ಬೆಳಗಾವಿ: ಉತ್ತರ ಕರ್ನಾಟಕ ಭಾಗದ ಸಾರ್ವಜನಿಕ ಕುಂದು ಕೊರತೆಗಳನ್ನು ಆಲಿಸಲು ಬೆಳಗಾವಿ ಜಿಲ್ಲಾಡಳಿತ ಹಾಗೂ ಬೆಳಗಾವಿ ಮಹಾನಗರ ಪಾಲಿಕೆ ಸಹಯೋಗದೊಂದಿಗೆ ಬೆಳಗಾವಿ ಮಹಾನಗರ ಪಾಲಿಕೆ ಪಕ್ಕದಲ್ಲಿರುವ ಕುಮಾರ ಗಂಧರ್ವ ರಂಗಮಂದಿರಲ್ಲಿ ಜನತಾ ದರ್ಶನ ಶಾಖೆ ತೆರೆಯಲಾಗಿದೆ. 


COMMERCIAL BREAK
SCROLL TO CONTINUE READING

ಇಲ್ಲಿ ಸಾರ್ವಜನಿಕರು ತಮ್ಮ ಕುಂದು ಕೊರತೆ, ಅಹವಾಲುಗಳನ್ನು ಸಲ್ಲಿಸಲು ಅವಕಾಶ ಮಾಡಲಾಗಿದ್ದು, ಸ್ಥಳದಲ್ಲಿಯೇ ಸ್ವೀಕೃತಿ ಪತ್ರಗಳನ್ನು ನೀಡಲಾಗುತ್ತಿದೆ.


ಸ್ವೀಕರಿಸಿದ ಅರ್ಜಿಗಳನ್ನು ಮುಖ್ಯಮಂತ್ರಿಯವರ ಜನತಾದರ್ಶನದ ಗಣಕ ತಂತ್ರಾಂಶವಾದ www.espandana.karantaka.gov.in ನಲ್ಲಿ ಅಪ್‍ಲೋಡ್ ಮಾಡಿ, ಅರ್ಜಿಗಳ ವಿಲೇವಾರಿಗಾಗಿ ವಿವಿಧ ಇಲಾಖೆಗಳಿಗೆ ಆನ್‍ಲೈನ್ ಮೂಲಕ ಕಳುಹಿಸಲಾಗುತ್ತಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆಯಬಹುದಾಗಿದೆ.