ಮಂಡ್ಯ: ಕಾಂಗ್ರೆಸ್-ಬಿಜೆಪಿ ಜೊತೆ ಜೆಡಿಎಸ್ ಮತ್ತೊಮ್ಮೆ ಸರ್ಕಾರ ಮಾಡಲ್ಲವೆಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಮಾತನಾಡಿರುವ ಅವರು, ‘ಈ ಬಾರಿ ಬಹುಮತದಿಂದ ಜೆಡಿಎಸ್ ಗೆದ್ದೇ ಗೆಲ್ಲುತ್ತದೆ’ ಅಂತಾ ಭರವಸೆ ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

‘ರಾಜ್ಯಾದ್ಯಂತ ‘ಮಿಷನ್‌ 123’ ಟಾರ್ಗೆಟ್ ಇಟ್ಟುಕೊಂಡು ಹೊರಟಿದ್ದೇವೆ. ಎಲ್ಲಾ ಜಿಲ್ಲೆಯಲ್ಲಿ ಹೆಚ್ಚಿನ ಹೋರಾಟವನ್ನು ಮುಂದುವರಿಸಿದ್ದೇವೆ. ಮತ್ತೊಮ್ಮೆ ಕಾಂಗ್ರೆಸ್-ಬಿಜೆಪಿ ಜೊತೆ ಒತ್ತಡದಿಂದ ಸರ್ಕಾರ ಮಾಡುವುದಿಲ್ಲ. ಈ ಬಾರಿ ಬಹುಮತದಿಂದ ಜೆಡಿಎಸ್ ಗೆಲ್ಲುತ್ತದೆ’ ಅಂತಾ ಹೇಳಿದ್ದಾರೆ.


ಇದನ್ನೂ ಓದಿ: Mangaluru Auto Blast: ಸ್ಥಳಕ್ಕೆ ಎಡಿಜಿಪಿ ಭೇಟಿ, ರಾಜ್ಯಾದ್ಯಂತ ಹೈ ಅಲರ್ಟ್ ಘೋಷಣೆ!


ರಾಜ್ಯದ ಜನರು ಜನತಾದಳಕ್ಕೆ ಈ ಬಾರಿ ಆಶೀರ್ವಾದ ಮಾಡಿ ಕೈ ಹಿಡಿಯುತ್ತಾರೆ. ಎಚ್.ಡಿ.ಕುಮಾರಸ್ವಾಮಿಯವರನ್ನು ಮತ್ತೊಮ್ಮೆ ಸಿಎಂ ಮಾಡುವುದೇ ಜೆಡಿಎಸ್ ಪಕ್ಷದ ಗುರಿ ಎಂದು ಹೇಳಿದ್ದಾರೆ.


ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಪರ್ಸನಲ್ ಡೇಟಾ ಕಲೆ ಹಾಕಿದ ಆರೋಪದ ವಿಚಾರವಾಗಿ ಮಾತನಾಡಿದ ನಿಖಿಲ್, ರಾಜ್ಯ ಸರ್ಕಾರ ಈ ಬಗ್ಗೆ ಪಾರದರ್ಶಕ, ನ್ಯಾಯಯುತವಾದ ತನಿಖೆ ಮಾಡಬೇಕು. ಖಾಸಗಿ ಸಂಸ್ಥೆ ಸರ್ಕಾರಿ ನೌಕರರ ರೀತಿ ಡಾಟಾ ಬೇಸ್ ಕಲೆಕ್ಟ್ ಮಾಡುವುದು ಸರಿಯಲ್ಲವೆಂದು ಹೇಳಿದ್ದಾರೆ.


ಇದನ್ನೂ ಓದಿ: ಜನರ ಬದುಕು ಹಸನಾಗಲು ಕುಮಾರಣ್ಣ ಮತ್ತೊಮ್ಮೆ ಸಿಎಂ ಆಗ್ಬೇಕು: ನಿಖಿಲ್ ಕುಮಾರಸ್ವಾಮಿ


ವೋಟರ್ ಐಡಿ ಅಕ್ರಮ ವಿಚಾರವಾಗಿ ನಿಜಕ್ಕೂ ಏನು ನಡೆಯುತ್ತಿದೆ ಅನ್ನೋದರ ಬಗ್ಗೆ ರಾಜ್ಯ ಸರ್ಕಾರ ನ್ಯಾಯಯುತವಾದ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಶಿಕ್ಷೆಯಾಗಬೇಕೆಂದು ನಿಖಿಲ್ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.