ಮೈಸೂರು: ರಾಜವಂಶಸ್ಥೆ ಪ್ರಮೊದದೇವಿ ‌ಒಡೆಯರ್  ಅವರ ತಾಯಿ ವಿಧಿವಶ ಹಿನ್ನೆಲೆ, ಸರ್ಕಾರದ ಕಾರ್ಯಕ್ರಮಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಜಂಬೂ ಸವಾರಿಗೆ ರಾಜಮನೆತನದಿಂದಲೇ ಸಹಕಾರ ಸಿಕ್ಕಿದೆ. ಅರಸು‌ ಮನೆತನದವರು ದಸರಾಗೆ ಸಂಪೂರ್ಣ ಬೆಂಬಲ‌ ಕೊಟ್ಟಿದ್ದಾರೆ. ಹೀಗಾಗಿ ಜಂಬೂ ಸವಾರಿಗೆ ಯಾವುದೇ ತೊಡಕಿಲ್ಲ, ದಸರಾ ಕಾರ್ಯಕ್ರಮಗಳು ಎಂದಿನಂತೆ ನಡೆಯಲಿವೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಮೈಸೂರು ದಸರಾ ಮಹೋತ್ಸವ ಜಂಬೂಸವಾರಿ ಹಿನ್ನೆಲೆ ಇಂದು ಮಾದ್ಯಮದವರೊಂದಿಗೆ ಸೌಹಾರ್ದ ಸಭೆ ನಡೆಸಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಮೈಸೂರು ದಸರಾಗೆ ಮಾಧ್ಯಮದವರ ಸಹಕಾರ ಬಹಳಷ್ಟಿದೆ. ಈ ಬಾರಿ ವಿಷೇಶ ರೀತಿಯಲ್ಲಿ ದಸರಾ ಮಹೋತ್ಸವ ನಡೆಯುತ್ತಿದೆ. ಕಳೆದ ಹತ್ತು ದಿನಗಳಲ್ಲಿ ಮೈಸೂರಿಗೆ 25 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಬಂದಿದ್ದಾರೆ.


ದಸರಾ ಸಮಯದಲ್ಲಿ‌ ಮಾತ್ರ ನಡೆಯುವ ಸಾಂಸ್ಕೃತಿಕ ‌ಕಾರ್ಯಕ್ರಮಗಳನ್ನ ವರ್ಷವಿಡಿ ನಡೆಸುವುದು  ಮತ್ತು ಮೈಸೂರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನ ಸೆಳೆಯಲು ಟೂರಿಸ್ಟ್ ಹಬ್ ಮಾಡಲು ಚಿಂತನೆ ನಡೆಸಲಾಗಿದೆ ಈಗಾಗಲೇ ಇದನ್ನ ಮಾಡಲು ಬ್ಲೂ ಪ್ರಿಂಟ್ ಸಿದ್ದಪಡಿಸಲು ಸೂಚನೆ ನೀಡಿದ್ದೇನೆ ಎಂದು ಮಾಹಿತಿ ನೀಡಿದರು.