Kaveri Protest : ರಾಜ್ಯದಲ್ಲಿ ಒಂದು ಕಡೆ ಸಮರ್ಪಕವಾಗಿ ಮಳೆ ಇಲ್ಲದೆ ಬರದಛಾಯೆ ಎದುರಾಗಿದೆ. ಉಳುಮೆ ಮಾಡಿದ್ದ ರೈತ ಆಕಾಶದತ್ತ ನೋಡುತ್ತಿದ್ದಾನೆ. ಮಳೆ ಇಲ್ಲದೆ ರಾಜ್ಯದ ಬಹುತೇಕ ಜಲಾಶಯಗಳು ಖಾಲಿ ಆಗಿವೆ. ಮೈಸೂರು ಭಾಗದ ಜೀವನಾಡಿ ಜೀವನದಿ ಎಂದೇ ಕರೆಸಿಕೊಳ್ಳುವ ಕಾವೇರಿ ಕೂಡ ಬರಿದಾಗುತ್ತಿದೆ. ಸದ್ಯ ಈ ಬಗ್ಗೆ ಬಾರೀ ವಿರೋಧಗಳು ವ್ಯಕ್ತವಾಗುತ್ತಿವೆ. 


COMMERCIAL BREAK
SCROLL TO CONTINUE READING

ಹೌದು.. ಕಳೆದ ಹದಿನೈದು ದಿನಗಳಿಂದ ತಮಿಳುನಾಡಿಗೆ ನೀರು ಬಿಡದಂತೆ ಮಂಡ್ಯದಲ್ಲಿ ನಿರಂತರ ಹೋರಾಟಗಳು ನಡೆಯುತ್ತಿವೆ.. ರೈತ ಸಂಘಟನೆಗಳು.. ಕನ್ನಡಪರ ಸಂಘಟನೆಗಳು ರಾಜಕೀಯ ಪಕ್ಷಗಳು ಹೀಗೆ ದಿನ ನಿತ್ಯ ಸಾಲು ಸಾಲು ಹೋರಾಟಗಳು ನಡೆಯುತ್ತಿದ್ದರೂ ತಮಿಳುನಾಡಿಗೆ ಕಾವೇರಿ ಹರಿಯುವುದು ಮಾತ್ರ ನಿಂತಿಲ್ಲ.. 


ಹೌದು ಇಂದು ಇದೇ ವಿಚಾರವಾಗಿ ಜೆಡಿಎಸ್ ಪಕ್ಷ ಮಂಡ್ಯದಲ್ಲಿ ಕಾಂಗ್ರೆಸ್ ವಿರುದ್ಧ ಕಹಳೆ ಮೊಳಗಿಸಿದೆ.. ರಾಜ್ಯ ಸರ್ಕಾರ ಈ ಕೂಡಲೇ ಕಾವೇರಿ ನೀರು ರಿಲೀಸ್ ಮಾಡುವುದನ್ನ ನಿಲ್ಲಿಸಬೇಕು.. ಸುಪ್ರೀಂನಲ್ಲಿ ರಾಜ್ಯದ ಪರ ವಕೀಲರು ಸಮಪರ್ಪಕವಾಗಿ ವಾದ ಮಂಡಿಸಬೇಕು ಎಂದು ಆಗ್ರಹಿಸಿದ್ದಾರೆ..


ಸಿಲ್ವರ್ ಜ್ಯೂಬಿಲಿ ಪಾರ್ಕ್ ನಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.. ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ  ಪ್ರತಿಭಟನೆಗೆ ಸಾಥ್ ನೀಡಿದ್ರು. ಜೆಡಿಎಸ್‌ ನಾಯಕರಾದ  ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ರವೀಂದ್ರ ಶ್ರೀಕಂಠಯ್ಯ, ಸುರೇಶ್ ಗೌಡ, ಡಾ.ಕೆ.ಅನ್ನದಾನಿ, ಹೆಚ್.ಟಿ.ಮಂಜು ಭಾಗಿಯಾಗಿದ್ದರು.


ಇದನ್ನೂ ಓದಿ-ಇಸ್ರೋ ಸೂರ್ಯಾಯಾನಕ್ಕೆ ಕೌಂಟ್ಡೌನ್ ಶುರು


ಜಿಲ್ಲೆಯ ಜೆಡಿಎಸ್ ನಾಯಕರು ಸೇರಿದಂತೆ ಸುಮಾರು 1 ಸಾವಿರಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರು ಹೋರಾಟಕ್ಕೆ ಧ್ವನಿಕೂಡಿಸಿದ್ದರು. ನಗರದ ಜ್ಯೂಬಿಲಿ ಪಾರ್ಕ್ ನಿಂದಿ ಡಿಸಿ ಕಚೇರಿ ವರೆಗೂ ಪ್ರತಿಭಟನಾ ಮೆರವಣಿಗೆ ಮಾಡಿ, ರಾಜ್ಯ ಸರ್ಕಾರದ ವಿರುದ್ದ ದಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದ್ದರು. 


ಜಿಟಿ ದೇವೇಗೌಡ ಅವ್ರು ಮಾತನಾಡಿ, ಕಾವೇರಿಗಾಗಿ ಹೆಚ್.ಡಿ.ದೇವೇಗೌಡರು ಪೂಜೆ ಮಾಡ್ತಿದ್ದಾರೆ. ಈ ಸರ್ಕಾರ ರೈತರನ್ನ ಉಳಿಸಲ್ಲ, ನೀನು ಹೋರಾಟಕ್ಕೆ ಹೋಗಿ ಎಂದು ನನ್ನನ್ನ ಕಳುಹಿಸಿದ್ದಾರೆ ಎಂದ್ರು.. ರಾಜ್ಯ ಸರ್ಕಾರ ತಮಿಳುನಾಡಿಗೆ 5000 ಕ್ಯೂಸೆಕ್ ನೀರು ಬಿಡ್ತೀವಿ ಅಂತೀರಾ..ನಿಮಗೆ ಹಾಗೆ ಹೇಳೋ ಅಧಿಕಾರ ಕೊಟ್ಟವರು ಯಾರು? ಸಂಕಷ್ಟದ ಬಗ್ಗೆ ಯಾಕೆ ಮೊದಲೆ ಪ್ರಾಧಿಕಾರಕ್ಕೆ ಮನವಿ ಮಾಡಲಿಲ್ಲ? 


5 ಗ್ಯಾರಂಟಿ ಶಿವ, 5 ಗ್ಯಾರಂಟಿ ಶಿವ ಅಂತೀರಾ.. ಫ್ರೀ ಕರೆಂಟು ಶಿವ, ಫ್ರೀ ಬಸ್ಸು ಶಿವ ಅಂತೀರಾ.. ಲಿಕ್ಕರ್ ಗೆ 30 ರೂಪಾಯಿ ಜಾಸ್ತಿ ಮಾಡಿದ್ದೀರಲ್ಲ ಶಿವ. ಶಿವ ಶಿವ ಅಂತಾನೆ ರಾಜ್ಯ ಸರ್ಕಾರವನ್ನ ಶಾಸಕ ಜಿ. ಟಿ. ದೇವೇಗೌಡ ಕುಟುಕಿದ್ದಾರೆ. ಅಲ್ಲದೇ ಈ ಕೂಡಲೇ ತಮಿಳುನಾಡಿಗೆ ಹರಿಸುತ್ತಿರುವ ನೀರು ನಿಲ್ಲಿಸಿ...ನೀರು ನಿಲ್ಲಿಸೋಕೆ ನಿಮಗೆ ಧೈರ್ಯವಿಲ್ವ ಎಂದು ಪ್ರಶ್ನಿಸಿದ್ದಾರೆ. 
 
ಇನ್ನು ಈ ಬಗ್ಗೆ ಮಾಜಿ ಶಾಸಕ ಅನ್ನದಾನಿ ಮಾತನಾಡಿ, ಮಂಡ್ಯ ಜಿಲ್ಲೆ ಬೆಂಕಿ ಚೆಂಡು ಇದ್ದಂಗೆ. ಈ ಬೆಂಕಿ ಚೆಂಡನ್ನ ವಿಧಾನ ಸೌದಕ್ಕೆ ಎಸಿತಿವಿ, ಚಂಡು ಎಸೆದ್ರೆ ಎಲ್ಲರೂ ಉರಿದುಹೋಗ್ತಿರಿ ಎಂದು ಗುಡುಗಿದ್ರು.. ಕದ್ದು ನೀರು ಬಿಟ್ರೆ ನಿಮ್ಮನ್ನ ಕಳ್ಳ ಸರ್ಕಾರ ಅನ್ನಬೇಕಾಗುತ್ತೆ. ರಾತ್ರಿ 9 ಗಂಟೆಯ ನಂತರ ಕದ್ದು ನೀರು ಬಿಡ್ತಿರಿ. ತಾಕತ್ತು ಇದ್ರೆ ಬೆಳಗ್ಗೆ ಹೊತ್ತು ನೀರು ಬಿಡಿ ನೋಡೋಣ ಎಂದು ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.. 


ಇನ್ನೂ ದಳಪತಿಗಳ ಪ್ರತಿಭಟನೆಗೆ ನಟ ರಾಜಕಾರಣಿ, ಮುಖ್ಯಮಂತ್ರಿ ಚಂದ್ರು ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ನಡೆಯುತ್ತಿದ್ದ ರೈತ ಹಿತರಕ್ಷಣಾ ಸಮಿತಿ ಧರಣಿಗೆ ಸಾಥ್ ನೀಡಿದ್ದಾರೆ. 


ಇದನ್ನೂ ಓದಿ-ಬಿಜೆಪಿ ವಿರುದ್ಧ ಎಂಬಿ ಪಾಟೀಲ್ ಆಕ್ರೋಶ ಹೊರಹಾಕಿದ್ದಾರೆ


ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಚಂದ್ರು, ಸರ್ಕಾರ ರಾಜ್ಯದ ಜನರ ಗುಲಾಮರಾಗಬೇಕಿತ್ತು ಆದ್ರೆ ಅಧಿಕಾರದ ಗುಲಾಮರಾಗಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.. ಇದಲ್ಲದೆ ರಾಜ್ಯ ಸರ್ಕಾರ ಉಸರವಳ್ಳಿ ತರ ಕಣ್ಣಮುಚ್ಚಾಲೆ ಆಟ ಆಡ್ತಿದೆ‌ ಎಂದು ಆರೋಪಿಸಿದ್ರು.. ಕಾವೇರಿಗಾಗಿ ರೈತ ಹಿತರಕ್ಷಣಾ ಸಮಿತಿ ಒಳ್ಳೆಯ ನಿರ್ಧಾರ ಕೈಗೊಂಡಿದ್ದಾರೆ. ಅವರ ಹೋರಾಟಕ್ಕೆ ನಾನು ಬದ್ದನಿದ್ದೇನೆ. ನಾವೇಲ್ಲರು ಸಹ ಸಂರಕ್ಷಣಾ ಸಮಿತಿ ಮಾಡಿದ್ದೀವಿ. ಮೂರು ಪಕ್ಷಗಳು ನಮಗೆ ಅನ್ಯಾಯ ಮಾಡ್ತಿದೆ ಎಂದು ಗುಡುಗಿದ್ದಾರೆ. 


ತಮಿಳುನಾಡಿನಲ್ಲಿ ಈ ರೀತಿ ಇಲ್ಲ, ಅವರ ಹಕ್ಕು ಅವರು ಪಡೆಯುತ್ತಾರೆ. ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಗೆ ಮನವರಿಕೆ ಮಾಡಬೇಕು. ಸುಪ್ರೀಂ ಕೋರ್ಟ್ ಅವರು ಹೇಳಿದ್ದಾರೆ ನಾವು ತಜ್ಞರಲ್ಲ ಅಂತ ಕಾರಣ ಹೇಳುವುದನ್ನ ನಿಲ್ಲಿಸಿ ರಾಜ್ಯದ ರೈತರಿಗೆ ನ್ಯಾಯ ನೀಡಬೇಕು ಎಂದು ಒತ್ತಾಯಿಸಿದ್ರು..


ರಾಜ್ಯ ಸರ್ಕಾರ ಅಂಕಿ ಅಂಶಗಳ ಕಲೆಕ್ಟ್ ಮಾಡಿ ತೀರ್ಮಾನ ತೆಗೆದುಕೊಳ್ಳಬೇಕು. ನಮ್ಮ ನೀರು ನಮ್ಮ ಹಕ್ಕು ಅಂತ ಡಿಕೆ ಶಿವಕುಮಾರ್ ಪಾದಯಾತ್ರೆ ಮಾಡಿದ್ರು ಏನಾಯ್ತು? ನಮ್ಮ ಲೋಟದಲ್ಲಿ ನೀರಿಲ್ಲ ಬೇರೆಯವರಿಗೆ ನೀರು ಕೊಡ್ತಿದ್ದಿರಿ ಎಂದು ಡಿಕೆಶಿಗೆ ಪ್ರಶ್ನೆ ಮಾಡಿದ್ರು.. ಇವರ ಅಧಿಕಾರ ಹೋಗುತ್ತದೆ ಅಂತ ತಮಿಳುನಾಡಿಗೆ ನೀರು ಬಿಡ್ತಿದ್ದಾರೆ. ಸರ್ಕಾರವನ್ನ ವಜಾ ಮಾಡುದ್ರೆ ನಾವು ನಿಮ್ಮ ಜೊತೆ ನಿಲ್ಲುತ್ತೇವೆ, ತಮಿಳುನಾಡಿನವರು ಕೇಂದ್ರಕ್ಕೆ ಹೆದರಿಸಿ ನೀರು ಪಡೆಯುತ್ತಿದ್ದಾರೆ, ಆದ್ರೆ ನಮ್ಮ ರಾಜಕಾರಣಿಗಳು ಅಧಿಕಾರದ ಭಯದಿಂದ ನೀರು ಬಿಡುತ್ತಿದ್ದಾರೆ ಎಂದು ದೂರಿದ್ದಾರೆ.


ಇನ್ನೂ ಇತ್ತ ಶ್ರೀರಂಗಪಟ್ಟಣದಲ್ಲಿ ರೈತರು ತಲೆ ಮೇಲೆ ಕಲ್ಲು ಹೊತ್ತು ಪ್ರತಿಭಟನೆ ನಡೆಸಿದ್ದಾರೆ. ಸರ್ಕಾರ ತಮಿಳುನಾಡಿಗೆ ನೀರು ಬಿಟ್ಟು ಕರ್ನಾಟಕದ ರೈತರ ತಲೆ ಮೇಲೆ ಕಲ್ಲು ಚಪ್ಪಡಿ ಹಾಕಿದೆ ಎಂದು ಆಕ್ರೋಶ ಹೊರಹಾಕಲಾಗುತ್ತಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.