ನವ ದೆಹಲಿ: ಇದೊಂದು ನಿರೀಕ್ಷಿತ ಗೆಲುವಾಗಿದೆ. ಗುಜರಾತ್ ನಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಮೊದಲೇ ತಿಳಿದಿತ್ತು. ಹಾಗಾಗಿ ಇದೊಂದು ಸಮಾಧಾನಕರವಾದ ಗೆಲುವಾಗಿದೆ ಎಂದು ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಗುಜರಾತ್ ಹಾಗೂ ಹಿಮಾಚಲಪ್ರದೇಶದ ವಿಧಾನಸಭೆ ಚುನಾವಣಾ ಫಲಿತಾಂಶದ ಕುರಿತು ಹೇಳಿಕೆ ನೀಡಿದ ಅವರು, ಕಳೆದ 3 ವರ್ಷದಲ್ಲಿ ಗುಜರಾತಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯ ವೈಖರಿ ಹಾಗೂ ಗುಜರಾತಿನಲ್ಲಿ 13 ವರ್ಷ ಅವರು ನಡೆಸಿದ ಆಡಳಿತದಿಂದ ನಮಗೆ ಇಂದು ಈ ಗೆಲುವು ಲಭಿಸಿದೆ. ಅಲ್ಲದೇ ಈ ಗೆಲುವು ದೇಶಾದ್ಯಂತ ಬರಬೇಕೆಂಬುದು ಜನರ ಭಾವನೆ ಎಂದು ಸದಾನಂದ ಗೌಡ ಹೇಳಿದರು.


ಪಾಟೀದಾರ್ ಸಮುದಾಯವನ್ನು ಒಡೆದು ಆಳುವ ನೀತಿ ಇರಬಹುದು ಅಥವಾ ಹಿಂದುಳಿದ ಅಥವಾ ಬೇರೆ ಸಮುದಾಯದ ನಾಯಕರನ್ನು ಪಕ್ಷಕ್ಕೆ ಸೇರಿಸಕೊಳ್ಳುವ ಮೂಲಕ ಒಂದು ರೀತಿಯಲ್ಲಿ ಕಾಂಗ್ರೆಸ್ ಪಕ್ಷ ಹಲವು ತಂತ್ರಗಾರಿಕೆಗಳನ್ನು ರೂಪಿಸಿತ್ತು. ಆದರೆ ಇವೆಲ್ಲದರ ಮಧ್ಯೆ ಬಿಜೆಪಿ ಅದ್ಭುತ ಗೆಲುವು ಸಾಧಿಸಿದೆ ಎಂದು ಅವರು ಅಭಿಪ್ರಾಯಪಟ್ಟರು. 


ಭ್ರಷ್ಟ ಅಧಿಕಾರಿಗಳಿಗೆ ಮತ್ತೆ ಅವಕಾಶ ಕೊಡಬಾರದೆಂದು ಭಾರತೀಯ ಜನತಾ ಪಕ್ಷದ ಸ್ಪಷ್ಟ ವಿಚಾರವಾಗಿದೆ. ಆರೋಪಗಳು, ಪ್ರತ್ಯಾರೋಪಗಳು ರಾಜಕೀಯದಲ್ಲಿ ಸಾಮಾನ್ಯ. ಆದರೆ ಆ ಆರೋಪಗಳು ಸಾಬೀತಾಗಿಲ್ಲ ಎಂಬ ಕಾರಣಕ್ಕೆ ಅದನ್ನು ಮತ್ತೆ ಮತ್ತೆ ಮುಂದುವರೆಸುವುದರಲ್ಲಿ ಅರ್ಥವಿಲ್ಲ ಎಂದು ಅವರು ಹೇಳಿದರು.