ಜಯಮಾಲಾಗೆ ಜೀವನದಲ್ಲಿ ಇದಕ್ಕಿಂತ ಸಂತೋಷ ಬೇರೆ ಇಲ್ಲವಂತೆ
ಅನುಭವಿಸಿದವರಿಗೇ ಗೊತ್ತು ಅವಮಾನದ ನೋವು.
ಬೆಂಗಳೂರು: ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿ ಸುಪ್ರೀಂಕೋರ್ಟ್ ಇಂದು ತನ್ನ ತೀರ್ಪು ಪ್ರಕಟಿಸಿದೆ. ಸುಪ್ರೀಂ ತೀರ್ಪನ್ನು ಸ್ವಾಗತಿಸಿರುವ ಸಚಿವೆ ಜಯಮಾಲಾ ಇದಕ್ಕಿಂತ ಸಂತೋಷದ ದಿನ ನನ್ನ ಜೀವನದಲ್ಲಿ ಬೇರೊಂದಿಲ್ಲ ಎಂದು ತಮ್ಮ ಸಂತಸ ಹಂಚಿಕೊಂಡಿದ್ದಾರೆ.
ಇದೊಂದು ಐತಿಹಾಸಿಕ ದಿನ. ಹೆಣ್ಣು ಮಕ್ಕಳಿಗೆ ನ್ಯಾಯ ಸಿಕ್ಕಿದೆ. ಹೆಣ್ಣು ಕುಲಕ್ಕೆ, ಸುಪ್ರೀಂ ಕೋರ್ಟ್ಗೆ ಸಂವಿಧಾನಕ್ಕೆ ತುಂಬ ಧನ್ಯವಾದ ಹೇಳ್ತೇನೆ. ಇದಕ್ಕಿಂತ ಸಂತೋಷದ ದಿನ ನನ್ನ ಜೀವನದಲ್ಲಿ ಬೇರೊಂದಿಲ್ಲ. ಆವತ್ತು ನನಗೆ ದೇವರ ಮೇಲೆ ನಂಬಿಕೆ ಇತ್ತು, ನ್ಯಾಯಾಂಗದ ಮೇಲೆ ಇತ್ತು ಎಂದು ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಸಚಿವೆ ಜಯಮಾಲ ಹೇಳಿದ್ದಾರೆ.
ಲಿಂಗತಾರತಮ್ಯದ ವಿರುದ್ಧ ವ್ಯಕ್ತಪಡಿಸಿದ್ದ ಜಯಮಾಲಾ:
ಹಿಂದೆ ಶಬರಿಮಲೈ ಅಯ್ಯಪ್ಪ ದೇವಸ್ಥಾನಕ್ಕೆ ತೆರಳಲು ನಟಿ ಸಚಿವೆ ಜಯಮಾಲಾ ಪ್ರಯತ್ನಪಟ್ಟಿದ್ದರು. ಆದರೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶವಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ಜಯಮಾಲಾ ಅವರನ್ನು ಅವಮಾನಿಸಿತ್ತು. ಈ ಲಿಂಗತಾರತಮ್ಯದ ವಿರುದ್ಧ ಜಯಮಾಲಾ ಅಸಮಾಧಾನ ವ್ಯಕ್ತಪಡಿಸಿದರು. ಇಂದು ಸುಪ್ರೀಂ ಕೋರ್ಟ್ ಮಹಿಳೆಯರಿಗೂ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಪ್ರವೇಶ ನೀಡಬೇಕೆಂದು ತೀರ್ಪು ನೀಡಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.
ಅನುಭವಿಸಿದವರಿಗೇ ಗೊತ್ತು ಅವಮಾನದ ನೋವು:
ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶವಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ಜಯಮಾಲಾ ಅವರನ್ನು ಅವಮಾನಿಸಿತ್ತು. ಜಯಮಾಲಾ ಅವರಿಗೆ ಇದರಿಂದ ಅವಮಾನವಾಗಿತ್ತು. ಆದ್ದರಿಂದಲೇ ಇಂದು ಸುಪ್ರೀಂ ಕೋರ್ಟ್ ತೀರ್ಪು ಹೋರಬೀಳುತ್ತಿದ್ದಂತೆ ಎಲ್ಲರಿಗಿಂತ ಹೆಚ್ಚಾಗಿ ಜಯಮಾಲಾ ಸಂಭ್ರಮಿಸುತ್ತಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರೂ ಕೂಡ ಆಗಿರುವ ಅವರು, ಮಹಿಳಾ ಕಲ್ಯಾಣ ಇಲಾಖೆ ಸಚಿವೆಯಾಗಿಯೂ ಕೂಡ ಈ ತೀರ್ಪನ್ನು ಸ್ಚಾಗತಿಸಿದ್ದಾರೆ. ಅಂದು ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಆಗುತ್ತಿದ್ದ ಲಿಂಗತಾರತಮ್ಯವನ್ನು ದಿಟ್ಟತನದಿಂದ ವಿರೋಧಿಸಿದ್ದ ಜಯಮಾಲಾ ಇಂದು ಇದೇ ವಿಷಯಕ್ಕೆ ಸಂಬಂಧಿಸಿದಂತೆ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.