ಬೆಂಗಳೂರು : ಇಂಥ ನೀಚ ವ್ಯಕ್ತಿಯನ್ನು ಮುಖ್ಯಮಂತ್ರಿಯನ್ನಾಗಿ ಬೆಳೆಸಿದ್ದು ನನ್ನ ಜೀವನದಲ್ಲೇ ಮಾಡಿದ ದೊಡ್ಡ ಅಪರಾಧ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್.ಡಿ.ದೇವೇಗೌಡ ಅವರು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 


COMMERCIAL BREAK
SCROLL TO CONTINUE READING

ಇಂದು ಕೆಂಗೇರಿ ಉಪನಗರದಲ್ಲಿ ನಡೆದ ಜೆಡಿಎಸ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, 
ಕಾಂಗ್ರೆಸ್ನಲ್ಲಿ ಇಂದು ಸೋನಿಯಾ ಬಲ ಕುಗ್ಗಿದೆ. ಇದನ್ನೇ ನೆಪ ಮಾಡಿಕೊಂಡು ಸಿದ್ದರಾಮಯ್ಯ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಅವರು ಕಿಡಿ ಕಾರಿದರು. 


ಈ ರಾಜ್ಯದಲ್ಲಿ ಆರಂಭದಲ್ಲಿ ಜನರ ಮನ ಗೆಲ್ಲುವ ಹಂತದಲ್ಲಿ ಸಿದ್ದರಾಮಯ್ಯಗೆ ಈ ದೇವೇಗೌಡ ಬೇಕಾಗಿದ್ದ. ಆದರೆ ಮೊನ್ನೆ ಶ್ರವಣಬೆಳಗೊಳದಲ್ಲಿ ನಡೆದ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ನನಗೆ ಮಾತನಾಡಲು ಅವಕಾಶವನ್ನೇ ನೀಡಲಿಲ್ಲ. ಇರಲಿ, ನಿಮ್ಮ ಅಧಿಕಾರ ಇನ್ನೆಷ್ಟು ದಿನ ಇರುತ್ತದೆ, ನಾನೂ ನೋಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಇಂಥ ನೀಚ ವ್ಯಕ್ತಿಯನ್ನು ಮುಖ್ಯಮಂತ್ರಿಯಾಗಿ ಬೆಳೆಸಿದ್ದು ನನ್ನ ದೊಡ್ಡ ಅಪರಾಧ, ಅದಕ್ಕಾಗಿ ಅಂದಿನ 5 ಕೋಟಿ ಜನತೆಯನ್ನು ಕ್ಷಮೆ ಕೇಳುವುದಾಗಿ ದೇವೇಗೌಡರು ಹೇಳಿದರು.