Karnataka Election Results 2024: ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಜನರಿಗೆ ಇಷ್ಟ ಆಗಿಲ್ಲ.. ಹೀಗಾಗಿ ಯೋಜನೆಗಳನ್ನು ನಿಲ್ಲಿಸುವುದೇ ಒಳ್ಳೆಯದು ಅಂತಾ ಕಾಂಗ್ರೆಸ್ ನಾಯಕ ಹಾಗೂ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಎಂ.ಲಕ್ಷ್ಮಣ್ ಹೇಳಿದ್ದಾರೆ. ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಮೊದಲ ಬಾರಿಗೆ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ʼರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದೇ ಒಳ್ಳೆಯದುʼ ಅಂತಾ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಕೇವಲ 9 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಹೀಗಾಗಿ ರಾಜ್ಯದ ಜನರಿಗೆ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಇಷ್ಟ ಆಗಿಲ್ಲ. ಬಿಜೆಪಿ ನಾಯಕರು ಗ್ಯಾರಂಟಿ ಯೋಜನೆಗಳ ವಿರುದ್ಧ ಮಾತಾಡಿದರು ಜನರು ಬೆಂಬಲಿಸಿದ್ದಾರೆ. ಹೀಗಾಗಿ ಜನರಿಗೆ ನಮ್ಮ ಗ್ಯಾರಂಟಿ ಯೋಜನೆಗಳು ಇಷ್ಟ ಆಗಿಲ್ಲ ಅಂತಾನೇ ಅಲ್ವಾ? ಗ್ಯಾರಂಟಿ ಯೋಜನೆ ಬಗ್ಗೆ ಸಿಎಂ ಸಿದ್ದರಾಮಯ್ಯನವರು ಮರು ಪರಿಶೀಲನೆ ಮಾಡಬೇಕು ಅಂತಾ ಒತ್ತಾಯಿಸಿದ್ದಾರೆ. ​


ಇದನ್ನೂ ಓದಿ: ಕರ್ನಾಟಕದ ಕಾಂಗ್ರೆಸ್‌ ನಾಯಕರ ವಿರುದ್ಧ ಗರಂ ಆದ ರಾಹುಲ್‌ ಗಾಂಧಿ!


ʼತಮಗೆ ಗ್ಯಾರಂಟಿ ಇಷ್ಟವಿಲ್ಲವೆಂದು ಲೋಕಸಭಾ ಚುನಾವಣಾ ಫಲಿತಾಂಶದ ಮೂಲಕ ಜರನು ತೋರಿಸಿಕೊಟ್ಟಿದ್ದಾರೆ. ಶೇ.70ರಷ್ಟು ಮೇಲ್ವರ್ಗದವರು ಈ ಗ್ಯಾರಂಟಿ ಯೋಜನೆ ಫಲಾನುಭವಿಗಳಾಗಿದ್ದು, 25 ಸಾವಿರ ರೂ. ಸಂಬಳ ಪಡೆಯುವ ವ್ಯಕ್ತಿಗೆ ಉಚಿತ ವಿದ್ಯುತ್‌ ಕೊಟ್ಟರೆ ಹೇಗೆ? ಅಂತಾ ಲಕ್ಷ್ಮಣ್‌ ಪ್ರಶ್ನಿಸಿದ್ದಾರೆ. ಈಗಲೂ ಗ್ಯಾರಂಟಿ ಹಣದಿಂದಲೇ ಜೀವನ ನಡೆಸುವ ಜನರಿದ್ದಾರೆ. ಅಂತಹವರನ್ನು ನೋಡಿ ಗ್ಯಾರಂಟಿ ಯೋಜನೆಗಳನ್ನು ನೀಡುವ ಅಗತ್ಯವಿದೆ. ಹುಣಸೂರಿನ ಹಲವು ಹಳ್ಳಿಗಳಲ್ಲಿ ಒಂದೇ ಸಮುದಾಯದವರಿದ್ದಾರೆ. ಆ ಹಳ್ಳಿಗಳಲ್ಲಿ ಬಿಜೆಪಿ ಅಭ್ಯರ್ಥಿಗೆ 600ಕ್ಕೂ ಹೆಚ್ಚು ಮತ ನೀಡಿದ್ರೆ, ನನಗೆ ಕೇವಲ 3, 7 ಮತ ನೀಡಿದ್ದಾರೆ. ಈ ಮೂಲಕ ಬಹಿರಂಗವಾಗಿಯೇ ಒಕ್ಕಲಿಗರ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಇದು ಜನರಿಗೆ ನಮ್ಮ ಗ್ಯಾರಂಟಿ ಯೋಜನೆಗಳು ಇಷ್ಟವಾಗಿಲ್ಲವೆಂಬುದನ್ನು ತೋರಿಸುತ್ತದೆ ಅಂತಾ ಲಕ್ಷ್ಮಣ್‌ ಹೇಳಿದ್ದಾರೆ.


ʼನನ್ನನ್ನು ಸೋಲಿಸಿದ್ದು ಬೇಜಾರಿಲ್ಲ. ಆದರೆ ಸಿಎಂ ಸಿದ್ದರಾಮಯ್ಯನವರು ಏನ್ ತಪ್ಪು ಮಾಡಿದ್ದಾರೆ? ತವರು ಜಿಲ್ಲೆಯಲ್ಲೇ ಅವರಿಗೆ ಎಷ್ಟು ಬಾರಿ ಅಪಮಾನ ಮಾಡುತ್ತೀರಿ? ಈ ರೀತಿಯ ಮನಸ್ಥಿತಿ ಇದ್ದರೆ ಹೇಗೆ? ಸಿಎಂ ಆಗಿದ್ದ ಬಸವರಾಜ್‌ ಬೊಮ್ಮಾಯಿ ೫ ರೂ.ನಾದ್ರೂ ಕೊಟ್ಟಿದ್ರಾ? ಆದರೆ ಸಿದ್ದರಾಮಯ್ಯನವರು ಎಷ್ಟು ಕೆಲಸ ಮಾಡಿದ್ದಾರೆ. ಜಯದೇವ ಆಸ್ಪತ್ರೆ ಸೇರಿದಂತೆ ಮೈಸೂರಿಗೆ ಹಲವಾರು ಕೊಡುಗೆ ನೀಡಿದ್ದಾರೆ ಅಂತಾ ಹೇಳಿದ್ದಾರೆ. 


ಇದನ್ನೂ ಓದಿ: ಬೆಂಗಳೂರಿನಲ್ಲಿ ಮುಂಬೈ ಮೂಲದ ಶಿಕ್ಷಣ ಸಂಸ್ಥೆಯಿಂದ ದೋಖಾ!


ಸಿದ್ದರಾಮಯ್ಯರಂತಹ ಕ್ಲೀನ್ ಇಮೇಜ್ ಇರುವ ಸಿಎಂ ದೇಶದಲ್ಲಿ ಬೇರೆ ಎಲ್ಲಾದ್ರೂ ಇದ್ದಾರಾ? ಸಾಹೇಬರು ಯಾವುದನ್ನೂ ಹೇಳಿಕೊಳ್ಳೋದಿಲ್ಲ. ಆದರೆ ಮೈಸೂರಿನ ಜನರು ಸಿದ್ದರಾಮಯ್ಯರಿಗೆ ಎಷ್ಟು ಬಾರಿ ನೋವು ಕೊಡುತ್ತೀರಿ ಅಂತಾ ಮತದಾರರ ವಿರುದ್ಧವೇ ಲಕ್ಷ್ಮಣ್ ಕಿಡಿಕಾರಿದ್ದಾರೆ. ಲಕ್ಷ್ಮಣ್‌ ಅವರ ಗ್ಯಾರಂಟಿ ಯೋಜನೆಗಳ ಕುರಿತ ಹೇಳಿಕೆಗೆ ಸೋಷಿಯಲ್‌ ಮೀಡಿಯಾದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಸೋತಿರುವ ಹತಾಷೆಯಿಂದ ಅವರು ಈ ರೀತಿ ಮಾತನಾಡುತ್ತಿದ್ದಾರೆ. ಇದು ಸರಿಯಲ್ಲವೆಂದು ನೆಟಿಜನ್ಸ್‌ ಕಿಡಿಕಾರಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.