ಧಾರವಾಡ: ಪಂಚಮಸಾಲಿ ಸಮಾಜ ಕೇವಲ‌ ಉತ್ತರ ಕರ್ನಾಟಕಕ್ಕೆ ಮಾತ್ರ‌ ಸೀಮಿತವಾಗಿತ್ತು. ನಮ್ಮ‌ ಪಾದಯಾತ್ರೆಯಿಂದ ಮಲೆನಾಡು ಹಾಗೂ ದಕ್ಷಿಣ ಭಾಗದಲ್ಲಿ ವಿಸ್ತರಣೆಗೊಂಡಿದೆ. ನಮ್ಮ ಮೀಸಲಾತಿ (2A reservation) ಪಾದಯಾತ್ರೆ ಹೋರಾಟಕ್ಕೆ ಒಂದು ವರ್ಷ ತುಂಬುತ್ತಿದೆ ಎಂದು ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ (Jayamrutyunjaya Swamiji) ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಸರ್ಕಾರ ನಮ್ಮ ತಾಳ್ಮೆ ಸಹನೆ ಮಾಡಬೇಡಿ. ಯಡಿಯೂರಪ್ಪನವರ ಸಂದರ್ಭದಲ್ಲಿ ನಮ್ಮ‌ ಸಹನೆ ಏರಿಳಿತ ಆಗಿದ್ದನ್ನು ಕಂಡಿದ್ದೇನೆ. ಇವತ್ತಿನ ಸಿಎಂ ಬೊಮ್ಮಾಯಿ (CM Basavaraj Bommai) ಅವರ ಮೇಲೆ ಸಂಪೂರ್ಣ ನಂಬಿಕೆ ಇದೆ. ಇಂದಿನವರೆಗೆ ಯಾರೂ ಸ್ಪಂದಿಸದಷ್ಟು ಅವರು ಸ್ಪಂದಿಸಿದ್ದಾರೆ ಎಂಡಿದ್ದಾರೆ.


ನಮ್ಮ ಹೋರಾಟ ಸಮಿತಿಯ ಅಧ್ಯಕ್ಷರಾಗಿ ಬಸನಗೌಡ ಪಾಟೀಲ ಯತ್ನಾಳ, ಸಚಿವ‌ ಸಿ‌.ಸಿ.ಪಾಟೀಲ ಹಾಗೂ ವಿಜಯಾನಂದ ಕಾಶಪ್ಪನವರನ್ನ ಕರೆದು ಸಿಎಂ‌ ಮಾತನಾಡಿದ್ದಾರೆ. ಸಿಎಂ ಪಂಚಮಸಾಲಿ ಮೀಸಲಾತಿ (Panchamasali 2A reservation) ಭರವಸೆ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.


ಬೆಳಗಾವಿ ಹೋರಾಟದ ವೇಳೆ ಸಿಎಂ ಅವರೇ ನಮ್ಮ‌ ಸ್ಥಳಕ್ಕೆ ಬಂದು ಇನ್ನಷ್ಟು ಸಮಯಯಾವಕಾಶ ಕೇಳಿದ್ರು. ಪದೆ‌ ಪದೇ ಚುನಾವಣೆ ಬಂದಿದ್ದರಿಂದ ಸಭೆ ಮಾಡಲು ಆಗಿಲ್ಲ ಎಂದು ಸಿಎಂ ಹೇಳಿದ್ರು. ಹೀಗಾಗಿ ಅವರಿಗೆ ಸಮ‌ಯ ಕೊಡಲಾಗಿತ್ತು ಎಂದಿದ್ದಾರೆ. 


ಮೀಸಲಾತಿ ಘೋಷಣೆ ಮಾಡಿದರೆ ಆಶ್ಚರ್ಯ ಪಡೆಬೇಕಾಗಿಲ್ಲ:


ನಾವು ಪಾದಯಾತ್ರೆ ಮಾಡಿದ್ದು ಒಂದು ವರ್ಷ ತುಂಬಲಿದೆ. ಹೀಗಾಗಿ ಕೂಡಲ‌ ಸಂಗಮದಲ್ಲಿ ಜನವರಿ 14 ರಂದು ಪಂಚಮಸಾಲಿ ಹೋರಾಟದ ವರ್ಷಾಚರಣೆ ಕಾರ್ಯಕ್ರಮ ಮಾಡಲಿದ್ದೇವೆ. ಸಿಎಂ ಕೂಡಾ ಕಾರ್ಯಕ್ರಮಕ್ಕೆ ಬರುತ್ತೇವೆ ಎಂದು ಹೇಳಿದ್ದಾರೆ. ಅಲ್ಲಿ ಕೂಡಾ ನಾವು ನೋವಿನ ಮನವಿ ಕೊದುತ್ತೇವೆ. ಸಿಎಂ ನಮಗೆ ಆ ದಿನ ಎಳ್ಳು-ಬೆಲ್ಲ‌ಕೊಡಬಹುದು. ಅದೇ ದಿನ ಮೀಸಲಾತಿ ಘೋಷಣೆ ಮಾಡಿದರೆ ಆಶ್ಚರ್ಯ ಪಡೆಬೇಕಾಗಿಲ್ಲ ಎಂದು ತಿಳಿಸಿದ್ದಾರೆ.


ಯಡಿಯೂರಪ್ಪ ನಮ್ಮವರು ಎಂದು ನಂಬಿದ್ವಿ:


ಅವರು ಯುಗಾದಿ ಒಳಗಾದರೂ‌ ಸಿಹಿ ಸುದ್ದಿ‌ ಕೊಡ್ತಾರೆ ಎಂದು ಭರವಸೆ ಇದೆ. ಯಡಿಯೂರಪ್ಪ ನಮ್ಮವರು ಎಂದು ನಂಬಿದ್ವಿ,‌ ಅವರು 10 ವರ್ಷ ನಂಬಿದರೂ ಸಹ ಅವರು ಅವಕಾಶ ಪಡೆದುಕೊಳ್ಳಲಾಗಲಿಲ್ಲ. ಶೇ.90 ರಷ್ಟು ನಮ್ಮ‌ ಸಮಾಜ ಯಡಿಯೂರಪ್ಪನವರನ್ನ ಬೆಂಬಲಿಸಿತ್ತು. ಬಿಜೆಪಿ ಸರ್ಕಾರ ಯಾವತ್ತೂ ಈ ಸಮಾಜದ‌ ಕೈ ಬಿಡಲ್ಲ ಎಂಬ ವಿಶ್ವಾಸ ಇದೆ ಎಂದು ಹೇಳಿದ್ದಾರೆ.


ಯತ್ನಾಳ ಸಿಎಂ ಆದರೂ ಆಗಬಹುದು:


ಸಿಎಂ ಶಿಗ್ಗಾವಿಯಲ್ಲಿ‌ ಮೂರು ಬಾರಿ ಗೆಲ್ಲಲು ಯಥೆಚ್ಚ ಬೆಂಬಲ‌ ಕೊಟ್ಟಿದ್ದು ಪಂಚಮಸಾಲಿ ಸಮಾಜ. ಹೀಗಾಗಿ ಸಿಎಂ ಅನ್ಯಾಯ ಮಾಡಲ್ಲ. ಯತ್ನಾಳ ಅವರು ಒಂದು ವರ್ಷದಿಂದ ಏನೆನು ಹೇಳಿದ್ದಾರೆ‌ ಅದೆಲ್ಲವೂ ಸತ್ಯ. ಅವರು ಸಿಎಂ ಆದರೂ ಆಗಬಹುದು. ಏನೆ ಬದಲಾವಣೆ ಆದರೂ ನಮ್ಮ‌ ಸಮಾಜಕ್ಕೆ ಬೊಮ್ಮಾಯಿ ಅವರೇ ನ್ಯಾಯ ಕೊಡ್ತಾರೆ ಎಂದಿದ್ದಾರೆ. 


ಇದನ್ನೂ ಓದಿ: ಕೊರೊನಾ ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ: ಗೃಹ ಸಚಿವ ಆರಗ ಜ್ಞಾನೇಂದ್ರ 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.