ರಾಯಚೂರು: ಸೆಕೆಂಡ್ ಹ್ಯಾಂಡ್ ವಸ್ತುಗಳನ್ನೇ ಬಳಸಿಕೊಂಡು ಉರಿ ಬಿಸಿಲಿನ ಸಹಾಯದಿಂದ ಹೊಸ ಅವಿಷ್ಕಾರವನ್ನೇ ಮಾಡಿರುವ ರಾಯಚೂರು ಜಿಲ್ಲೆಯ ‌ಮಾನ್ವಿ ತಾಲೂಕಿನ ಬಸವ ಐಟಿಐ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಇದೀಗ ತಮ್ಮ ಕೆಲಸದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. 


COMMERCIAL BREAK
SCROLL TO CONTINUE READING

ಇತ್ತೀಚಿನ ದಿನಗಳಲ್ಲಿ ವಾಹನ ದಟ್ಟಣೆಯಿಂದಾಗಿ ಹೆಚ್ಚಾಗುತ್ತಿರುವ ವಾಯು ಮಾಲಿನ್ಯವನ್ನು ನಿಯಂತ್ರಿಸುವ  ಹಂಬಲದಿಂದ ಆಕಾಶ್, ಮೋಜೆಶ್, ಅಭಿಷೇಕ, ಜಾಫರ್, ಪಾಷಾ, ಹರೀಶ್ ಮತ್ತು ಜಿಷಾನ್ ಎನ್ನುವ ಆರು ಜನ ಸ್ನೇಹಿತರು ಜೊತೆಯಾಗಿ ಈ ಸೋಲಾರ್ ಸೈಕಲ್ ಆವಿಷ್ಕಾರ ಮಾಡಿದ್ದಾರೆ. 


ಈ‌ ಸೈಕಲ್ ನಲ್ಲಿ ಸೋಲಾರ್ ಪ್ಯಾನಲ್ ಅಳವಡಿಕೆ ‌ಮಾಡಲಾಗಿದ್ದು, ಈ ಸೋಲಾರ್ ಪ್ಯಾನಲ್ ಮೇಲೆ ಬೀಳುವ ಸೂರ್ಯನ ಕಿರಣಗಳಿಂದ ಬ್ಯಾಟರಿ ಚಾರ್ಜ್ ಆಗಿ ಗಂಟೆಗೆ 25-30  ಕಿಮೀ‌ ರನ್ನ ಆಗುತ್ತದೆ. ಒಂದು ವೇಳೆ ಬ್ಯಾಟರಿ ಚಾರ್ಜ್ ಖಾಲಿಯಾದರೂ ಪೆಡಲ್ ತುಳಿಯುವ ಮೂಲಕ ಸೈಕಲ್ ಸವಾರಿ ಮುಂದುವರೆಸಬಹುದು. ಮಾತ್ರವಲ್ಲ, ಈ ಸಮಯದಲ್ಲಿ ಬ್ಯಾಟರಿ ಕೂಡ ಚಾರ್ಜ್ ಆಗುತ್ತದೆ. 


ಇದನ್ನೂ ಓದಿ- ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ


ಏನಾದರೂ ಸಂಶೋಧನೆ ಮಾಡಬೇಕು ಎಂದು ಕನಸು ಕಂಡಿದ್ದ ವಿದ್ಯಾರ್ಥಿಗಳು ತಮ್ಮ ಶಿಕ್ಷಕರ ಬಳಿ ಹೋಗಿ ಸಲಹೆ ಕೇಳಿದ್ದರಂತೆ. ಈ ವೇಳೆ ಪರಿಸರಕ್ಕೆ ಒಳಿತಾಗುವ ಸಂಶೋಧನೆ ಮಾಡಿದ್ರೆ ಒಳ್ಳೆಯದು ಎಂದು ಶಿಕ್ಷಕರು‌ ಸಲಹೆ ಕೊಟ್ಟಿದ್ದರಂತೆ. ಬಳಿಕ ಪರಿಸರ ಸ್ನೇಹಿ ಸೈಕಲ್ ತಯಾರು‌ ಮಾಡಿದರೆ ಹೇಗೆ ಎಂದು ಚರ್ಚೆ ನಡೆಸಿದ್ದ ವಿದ್ಯಾರ್ಥಿಗಳು, ತಮ್ಮಲ್ಲಿದ್ದ ಹಳೆಯ ಸೈಕಲ್ ಅನ್ನೇ ಪ್ರಾಯೋಗಿಕವಾಗಿ ಬಳಸಿಕೊಂಡಿದ್ದಾರೆ.


ಇದಕ್ಕೆ ಬೇಕಾದ ಸ್ವತ್ತುಗಳನ್ನ‌ ಆನ್ಲೈನ್ನಲ್ಲಿ ಖರೀದಿಸಿ ವಿದ್ಯಾರ್ಥಿಗಳು ಕೇವಲ 17 ಸಾವಿರದಲ್ಲಿ ಈ ಇಕೋ ಸೈಕಲ್ ರೆಡಿ ಮಾಡಿ‌‌ದ್ದಾರೆ. ಇನ್ನು ಈ ಸೈಕಲ್ ಅನ್ನು ನಗರವಾಸಿಗಳು ಮತ್ತು ಗ್ರಾಮೀಣ ಭಾಗದ ಜನರು ಯಾರೇ ಆದರೂ ಆರಾಮವಾಗಿ ಬಳಕೆ ಮಾಡಬಹುದಾಗಿದೆ.


ಇದನ್ನೂ ಓದಿ- ʼಸಿದ್ರಾಮುಲ್ಲಾಖಾನ್ʼ : ಟಿಪ್ಪುವಿನ ಟೋಪಿ ಹಾಕಿದ್ದ ಯಡಿಯೂರಪ್ಪ, ಈಶ್ವರಪ್ಪ ʼಯೂಸೂಫ್‌ ಖಾನ್‌ʼ..?


ಈ ವಿದ್ಯಾರ್ಥಿಗಳ ಈ ಸಾಧನೆಗೆ UNDPA ಸ್ಯಾಪ್ ಸಂಸ್ಥೆ ಒಂದು ಲಕ್ಷ ಬಹುಮಾನ ನೀಡಿ ಗೌರವಿಸಿದೆ. ವಿದ್ಯಾರ್ಥಿಗಳ ಸಾಧನೆಯ ರೋಚಕತೆ ಕಣ್ಣಾರೆ ಕಂಡ ಶಿಕ್ಷಕರು ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಐಟಿಐ ವಿದ್ಯಾರ್ಥಿಗಳು ತಯಾರಿಸಿರುವ ಈ ಸೈಕಲ್ ಕಂಡು ಮೆಚ್ಚುಗೆ ವ್ಯಕ್ತಪಡಿಸಿರುವ ಹಲವು ಮಂದಿ ತಮಗೂ ಈ ರೀತಿಯ ಸೈಕಲ್ ತಯಾರಿಸಿ ಕೊಡುವಂತೆ ವಿದ್ಯಾರ್ಥಿಗಳ ಮುಂದೆ ಬೇಡಿಕೆ ಇಟ್ಟಿದ್ದಾರಂತೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.