ಬೆಂಗಳೂರು: ಅತ್ಯಂತ ಪ್ರತಿಷ್ಠಿತ ಕಂಪನಿಯಾದ ಐಕ್ಯಾ ಬೆಂಗಳೂರಿನಲ್ಲಿ ಕೇಂದ್ರ ತೆರೆಯುತ್ತಿರುವುದು ಶ್ಲಾಘನೀಯ ಕೆಲಸವಾಗಿದ್ದು, ಕೇಂದ್ರ ನಿರ್ಮಾಣಕ್ಕೆ ಬಿಬಿಎಂಪಿ ವತಿಯಿಂದ ಶೀಘ್ರವೇ ಅನುಮತಿ ಕೊಡಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು. 


COMMERCIAL BREAK
SCROLL TO CONTINUE READING

ನಾಗಸಂದ್ರ ಮೆಟ್ರೋ ನಿಲ್ದಾಣದ ಬಳಿ ನಿರ್ಮಾಣವಾಗುತ್ತಿರುವ 'ಐಕ್ಯಾ ಶಾಪ್' ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೆಂಗಳೂರು ಅತಿ ವೇಗವಾಗಿ ಬೆಳೆಯುತ್ತಿರುವ ನಗರ. ‌ಈ ಹಿಂದೆ ಮೆಟ್ರೋ ಶಾಪ್ ತೆರೆಯುವ ಸಂದರ್ಭದಲ್ಲೂ ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದರು. ಇಂದು ಬಹುತೇಕರು ಏನೇ ಖರೀದಿಗೂ ಅಲ್ಲಿಗೇ ತೆರಳುತ್ತಾರೆ. 


ಐಕ್ಯ ಕೂಡ ಹೊಸದಾಗಿ ಬೆಂಗಳೂರಿನಲ್ಲಿ ಶಾಪ್ ತೆರೆಯುತ್ತಿದ್ದು, 7 ಸಾವಿರ ಬಗೆಬಗೆಯ ವಸ್ತುಗಳು ಇಲ್ಲಿ ಲಭ್ಯವಿರಲಿದೆ ಎಂದು ಹೇಳಿದರು. ನಾಗಸಂದ್ರ ಮೆಟ್ರೋ ನಿಲ್ದಾಣದ ಬಳಿಯೇ ಶಾಪ್ ನಿರ್ಮಿಸಲಾಗುತ್ತಿದ್ದು, 2020 ಕ್ಕೆ ಕಾಮಗಾರಿ ಪೂರ್ಣಗೊಂಡು ಖರೀದಿಗೆ ಮುಕ್ತವಾಗಲಿದೆ.‌ ಈ ಶಾಪ್‌ಗೆ ಬಿಬಿಎಂಪಿಯಿಂದ ಅನುಮತಿ ಸಿಗಬೇಕಿದ್ದು, ಶೀಘ್ರವೇ ಕೊಡಿಸಲಾಗುವುದು ಎಂದು ಪರಮೇಶ್ವರ್ ಭರವಸೆ ನೀಡಿದರು. 


ಕಾರ್ಯಕ್ರಮದಲ್ಲಿ ಕೈಗಾರಿಕಾ‌ ಸಚಿವ ಕೆ.ಜೆ.‌ಜಾರ್ಜ್, ನಿವೃತ್ತ ಮುಖ್ಯ ಕಾರ್ಯದರ್ಶಿ ರತ್ನಪ್ರಭ, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ ಉಪಸ್ಥಿತರಿದ್ದರು.