ನವದೆಹಲಿ: ಹಣಕಾಸು ಸಚಿವ ಅರುಣ ಜೈಟ್ಲಿ ಮಂಡಿಸಿರುವ  ಕೇಂದ್ರ ಸರ್ಕಾರದ 2018 ಸಾಲಿನ ಬಜೆಟ್ ನಲ್ಲಿ ಕರ್ನಾಟಕಕ್ಕೆ 4 ಹೊಸ ರೈಲು ಮಾರ್ಗ ಮತ್ತು 12 ಹೊಸ ಜೋಡಿ ರೈಲು ಮಾರ್ಗಗಳಿಗೆ ಕೇಂದ್ರ ಸರ್ಕಾರ  ಒಪ್ಪಿಗೆ ನೀಡಿದೆ. ಅದರಲ್ಲೂ ಹೊಸದಾಗಿ ಘೋಷಣೆಯಾಗಿರುವ ರೈಲು ಮಾರ್ಗಗಳೆಲ್ಲವು ಸಹಿತ ಉತ್ತರ ಕರ್ನಾಟಕ ಭಾಗದ  ಹೈದರಾಬಾದ್ ಕರ್ನಾಟಕದ ಪ್ರದೇಶಗಳಿಗೆ ದೊರೆತಿವೆ. ಇನ್ನು ಹೊಸ ಜೋಡಿ ರೈಲು ಮಾರ್ಗದಲ್ಲಿ ಪ್ರಮುಖವಾಗಿ ತುಮಕೂರು-ಗುಬ್ಬಿ ಮಾರ್ಗವೊಂದನ್ನು ಹೊರತುಪಡಿಸಿ ಉಳಿದೆಲ್ಲ ಜೋಡಿ ಮಾರ್ಗಗಳು ಮುಂಬೈ ಮತ್ತು ಹೈದರಾಬಾದ್ ಕರ್ನಾಟಕ ಭಾಗಗಳಿಗೆ ಸಂಬಂಧಿಸಿದವುಗಳಾಗಿವೆ. ಆ ಮೂಲಕ ಉತ್ತರ ಕರ್ನಾಟಕದ ಭಾಗದಲ್ಲಿ ರೈಲು ಸಂಚಾರಕ್ಕೆ ಹೆಚ್ಚಿನ ಉತ್ತೇಜನ ಸಿಕ್ಕಂತಾಗಿದೆ.


COMMERCIAL BREAK
SCROLL TO CONTINUE READING

ಸರ್ಕಾರ ಘೋಷಿಸಿರುವ ರೈಲು ಮಾರ್ಗಗಳ ಪಟ್ಟಿ ಇಲ್ಲಿದೆ 


ನೂತನ ರೈಲು ಮಾರ್ಗಗಳು 


ಗಂಗಾವತಿ-ಕಾರಟಗಿ- 28 ಕಿಮೀ
ಹುಮನಾಬಾದ್-ಕಮಲಾಪುರ್-30.4 ಕಿಮೀ
ಗುಲಬರ್ಗಾ-ಕಮಲಾಪುರ್ -42 ಕಿಮೀ
ಬಾಗಲಕೋಟೆ-ಕಜ್ಜಿದೋಣಿ -30 ಕಿಮೀ


ಹೊಸ ಜೋಡಿ ರೈಲು ಮಾರ್ಗಗಳು :


ಗದಗ-ಬಿಂಕದಕಟ್ಟಿ- 4.98 ಕಿಮೀ
ಗಾನಗಾಪುರ್-ಹುಣಸಿಹಾಡಗಿಲ್- 6.58 ಕಿಮೀ
ಹರ್ಲಾಪುರ್-ಕಣಗಿನಹಾಳ - 9.83 ಕಿಮೀ
ಹುಬ್ಬಳ್ಳಿ ದಕ್ಷಿಣ -ಸವಣೂರು- 51 ಕಿಮೀ
ಹುಣಸಿಹಾಡಗಿಲ್-ಸಾವಳಗಿ- 7.05 ಕಿಮೀ
ಕಣಗಿನಹಾಳ-ಗದಗ- 8.32 ಕಿಮೀ
ಕೊಪ್ಪಳ-ಗಿಣಿಗೇರಾ-ಮುನಿರಾಬಾದ್- 21.83ಕಿಮೀ
ಬಬ್ಲಾದ್-ಗುಲ್ಬರ್ಗಾ- 5.42 ಕಿಮೀ
ಬಿಂಕದಕಟ್ಟಿ-ಹುಲಕೋಟಿ- 7.62ಕಿಮೀ
ಸಾವಳಗಿ -ಬಬ್ಲಾದ್- 7.58 ಕಿಮೀ
ತೋಳಹುಣಸೆ-ಹರಿಹರ- 23 ಕಿಮೀ 
ತುಮಕೂರು-ಗುಬ್ಬಿ- 18 ಕಿಮೀ