ಬೆಂಗಳೂರು : ದೇಶದಲ್ಲಿ ದಿನದಿಂದ ದಿನಕ್ಕೆ ಕರೋನ (Coronavirus) ಪ್ರಕರಣಗಳು  ಹೆಚ್ಚುತ್ತಲೇ ಇದೆ. ರಾಜ್ಯದಲ್ಲೂ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬರುತ್ತಿದೆ. ಈ ನಿಟ್ಟಿನಲ್ಲಿ ಸೋಂಕು ಹರಡದಂತೆ ತಡೆಯಲು ಸರ್ಕಾರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಕೊವಿಡ್ ನಿಯಮವನ್ನು (COVID Guidlines) ಕಟ್ಟುನಿಟ್ಟಾದ ರೀತಿಯಲ್ಲಿ ಪಾಲಿಸುವಂತೆ ಜನತೆಯಲ್ಲಿ ಸರ್ಕಾರ ಮನವಿ ಮಾಡಿದೆ.


COMMERCIAL BREAK
SCROLL TO CONTINUE READING

ಈ ಮಧ್ಯೆ , ಬೆಂಗಳೂರಿನಲ್ಲಿ ಕೊವಿಡ್ (Coronavirus) ಪ್ರಕರಣಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಹೊರ ರಾಜ್ಯದಿಂದ ಬೆಂಗಳೂರಿಗೆ ಬರುವ ಪ್ರತಿಯೊಬ್ಬರಿಗೂ  ಕೊವಿಡ್ (COVID_19) ಪರೀಕ್ಷೆಯನ್ನ ಕಡ್ಡಾಯಗೊಳಿಸಿ  ಸರ್ಕಾರ ಆದೇಶ ಹೊರಡಿಸಿದೆ.  ಬೇರೆ ರಾಜ್ಯದಿಂದ  ಬೆಂಗಳೂರಿಗೆ ಬರುವ  ಎಲ್ಲರಿಗೂ  ಆರ್‌ಟಿ-ಪಿಸಿಆರ್  ಪರೀಕ್ಷೆ  ಕಡ್ಡಾಯ ಎಂದು ಆರೋಗ್ಯ ಸಚಿವ ಡಾ.  ಕೆ ಸುಧಾಕರ್ ಹೇಳಿದ್ದಾರೆ. 


ಇದನ್ನೂ ಓದಿ: COVID -19 ನಿಯಮಗಳನ್ನು ಮೀರಿದರೆ ಬೀಳಲಿದೆ ಭಾರೀ ದಂಡ ..!


ಕೆಲ  ರಾಜ್ಯಗಳಲ್ಲಿ ಕರೋನಾ ಪ್ರಕರಣಗಳು ಮಿತಿ ಮೀರುತ್ತಿದ್ದು, ಹೊರ ರಾಜ್ಯದಿಂದ ಬರುವವರಿಗೆ ಆರ್‌ಟಿ-ಪಿಸಿಆರ್ ಪರೀಕ್ಷೆ (RT-PCR) ಕಡ್ಡಾಯ ಮಾಡುವ ಆಗತ್ಯ ಇದೆ ಎಂದು ಅವರು ಹೇಳಿದ್ದಾರೆ.  ನೆರೆಯ ರಾಜ್ಯಗಳಾದ ಕೇರಳ, ಮಹಾರಾಷ್ಟ್ರ, ಮಾತ್ರವಲ್ಲದೆ  ಪಂಜಾಬ್, ಚಂಡೀಗಢ ಮತ್ತು ಇತರ ರಾಜ್ಯಗಳ ಜನರು ಬೆಂಗಳೂರಿಗೆ ಬರುವಾಗ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳಲೇ ಬೇಕು ಎಂದು ಆರೋಗ್ಯ ಸಚಿವರು DR. K Sudhakar ತಿಳಿಸಿದ್ದಾರೆ.


ಅಲ್ಲದೆ ರೋಗ ಲಕ್ಷಣ ಕಂಡು ಬಂದಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸದಂತೆ ಸೂಚಿಸಿದ್ದಾರೆ. ಕೊವಿಡ್ ನಿಯಮವನ್ನು ಪಾಲಿಸುವಂತೆ ಅವರು  ಮನವಿ ಮಾಡಿದ್ದಾರೆ. ಮಾಸ್ಕ್ (Mask) ಧರಿಸದಿದ್ದರೆ ದಂಡ ವಿಧಿಸಲಾಗುವುದು ಎಂದಿದ್ದಾರೆ. ಯಾವುದೇ ಜನದಟ್ಟಣೆ ಇರುವ ಸ್ಥಳಗಳಲ್ಲಿ ಸಾಮಾಜಿಕ ಅಂತರವನ್ನು (Social distancing)  ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ ಎಂಡು ಸುಧಾಕರ್ ಹೇಳಿದ್ದಾರೆ. 


ಇದನ್ನೂ ಓದಿ: K Sudhakar: ರಾಜ್ಯದಲ್ಲಿ ಮತ್ತೆ 'ಲಾಕ್‌ಡೌನ್ ಎಚ್ಚರಿಕೆ' ನೀಡಿದ ಆರೋಗ್ಯ ಸಚಿವ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.