ಕಲಬುರಗಿ: ರಾಜ್ಯದಲ್ಲಿ ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಟೆನಿಸ್ ಕ್ರೀಡೆಗೆ ಹೆಚ್ಚಿನ ಉತ್ತೇಜನ ನೀಡಲು ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಸೋಸಿಯೇಷನ್ ಸಂಸ್ಥೆಯು ಕಲಬುರಗಿಯನ್ನು ಕೇಂದ್ರವಾಗಿಟ್ಟುಕೊಂಡು ಆಸಕ್ತ ಕ್ರೀಡಾಪಟುಗಳಿಗೆ ನಿರಂತರ ತರಬೇತಿ ನೀಡಲು ಪ್ರಾದೇಶಿಕ ತರಬೇತಿ ಕೇಂದ್ರ ತೆರೆಯಬೇಕು ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ.-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.


COMMERCIAL BREAK
SCROLL TO CONTINUE READING

ರವಿವಾರ ಚಂಪಾ ಕ್ರೀಡಾಂಗಣದಲ್ಲಿ ನಡೆದ ಕಲಬುರಗಿ ಓಪನ್ ಮೆನ್ಸ್ ಸಿಂಗಲ್ಸ್ ಫೈನಲ್ ಪಂದ್ಯದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು,


ಸರ್ಕಾರ ಇದಕ್ಕಾಗಿ ಎಲ್ಲಾ ರೀತಿಯ ಮೂಲಸೌಕರ್ಯ ಕಲ್ಪಿಸಲು ಬದ್ಧವಾಗಿದೆ.ತರಬೇತಿ ಇಲ್ಲದೆ ಹೋದಲ್ಲಿ ಸ್ಥಳೀಯ ಪ್ರತಿಭೆಗಳು ಹೊರಬರಲು ಅಸಾಧ್ಯ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.


ಇದನ್ನೂ ಓದಿ: ಚಳಿಗಾಲದಲ್ಲಿ ಸಂಭವಿಸುವ ಕೂದಲು ನಿರ್ಜೀವ ಸಮಸ್ಯೆಗೆ ಇಲ್ಲಿವೆ ಮೂರು ಮನೆಮದ್ದುಗಳು!


ನಮ್ಮ ಸರ್ಕಾರ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಇದಕ್ಕೆ ಕಲಬುರಗಿಯಲ್ಲಿ ಐ.ಟಿ.ಎಫ್ ಟೂರ್ನಿ ಆಯೋಜನೆ ಇದಕ್ಕೆ ಸಾಕ್ಷಿ. ಕೆ.ಎಸ್.ಎಲ್.ಟಿ.ಗೆ ಇದು ಒಂದು ಟೂರ್ನಿಯಾದರೆ, ಕಲಬುರಗಿಗೆ 9 ಜನ ವಿದೇಶಿ ಆಟಗಾರರು ಭಾಗವಹಿಸಿ ಅಂತಾರಷ್ಟ್ರಿಯ ಪಂದ್ಯಾವಳಿ ಇದಾಗಿದೆ.


ಸುಮಾರು ಒಂದು ವಾರಗಳ ಟೆನಿಸ್ ಹಬ್ಬವನ್ನು ಇಲ್ಲಿನ ಜನರು ಕಣ್ತುಂಬಿಕೊಂಡಿದ್ದಾರೆ.ಇಂತಹ ಅಂತರಾಷ್ಟ್ರೀಯ, ರಾಷ್ಟ್ರಿಯ ಟೂರ್ನಿ ವರ್ಷದಲ್ಲಿ ಎರಡು ಮೂರು ಬಾರಿ ಇಲ್ಲಿ ಆಯೋಜಿಸಿದಲ್ಲಿ ಟೆನಿಸ್ ಬೆಳವಣಿಗೆಗೆ ತುಂಬಾ ಸಹಕಾರಿಯಾಗಲಿದೆ‌. ಸ್ಥಳೀಯ ಕ್ರೀಡಾಪಟುಗಳು, ಬಾಲ್ ಬಾಯ್ಸ್ ಗಳಿಗೆ ವಿದೇಶಿ ಆಟಗಾರರನ್ನು ಸಮೀಪದಿಂದ ನೋಡುವ ಭಾಗ್ಯ ಸಿಕ್ಕಿದೆ. ಜಿದು ಅವರಲ್ಲಿ ಟೆನಿಸ್ ಪ್ರೀತಿ ಹೆಚ್ಚಿಸಲಿದೆ ಎಂದು ಕೆ.ಎಸ್.ಎಲ್.ಟಿ.ಎ ಸಂಸ್ಥೆಯ ಉಪಾಧ್ಯಕ್ಷರಾಗಿರುವ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.


ಇದನ್ನೂ ಓದಿ- ವಿಮಾನದಲ್ಲಿ ಸುಂದರ ಗಗನಸಖಿಯ ಡಾನ್ಸ್ ವೈರಲ್... ವಿಮಾನ ಹೊತ್ತಿ ಉರಿಯುತ್ತೇ ಬೇಡ ಎಂದ ನೆಟ್ಟಿಗರು!


ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸಿದ ಡಿ.ಸಿ. ಬಿ.ಫೌಜಿಯಾ ತರನ್ನುಮ್ ನೇತೃತ್ವಡ ಇಡೀ ಜಿಲ್ಲಾಡಳಿತ ತಂಡಕ್ಕೆ ಸಚಿವ‌ ಪ್ರಿಯಾಂಕ್ ಖರ್ಗೆ ಅಭಿನಂದನೆ ಸಲ್ಲಿಸಿದರು. ಇದಲ್ಲದೆ ಟೂರ್ನಿ ಅಯೋಜನೆಗೆ ಪ್ರಾಯೋಜಕತ್ವ ನೀಡಿದ ಉದ್ಯಮಿಗಳಿಗೆ, ಬಾಲ್ ಬಾಯ್ಸ್, ಅಂಪೈರ್, ಕ್ರೀಡಾಪಟುಗಳು, ಮಾಧ್ಯಮದವರಿಗೆ, ಪೈನಲ್ ಪಂದ್ಯದಲ್ಲಿ ಕಿರೀಟಕ್ಕೆ ಶ್ರಮಿಸಿದ ರಾಮಕುಮಾರ ರಾಮನಾಥನ ಮತ್ತು ಡೇವಿಡ್ ಪಿಚ್ಲರ್ ಹಾಗೂ ಫೈನಲ್ ಪಂದ್ಯ ವೀಕ್ಷಣೆಗೆ ಬಂದ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದರು.


ಚಳಿಗಾಲದಲ್ಲಿ ಸಂಭವಿಸುವ ಕೂದಲು ನಿರ್ಜೀವ ಸಮಸ್ಯೆಗೆ ಇಲ್ಲಿವೆ ಮೂರು ಮನೆಮದ್ದುಗಳು!


ನಂತರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 6-2; 6-1 ನೇರ ಸೆಟ್ ನಿಂದ ಅದ್ವಿತಿಯ ಗೆಲುವು ಸಾಧಿಸಿ ಸಿಂಗಲ್ಸ್ ಕಿರೀಟ ತನ್ನ‌ ಮುಡಿಗೇರಿಸಿದ ಭಾರತದ ರಾಮಕುಮಾರ ರಾಮನಾಥನ ಅವರಿಗೆ US $ 3600 ಚೆಕ್, ಟ್ರೋಫಿ ಮತ್ತು ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟ ಆಸ್ಟ್ರಿಯಾದ ಡೇವಿಡ್ ಪಿಚ್ಲರ್ ಅವರಿಗೆ US $ 2120 ಚೆಕ್ ಮತ್ತು ಟ್ರೋಫಿ ಪ್ರದಾನ ಮಾಡಲಾಯಿತು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ