IPS Officer Transfer: 11 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಸರ್ಕಾರದ ಆದೇಶ
ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿರುವ ರಾಜ್ಯ ಸರ್ಕಾರ 11 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸೋಮವಾರ ಆದೇಶ ಹೊರಡಿಸಿದೆ.
ಬೆಂಗಳೂರು: ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿರುವ ರಾಜ್ಯ ಸರ್ಕಾರ 11 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸೋಮವಾರ ಆದೇಶ ಹೊರಡಿಸಿದೆ.
ಈ ಬಗ್ಗೆ ಅಧಿಸೂಚನೆ ಹೊರಡಿಸಿರುವ ರಾಜ್ಯ ಸರ್ಕಾರ, ವಿವಾದಕ್ಕೆ ಸಿಲುಕಿದ್ದ ಬೆಂಗಳೂರಿನ ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಅವರನ್ನು ಬೆಂಗಳೂರಿನ KSRPಗೆ ವರ್ಗಾವಣೆ ಮಾಡಿದೆ. ಐಪಿಎಸ್ ಅಧಿಕಾರಿ ಮಾಲಿನಿ ಕೃಷ್ಣಮೂರ್ತಿಯವರನ್ನು ಬೆಂಗಳೂರಿನ ಆಂತರೀಕ ವಿಭಾಗದ ಎಡಿಜಿಪಿಯಾಗಿ ವರ್ಗಾಯಿಸಿದೆ.
ಇದನ್ನೂ ಓದಿ: ಜನಸಾಮಾನ್ಯರಿಗೆ ಮತ್ತೊಂದು ಶಾಕಿಂಗ್!: ಶೀಘ್ರವೇ ನಂದಿನ ಹಾಲಿನ ದರ 3 ರೂ. ಹೆಚ್ಚಳ
KSRPಯ ಎಡಿಜಿಪಿ ರವಿ ಎಸ್ ಅವರನ್ನು ಬೆಂಗಳೂರಿನ ಪೊಲೀಸ್ ಅಂಡ್ ಪ್ರಿನ್ಸಿಪಲ್ ಸೆಕ್ರಟೆರಿ(PCAS) ಐಜಿಪಿಯನ್ನಾಗಿ ವರ್ಗಾವಣೆ ಮಾಡಲಾಗಿದೆ. ಅಜಯ್ ಹೀಲೋರಿವರನ್ನು DCREಯ ಎಸ್ಪಿಯಾಗಿ ನೇಮಿಸಲಾಗಿದೆ. ಅದೇ ರೀತಿ ಬೆಂಗಳೂರಿನ ಎಸಿಬಿಯ ಎಸ್ಪಿಯಾಗಿದ್ದಂತ ಯತೀಶ್ ಚಂದ್ರ ಜಿ.ಹೆಚ್ ಅವರನ್ನು ಕ್ರೈಂ-3 ವಿಭಾಗದ ಡಿಸಿಪಿಯಾಗಿ ನೇಮಿಸಲಾಗಿದೆ.
ಕಲಬುರಗಿಯ ಎಸಿಬಿಯ ಎಸ್ಪಿಯಾಗಿದ್ದ ಅಮರನಾಥ್ ರೆಡ್ಡಿ ವೈ ಅವರನ್ನು ಅದೇ ಜಿಲ್ಲೆಯ ಆಂತರೀಕ ವಿಭಾಗದ ಎಸ್ಪಿಯಾಗಿ ನೇಮಿಸಲಾಗಿದೆ. ಬಳ್ಳಾರಿಯ ಎಸಿಬಿ ಎಸ್ಪಿ ಶ್ರೀಹರಿ ಬಾಬು ಬಿ.ಎಲ್.ಅವರನ್ನು ಕರ್ನಾಟಕ ಲೋಕಾಯುಕ್ತ ಎಸ್ಪಿಯಾಗಿ ನೇಮಕ ಮಾಡಲಾಗಿದೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ರಸ್ತೆ ಪಕ್ಕದ ಗೂಡಂಗಡಿಯಲ್ಲಿ ಟೀ ಕುಡಿದ ಸಚಿನ್ ತೆಂಡೂಲ್ಕರ್
ಡಾ.ಶೋಭಾರಾಣಿಯವರನ್ನು ಎಸ್ಪಿ ಎಸಿಬಿಯಿಂದ ಎಸ್ಪಿ ಬಿಎಂಟಿಎಫ್ ವರ್ಗಾಯಿಸಲಾಗಿದೆ. ಸುಜೀತ್ ಎಸ್ಪಿ ಎಸಿಬಿಯಿಂದ ಎಸ್ಪಿ ಲೋಕಾಯುಕ್ತಕ್ಕೆ ಮತ್ತು ರಾಮ್ ಎಲ್. ಅರಸಿದ್ದಿಯವರನ್ನು ವಿಜಯಪುರದ ASPಯಿಂದ ಎಸ್ಪಿ ಲೋಕಾಯುಕ್ತಕ್ಕೆ ಮತ್ತು ಬಾಬಸಾಬ್ ನೇಮಗೌಡ್ ಬೆಳಗಾವಿಯ ಎಸ್ಪಿ ಎಸಿಬಿಯಿಂದ ಅದೇ ಜಿಲ್ಲೆಯ ಎಸ್ಪಿ ಇಂಟಲಿಜೆನ್ಸ್ ಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.