಾ ಸೋಂಕು ಕಾಣಿಸಿಕೊಂಡಾಗ ಎರಡನೇ ಲಾಕ್‌ಡೌನ್ ವೇಳೆ ನನಗೂ ಕೊರೊನಾ ಸೋಂಕು ತಗುಲಿತ್ತು ಎಂದು ಸಾಧಕಿ ಸೃಷ್ಟಿ ಹೇಳಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ