ಜೈ ಮಹಾರಾಷ್ಟ್ರ ಎನ್ನುವೆ: ಲಕ್ಷ್ಮೀ ಹೆಬ್ಬಾಳ್ಕರ್
ಸದಾ ಒಂದಿಲ್ಲೊಂದು ವಿವಾದ ಸೃಷ್ಟಿಸುವ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಈಗ 'ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದರೆ ಎಲ್ಲರಗಿಂತ ಮೊದಲು ನಾನೇ ಜೈಮಹಾರಾಷ್ಟ್ರ ಎಂದು ಹೇಳುವೆ' ಎನ್ನುವ ಮುಖಾಂತರ ಮತ್ತೊಂದು ವಿವಾದದ ಕಿಡಿ ಹಚ್ಚಿದ್ದಾರೆ.
ಇದೇ ಆಗಸ್ಟ್ 27ರಂದು ಬೆಳಗಾವಿ ಜಿಲ್ಲೆಯ ಬಸರೀಕಟ್ಟಿ ಗ್ರಾಮದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಮಾಡಿದ ಭಾಷಣದ ಆಡಿಯೋ ಸೋಶಿಲ್ ಮೀಡಿಯಾಗಳಲ್ಲಿ ಈಗ ವೈರಲ್ ಆಗಿದೆ.
ನಾನೀಗ ಕರ್ನಾಟಕದಲ್ಲಿದ್ದೀನಿ. ಗಡಿ ವಿಚಾರ ಸುಪ್ರೀಂ ಕೋರ್ಟ್ ನಲ್ಲಿದೆ. ಪ್ರಕರಣ ಮುಗಿದು ಬೆಳಗಾವಿ ಮಹಾರಾಷ್ಟ್ರಕ್ಕೆ ಹೋಗುವುದಾದರೆ ಎಲ್ಲರಗಿಂತ ಮೊದಲು ನಾನೇ ಮಹಾರಾಷ್ಟ್ರ ಧ್ವಜ ಹಿಡಿದು ಜೈ ಮಹಾರಾಷ್ಟ್ರ ಎಂದು ಹೇಳುವೆ. ಈ ರೀತಿ ಹೇಳುವ ದೈರ್ಯ ಯಾರಿಗೂ ಇಲ್ಲ. ಆದರೆ ನನಗೆ ಯಾರ ಭಯವೂ ಇಲ್ಲ. ನಾನು ಯಾರಿಗೂ ಹೆದರುವುದೂ ಇಲ್ಲ. ನಾನು ಹೆದರುವುದು ಆ ಭಗವಂತನಿಗೆ ಹಾಗೂ ನನ್ನ ತಂದೆ-ತಾಯಿಗೆ ಮಾತ್ರ. ನನಗೆ ಜಾತಿ, ಧರ್ಮ, ವ್ಯಕ್ತಿಯ ಬಗ್ಗೆ ಯಾವುದೇ ನಂಬಿಕೆಯಿಲ್ಲ. ಯಾರಿಂದ ಏನೂ ಆಗಬೇಕಿಲ್ಲ.
ನನಗೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಅಭಿವೃದ್ಧಿಯಾಗಬೇಕಷ್ಟೇ' ಎಂದು ಅವರು ಭಾಷಣ ಮಾಡಿದ್ದಾರೆ.