ಜೈನ್ ಸಮಾಜ ಪರೋಪಕಾರಿ ಸಮಾಜ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಜೈನ್ ಸಮಾಜ ಪರೋಪಕಾರಿ ಹಾಗೂ ಸುಸಂಸ್ಕೃತ ಸಮಾಜವಾಗಿದ್ದು, ಇದರ ಮೂಲತತ್ವಗಳಾದ ಅಹಿಂಸೆ ಹಾಗೂ ಮಾನವೀಯ ಗುಣಗಳು ಇದಕ್ಕೆ ಕಾರಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದರು.
ಬೆಂಗಳೂರು: ಜೈನ್ ಸಮಾಜ ಪರೋಪಕಾರಿ ಹಾಗೂ ಸುಸಂಸ್ಕೃತ ಸಮಾಜವಾಗಿದ್ದು, ಇದರ ಮೂಲತತ್ವಗಳಾದ ಅಹಿಂಸೆ ಹಾಗೂ ಮಾನವೀಯ ಗುಣಗಳು ಇದಕ್ಕೆ ಕಾರಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದರು.
ಅವರು ಬೆಂಗಳೂರಿನ ಆನಂದರಾವ್ ವೃತ್ತದ ಬಳಿಯಿರುವ ಜೈನ್ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದರು.ದೂರದ ರಾಜಸ್ಥಾನ ಹಾಗೂ ಗುಜರಾತಿನಿಂದ ಬಂದರೂ ಜೈನ್ ಸಮಾಜದ ಜನ ತಾವು ನೆಲೆಸಿದ ಊರಿನ ಜನರೊಂದಿಗೆ ಬೆರೆತು ಅಲ್ಲಿನ ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಎಲ್ಲರ ಪ್ರೀತಿ ವಿಶ್ವಾಸವನ್ನು ಗಳಿಸುತ್ತಾರೆ ಎಂದರು.
ಇದನ್ನೂ ಓದಿ: Corona Vaccination For Children: 12-14 ವರ್ಷದ ಮಕ್ಕಳ ಲಸಿಕೆಗಾಗಿ ಈ ರೀತಿ ನೋಂದಾಯಿಸಿ
'ಭಗವಾನ್ ಮಹಾವೀರರು (Mahavir) ಸಾಮ್ರಾಜ್ಯವನ್ನಾಳಿದ ರಾಜರು, ಸಮಾಜದ ಕ್ಷೋಭೆಯನ್ನು ಕಂಡು, ಸರ್ವಸ್ವವನ್ನೂ ಬಿಟ್ಟು, ಲೋಕಕಲ್ಯಾಣಕ್ಕಾಗಿ ತಮ್ಮನ್ನು ಸಮರ್ಪಿಸಿಕೊಳ್ಳಲು ತೀರ್ಮಾನಿಸುತ್ತಾರೆ.ತಮ್ಮ ಹೆಸರಿನಲ್ಲಿ ಏನೂ ಇರಬಾರದು ಎಂದು ತಮ್ಮದೆಲ್ಲವನ್ನೂ ತ್ಯಜಿಸುತ್ತಾರೆ' ಎಂದು ಅವರು ಹೇಳಿದರು.
ಈ ರೀತಿಯ ಸಂಸ್ಕೃತಿ ಅಪರೂಪದ್ದು. ಇರುವುದನ್ನು ತ್ಯಾಗ ಮಾಡಿ ಏನೂ ಇಲ್ಲದೆ ಬದುಕುವುದಕ್ಕೆ ವಿಶಾಲ ಹಾಗೂ ಸಹೃದಯ ಮನಸ್ಸು ಬೇಕು.ಮಹಾವೀರರು ತೀರ್ಥಂಕರರಲ್ಲಿ ಒಬ್ಬರು.ಈ ಹಿನ್ನೆಲೆಯಲ್ಲಿ ಈ ಸಮಾಜ ಬೆಳೆದುಬಂದಿದೆ.ಜೈನ ಸಮಾಜ ರಾಜ್ಯದ ಬಗ್ಗೆ ಚಿಂತನೆ ಮಾಡಿದ್ದಾರೆ.ಅವರ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಆಡಳಿತ ಮಾಡುತ್ತೇವೆ ಎಂದು ಬೊಮ್ಮಾಯಿ ಭರವಸೆ ನೀಡಿದರು.
ಇದನ್ನೂ ಓದಿ: ಗ್ರಾಮ ದೇವತೆ ಹಬ್ಬದಲ್ಲಿ ಮುಳ್ಳಿನ ಬೇಲಿಗೆ ಹಾರಿದ ಭಕ್ತರು..!
ಇದೇ ವೇಳೆ ಆರೋಗ್ಯ ಸಚಿವ ಡಾ. ಕೆ ಸುಧಾಕರ್, ಜವಳಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಶಾಸಕ ರಾಜುಗೌಡ ಮತ್ತಿತರರು ಉಪಸ್ಥಿತರಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.