ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಜೆಡಿಎಸ್, ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್,ಬಿಜೆಪಿಗಳಿಗೂ ಮೊದಲೇ ತನ್ನ ವಿಧಾನಸಭಾ ಅಭ್ಯರ್ಥಿಗಳ ಪಟ್ಟಿಯನ್ನು ಇದೆ ಫೆ.17 ರಂದು ಅಂತಿಮ ಪಟ್ಟಿಯನ್ನು ಬಿಡುಗಡೆಗೊಳಿಸಲಿದೆ. 


COMMERCIAL BREAK
SCROLL TO CONTINUE READING

ಈ ಕುರಿತಾಗಿ ಮಾಧ್ಯಮಗಳಿಗೆ ಪ್ರತಿಕ್ರಯಿಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ, ಕುಮಾರಸ್ವಾಮಿ "ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವೇಳೆ ನಾಡಿನ ಹಿರಿಯರೊಬ್ಬರು, ಪ್ರತಿಜ್ಞಾ ವಿಧಿಯನ್ನು ಬೋಧಿಸಲಿದ್ದಾರೆ. ಆ ಮೂಲಕ ಅಭ್ಯರ್ಥಿಗಳು ತಮ್ಮ ಬದ್ದತೆಯನ್ನು ಈ ವೇದಿಕೆಯಲ್ಲಿ ಪ್ರದರ್ಶಶಿಸುತ್ತಾರೆ" ಎಂದರು. "ಈ  ಸಂದರ್ಭದಲ್ಲಿ 140 ಅಭ್ಯರ್ಥಿಗಳ  ಮೊದಲ ಪಟ್ಟಿ ಬಿಡುಗಡೆ ಮಾಡುತ್ತಿದ್ದೇವೆ ಆ ಮೂಲಕ ರಾಷ್ಟ್ರೀಯ ಪಕ್ಷಗಳಿಗಿಂತ ಮೊದಲೆ ಅಭ್ಯರ್ಥಿಗಳ ಪಟ್ಟಿ ನಾವು  ಬಿಡುಗಡೆ ಮಾಡುತ್ತಿದ್ದೇವೆ "ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.


"ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಕಾರ್ಯಕ್ರಮ ದಲ್ಲಿ ಕನಿಷ್ಠ 10 ಲಕ್ಷ ಮಂದಿ ಸೇರಲಿದ್ದಾರೆ. ಆ ಮೂಲಕ ಜೆಡಿಎಸ್ ರಾಷ್ಟ್ರೀಯ ಪಕ್ಷಗಳಿಗೆ ಎಚ್ಚರಿಕೆಯ ಸಂದೇಶವನ್ನು ನೀಡಲಿದೆ. ಇದುವರೆಗೂ ಯಾವುದೇ ಪಕ್ಷದ ಇತಿಹಾಸದಲ್ಲಿ 10 ಲಕ್ಷ ಜನರು ಸೇರಿಸುವಂತ ಸಮಾವೇಶವನ್ನು ಹಮ್ಮಿಕೊಂಡಿಲ್ಲ ,ಈಗ ಜೆಡಿಎಸ್ ಅಂತಹ ಕಾರ್ಯ ಮಾಡಲು ಮುಂದಾಗಿದೆ" ಎಂದು ಅವರು ತಿಳಿಸಿದರು.


"ನಾನು ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರು ಕಾರ್ಯಕ್ರಮ ನೋಡಿದ್ದೇನೆ. ಅಲ್ಲಿ ಎಷ್ಟು ಜನ ಬಂದಿದ್ರು ಎಂದು ಗೊತ್ತಿದೆ.ಅದೇ ರೀತಿಯಾಗಿ  ರಾಹುಲ್ ಗಾಂಧಿ ಕಾರ್ಯಕ್ರಮವನ್ನು ನೋಡಿದ್ದೇನೆ" ಎಂದು ಕುಮಾರಸ್ವಾಮಿ ರಾಷ್ಟ್ರೀಯ ಪಕ್ಷಗಳನ್ನು ವ್ಯಂಗ್ಯ ಮಾಡಿದರು.