ಉಡುಪಿ: ಇಂದು ಬೆಳಿಗ್ಗೆ ವಿಧಿವಶರಾದ ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶಿರೂರು ಮಠದ ಲಕ್ಷ್ಮೀವರತೀರ್ಥ ಶ್ರೀಗಳಿಗೆ ವಿಷಪ್ರಾಶನ ಮಾಡಿಸಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. 


COMMERCIAL BREAK
SCROLL TO CONTINUE READING

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಮಣಿಪಾಲದ ಕೆಎಂಸಿ ಆಸ್ಪತ್ರೆ ವೈದ್ಯ ಡಾ.ಅವಿನಾಶ್ ಶೆಟ್ಟಿ ಅವರು, ಸ್ವಾಮೀಜಿ ದೇಹದಲ್ಲಿ ವಿಷದ ಅಂಶ ಪತ್ತೆಯಾಗಿರುವುದು ಹಲವು ಪರೀಕ್ಷೆಗಳಿಂದ ತಿಳಿದುಬಂದಿತ್ತು. ಇದೀಗ ಅವರು ವಿಧಿವಶರಾಗಿರುವುದರಿಂದ ಅವರ ಸಾವಿನ ಬಗ್ಗೆ ಹಲವು ಪ್ರಶ್ನೆಗಳು ಮೂಡಬಹುದು. ಹಾಗಾಗಿ ಮರಣೋತ್ತರ ಪರೀಕ್ಷೆಗೆ ಸ್ವಾಜಿಗಳ ದೇಹವನ್ನು ಒಳಪಡಿಸುತ್ತಿದ್ದೇವೆ ಎಂದು ಹೇಳಿದರು.


ಉಡುಪಿಯ ಶಿರೂರು ಶ್ರೀ ವಿಧಿವಶ


ಬುಧವಾರ ಬೆಳಗ್ಗೆ ತೀವ್ರ ರಕ್ತವಂತಿ ಮತ್ತು ಹೊಟ್ಟೆನೋವಿನಿಂದ ಬಳಲುತ್ತಿದ್ದ ಮಣಿಪಾಲದ ಕೆಎಂಸಿಗೆ ದಾಖಲಾಗಿದ್ದ ಶ್ರೀಗಳ ಆರೋಗ್ಯ ಬಿಗಡಾಯಿಸಿತ್ತು. ಹೀಗಾಗಿ ಶ್ರೀಗಳನ್ನು ವೆಂಟಿಲೇಟರ್ ನಲ್ಲಿ ಇಡಲಾಗಿತ್ತು. ಅಲ್ಲದೇ ಡ್ರಿಪ್ಸ್ ಕೂಡ ಹಾಕಲಾಗಿತ್ತು. ಆರಂಭದಲ್ಲಿ ಊಟದಲ್ಲಿ ವ್ಯತ್ಯಾಸವಾದ ಕಾರಣ ಶ್ರೀಗಳ ಆರೋಗ್ಯದಲ್ಲಿ ಏರುಪೇರಾಗಿರಬಹುದು ಎಂದು ವೈದ್ಯರು ಹೇಳಿದ್ದರು. ಆದರೆ, ಇಂದು ಬೆಳಿಗ್ಗೆ ಅವರ ದೇಹದಲ್ಲಿ ವಿಷದ ಅಂಶ ಕಂಡುಬಂದಿರುವುದು ಹಲವು ಪರೀಕ್ಷೆಯಿಂದ ಪತ್ತೆಯಾಗಿರುವುದಾಗಿ ಹೇಳಿದ್ದರು. ಆದರೆ ಅವರಿಗೆ ಯಾರಾದರೂ ಊಟದಲ್ಲಿ ವಿಷ ಬೇರೆಸಿದ್ದರೇ ಅಥವಾ ಸಹಜ ಸಾವೇ ಎಂಬುದು ಮರಣೋತ್ತರ ಪರೀಕ್ಷೆ ನಂತರ ತಿಳಿಯಲಿದೆ.