ಜೆಡಿಎಸ್ ಗೆ ಸೇರಲಿದ್ದಾರೆಯೇ ಸುದೀಪ್?
ಬೆಂಗಳೂರು: ದಕ್ಷಿಣ ಭಾರತದಲ್ಲಿ ಸಿನಿಮಾ ಮತ್ತು ರಾಜಕೀಯ ಎರಡು ಬಿಡಲಾಗದ ನಂಟು ಎಂದು ಹೇಳಬಹುದು.ಈಗ ಅಂತಹ ಸಂಗತಿಯ ಮುಂದುವರಿದ ಭಾಗವಾಗಿ ಕಿಚ್ಚ ಸುದೀಪ್ ಸುದ್ದಿಯಲ್ಲಿದ್ದಾರೆ.
ಹೌದು,ಇತ್ತೀಚೆಗೆ ಕುಮಾರಸ್ವಾಮಿಯವರ ಮನೆಗೆ ನಟ ಸುದೀಪ್ ಭೇಟಿ ನೀಡಿರುವುದು ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿದೆ.ಕಾರಣವಿಷ್ಟೇ ಇದೆ ಮೇ 12 ರಂದು ಕರ್ನಾಟಕ ವಿಧಾನಸಭಾ ಚುನಾವಣೆ ಇರುವುದರಿಂದ ಈ ಭೇಟಿ ಇದಕ್ಕೆ ಇನ್ನಷ್ಟು ಪುಷ್ಟಿಯನ್ನು ನೀಡುತ್ತಿದೆ.
ಆದರೆ ರಾಜಕೀಯಕ್ಕೆ ಸೇರುವ ವಿಚಾರವನ್ನು ಸಾರಾಸಗಾಟಾಗಿ ತಿರಸ್ಕರಿಸಿರುವ ಸುದೀಪ,ಆದರೆ ಭೇಟಿಯ ಸಂದರ್ಭದಲ್ಲಿ ರಾಜಕೀಯದ ಕುರಿತಾಗಿಯೂ ಕೂಡ ಚರ್ಚಿಸಿದ್ದಾರೆ ಎಂದು ಸುದ್ದಿ ಮೂಲಗಳು ತಿಳಿಸಿವೆ.
ಸುದೀಪ್ ಮತ್ತು ಕುಮಾರ್ ಸ್ವಾಮಿಯವರ ಭೇಟಿಯು ಪ್ರಮುಖವಾಗಿ ಮಾಜಿ ಪ್ರಧಾನಿ ದೇವೇಗೌಡರವರು ನಟ ಸುದೀಪ್ ರವರಿಗೆ ಜೆಡಿಎಸ್ ಸೇರುವಂತೆ ಮನವಿ ಮಾಡಿದ ನಂತರ ನಡೆದಿದೆ ಎಂದು ತಿಳಿದುಬಂದಿದೆ.