ಶಿವಮೊಗ್ಗ: ರಾಜ್ಯದಲ್ಲಿ ಮೈತ್ರಿ ಸರ್ಕಾರ ಬೀಳುವುದಕ್ಕೂ ಮುನ್ನ ಎರಡೂ ಪಕ್ಷದ ನಾಯಕರು ರಾಜೀನಾಮೆ ನೀಡಿದರೆ ಅವರಿಗೇ ಗೌರವ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರವನ್ನು ದೋಸ್ತಿ ಪಕ್ಷದ ಶಾಸಕರೇ ಒಪ್ಪುತ್ತಿಲ್ಲ. ಹೀಗಿರುವಾಗ ಸರ್ಕಾರ ಬೀಳೋದು ಖಚಿತ. ಇದಕ್ಕೂ ಮುನ್ನವೇ ಎರಡೂ ಪಕ್ಷಗಳ ನಾಯಕರು ಈ ಕೂಡಲೇ ರಾಜೀನಾಮೆ ನೀಡಿದರೆ ಉತ್ತಮ ಎಂದು ಹೇಳಿದ್ದಾರೆ.


ಬಿಜೆಪಿ ಆಪರೇಶನ್ ಕಮಲ ಮಾಡಿದೆಯೇ ಎಂಬ ಸುದ್ದಿಗಾರರ ಪರಶ್ನೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಅತೃಪ್ತ ಶಾಸಕರೇ ಬಾಯ್ಬಿಟ್ಟು ಬಿಜೆಪಿಯವರು ಯಾವುದೇ ಆಪರೇಶನ್ ಮಾಡಿಲ್ಲ. ಮೈತ್ರಿ ಸರ್ಕಾರ ಬೇಡ ಎಂಬ ಕಾರಣಕ್ಕೆ ನಾವೇ ರಾಜೀನಾಮೆ ನೀಡಿದ್ದೇವೆ ಎಂದು ಹೇಳುತ್ತಿದ್ದಾರೆ. ಹೀಗಿದ್ದರೂ ಕಾಂಗ್ರೆಸ್-ಜೆಡಿಎಸ್ ಮುಖಂಡರು ಬಿಜೆಪಿ ಮೇಲೆ ವೃಥಾ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು. 


ಇದೇ ವೇಳೆ ಮತ್ತಷ್ಟು ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂದು ಭವಿಷ್ಯ ನುಡಿದ ಈಶ್ವರಪ್ಪ ಅವರು, ಶಾಸಕರ ಮನವೊಲಿಕೆಗೆ ಹಗಲಿರುಳೂ ಒದ್ದಾಡುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ ಮೇಲೆ ಆರೋಪ ಮಾಡುವ ಬದಲು ಶಾಸಕರನ್ನು ಹಿಡಿದಿಟ್ಟುಕೊಳ್ಳಲಿ ಎಂದು ಹೇಳಿದರು.