ಬೆಂಗಳೂರು: ಇತ್ತೀಚಿಗೆ ಪ್ರಚಲಿತ ವಿದ್ಯಮಾನಗಳಿಗೆ ನಿರಂತರವಾಗಿ ಪ್ರತಿಕ್ರಿಯೆ ನೀಡುವುದರ ಮೂಲಕ ಸುದ್ದಿಯಲ್ಲಿರುವ ಪ್ರಕಾಶ ರೈ ತಮ್ಮ ನಿಲುವುಗಳಿಗೆ ಸ್ಪಷ್ಟನೆ ನೀಡಿದ್ದಾರೆ. 


COMMERCIAL BREAK
SCROLL TO CONTINUE READING

ಪ್ರಕಾಶ ರೈ ಯವರು ರಾಜಕೀಯಕ್ಕೆ ಸೇರುವ ವಿಚಾರವಾಗಿ ಪತ್ರಿಕೆಯೊಂದಿಗಿನ ಸಂವಾದದಲ್ಲಿ  ಉತ್ತರಿಸುತ್ತಾ "ನಾನು ರಾಜಕೀಯವಾಗಿ ಕ್ರಿಯಾಶೀಲವಾಗಿದ್ದೇನೆ ಎನ್ನುವುದು ರಾಜಕಾರಣ ಸೇರುತ್ತೇನೆ ಎನ್ನುವುದಲ್ಲ,ಇದುವರೆಗೂ ನನಗೆ ಯಾವುದೇ ರೀತಿಯ ರಾಜಕೀಯ ಸೇರುವ ಬಯಕೆ ಇಲ್ಲ, ಒಂದುವೇಳೆ ಸಂದರ್ಭಗಳು ನನ್ನನ್ನು ಒತ್ತಾಯಿಸುವಂತೆ ಮಾಡಿದರೆ ಅದನ್ನು ಭವಿಷ್ಯದಲ್ಲಿ ನಿರ್ಧರಿಸುತ್ತೇನೆ" ಎಂದು ರೈ ಅಭಿಪ್ರಾಯಪಟ್ಟರು. 


ಪತ್ರಕರ್ತೆ ಗೌರಿ ಲಂಕೇಶ ಹತ್ಯೆಯ ನಂತರ ಪ್ರಕಾಶ ರೈ   ಅಭಿವ್ಯಕ್ತಿ ಸ್ವಾತಂತ್ರದ ವಿರುದ್ದ ಇರುವ ಮೂಲಭೂತವಾದ ಮತ್ತು ಮತೀಯ ಶಕ್ತಿಗಳ ವಿರುದ್ದ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ. ಪತ್ರಿಕೆಯೊಂದಿಗಿನ ಸಂವಾದದಲ್ಲಿ ಮಾತನಾಡುತ್ತಾ "ರಾಜಕೀಯವಾಗಿ ಪ್ರಜ್ಞಾಪೂರ್ವಕರಾಗಿರುವುದು ಈಗ ನನ್ನ ಗಮನಕ್ಕೆ ಬಂದಿರುವಂತದ್ದು. ಈ ಹಿಂದೆ ಕೂಡಾ ನಾನು ಒಬ್ಬ ಕಲಾವಿದನಾಗಿ, ಪರಿಸರ ಸಮಸ್ಯೆಗಳಿಗೆ ಯಾವಾಗಲೂ ಪ್ರತಿಕ್ರಿಯಿಸಿದ್ದೇನೆ. ಈಗ  ನಾನು ಅದನ್ನು ವಿಸ್ತರಿಸಲು ಯತ್ನಿಸುತ್ತಿದ್ದೇನೆ. ಪ್ರಮುಖವಾಗಿ ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಮತ್ತು ಗೌರಿ ಲಂಕೇಶ್ ಅವರ ಹತ್ಯೆ ನನಗೆ ನಿಶ್ಯಬ್ದ ನಿರೂಪಣೆಯ ಶಕ್ತಿಗಳ ವಿರುದ್ಧ ಕಾರ್ಯನಿರ್ವಹಿಸಲು ಒತ್ತಾಯಿಸುವಂತೆ ಮಾಡಿದೆ ಎಂದು ಪ್ರಕಾಶ ರೈ ತಿಳಿಸಿದರು.