ಬೆಂಗಳೂರು: ಆ್ಯಂಬಿಡೆಂಟ್ ವಂಚನೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನ್ಕೆಕ್ಕೆ ಒಳಗಾಗಿರುವ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಮಂಗಳವಾರ ಜಾಮೀನಿಗಾಗಿ ನ್ಯಾಮಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. 


COMMERCIAL BREAK
SCROLL TO CONTINUE READING

ಜನಾರ್ಧನ ರೆಡ್ಡಿ ಪರ ವಕೀಲ ಚಂದ್ರಶೇಖರ್‌ ಅವರು ಬೆಂಗಳೂರಿನ ಎಸಿಎಂಎಂ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ವಿಚಾರಣೆ ಇಂದು ಮಧ್ನಾಹ್ನವೇ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. 


ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್, ನವೆಂಬರ್ 12ಕ್ಕೆ ವಿಚಾರಣೆಯನ್ನು ಮುಂದೂಡಿತ್ತು. ಅಷ್ಟರಲ್ಲೇ ಜನಾರ್ಧನ ರೆಡ್ಡಿಯನ್ನು ಸಿಸಿಬಿ ಅರೆಸ್ಟ್ ಮಾಡಿ, ಕೋರ್ಟ್​ಗೆ ಹಾಜರು ಪಡಿಸಿತ್ತು. ಸದ್ಯ 14 ದಿನಗಳ ಕಾಲ ನ್ಯಾಯಂಗ ಬಂಧನದಲ್ಲಿರುವ ಜನಾರ್ಧನ ರೆಡ್ಡಿ, ಈಗ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. 


ಮಾರ್ಕೆಟಿಂಗ್ ಹೆಸರಲ್ಲಿ ಹಣ ದ್ವಿಗುಣ ಮಾಡುವುದಾಗಿ ಲಕ್ಷಾಂತರ ಜನರಿಗೆ ಬೆಂಗಳೂರಿನ ಅಂಬಿಡೆಂಟ್ ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಡ್ ವಂಚನೆ ಮಾಡಿತ್ತು. ಈ ಸಂಬಂಧ ಬೆಂಗಳೂರಿನ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.  ಪ್ರಕರಣದ ಬಗ್ಗೆ ತಿಳಿದ ಸಿಎಂ ಕುಮಾರ ಸ್ವಾಮಿ ಕೇಸ್ ಅನ್ನು ಸಿಸಿಬಿ ಪೊಲೀಸರ ಹೆಗಲಿಗೆ ನೀಡಿದ್ದರು, ಈ ಕೇಸ್ ಮುಚ್ಚಿಹಾಕಲು ಕಂಪನಿ ಮಾಲೀಕ ಫರೀದ್ ಹಲವರ ಹಿಂದೆ ಸುತ್ತಿದ್ದರು. ಈ ವೇಳೆ ಫರೀದ್‍ಗೆ ಬಿಲ್ಡರ್ ಬ್ರಿಜೇಶ್, ರಮೇಶ್ ಕೊಠಾರಿ, ಅಲಿಖಾನ್ ಹಾಗೂ ಜನಾರ್ಧನ ರೆಡ್ಡಿ ಸೇರಿ 25 ಕೋಟಿ ಡೀಲ್‍ಗೆ ಬೇಡಿಕೆಯಿಟ್ಟಿದ್ದರು ಎಂದು ಆರೋಪಿಸಲಾಗಿದೆ.