ಬೆಂಗಳೂರು: ಜಾಗತಿಕವಾಗಿ ವ್ಯಾಪಕವಾಗಿ ಹರಡುತ್ತಿರುವ  ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಹಲವು ಸಲಹೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನೀಡಿದ್ದಾರೆ.



COMMERCIAL BREAK
SCROLL TO CONTINUE READING

ಹೆಚ್.ಡಿ.ಕುಮಾರಸ್ವಾಮಿ ನೀಡಿರುವ ಸಲಹೆಗಳ ಪಟ್ಟಿ ಇಲ್ಲಿದೆ.


  • ಕೊರೋನಾ ವೈರಸ್ ವಿರುದ್ಧ ಸೆಣಸುತ್ತಿರುವ ವೈದ್ಯಕೀಯ ವೃಂದ, ಪೊಲೀಸರು, ಪೌರಕಾರ್ಮಿಕರನ್ನು ಚಪ್ಪಾಳೆ ಮೂಲಕ ಗೌರವಿಸಬೇಕೆಂಬ ಮೋದಿ ಕರೆಗೆ ಬೆಂಬಲಿಸುತ್ತಾ ನನ್ನದೊಂದು ಕೋರಿಕೆ. ವಿಪತ್ತಿನ ವಿರುದ್ಧ ಹೋರಾಡುತ್ತಿರುವ ಈ ವರ್ಗಕ್ಕೆ ಸರ್ಕಾರ Incentive (ಪ್ರೋತ್ಸಾಹ ಧನ) ಘೋಷಿಸಿ ಅವರನ್ನು ಮತ್ತಷ್ಟು ಪ್ರೋತ್ಸಾಹಿಸಬೇಕು.

  • ಸಮಯ, ಕುಟುಂಬ, ಆರೋಗ್ಯ ಲೆಕ್ಕಿಸದೇ ಧೈರ್ಯದಿಂದ ಹೋರಾಡುತ್ತಿರುವ ವೈದ್ಯಕೀಯ ವೃಂದ, ಪೊಲೀಸರು, ಪೌರಕಾರ್ಮಿಕರ -ಪರಿಶ್ರಮವನ್ನು ಗೌರವಿಸಬೇಕು. ಪ್ರೋತ್ಸಾಹ ಧನದ ಮೂಲಕ ನೈತಿಕ, ಆರ್ಥಿಕ ಬೆಂಬಲ‌ ನೀಡಬೇಕು.‌ ಇಷ್ಟೇ ಅಲ್ಲ, ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ಎಲ್ಲರಿಗೂ 'ಗೌರವ ಪತ್ರ' ನೀಡಿ ಅವರ ಹೋರಾಟವನ್ನು ಅಜರಾಮರಗೊಳಿಸಬೇಕು.

  • ಕಳೆದ ಫೆಬ್ರವರಿಯಿಂದಲೇ ವೈದ್ಯಕೀಯ ವೃಂದದವರು, ಪೊಲೀಸರು, ಪೌರಕಾರ್ಮಿಕರು ಕೊರೊನಾ ವಿರುದ್ಧ ಹೋರಾಡುತ್ತಿದ್ದಾರೆ. -ಫೆಬ್ರವರಿಯಿಂದ ಆರಂಭಿಸಿ, ಕೊರೊನಾ ವೈರಸ್ ವಿರುದ್ಧ ಹೋರಾಟ ನಡೆಯುವವರೆಗೆ ಪ್ರತಿ ತಿಂಗಳು ಇವರೆಲ್ಲರಿಗೂ ಪ್ರೋತ್ಸಾಹ ಧನ ನೀಡಬೇಕು. ಅವರ ಧೈರ್ಯ, ತ್ಯಾಗಕ್ಕೆ ಸರ್ಕಾರ ಮನ್ನಣೆ ನೀಡಬೇಕು.

  • ಕರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಸ್ವಯಂ ನಿರ್ಬಂಧಗಳನ್ನು ಪಾಲಿಸುವಂತೆ ಜನತೆಗೆ ಹೇಳುತ್ತಿರುವ ಸರ್ಕಾರ ತಕ್ಷಣವೇ -ವಿಧಾನಮಂಡಲ ಅಧಿವೇಶನವನ್ನು ಮುಂದೂಡಬೇಕು.

  • ನೂರಾರು ಮಂದಿ ಒಂದೆಡೆ ಸೇರಬಾರದು ಎಂದು ತಾಕೀತು ಮಾಡುವ ಸರ್ಕಾರ ನೂರಾರು ಜನ ಪ್ರತಿನಿಧಿಗಳು, ಅಧಿಕಾರಿಗಳು, -ಪತ್ರಕರ್ತರು ಹಾಗೂ ಜನರು ಜಮಾಯಿಸುವ ಅಧಿವೇಶನ ನಡೆಸುವುದು ವಾಸ್ತವ ಪರಿಸ್ಥಿತಿಯಲ್ಲಿ ಸರಿಯಲ್ಲ.

  • ತಕ್ಷಣವೇ ಸರ್ಕಾರ ಎಚ್ಚೆತ್ತು ಅಧಿವೇಶನವನ್ನು ತಾತ್ಕಾಲಿಕವಾಗಿ ಮುಂದೂಡಬೇಕು ಎಂದು ಆಗ್ರಹಿಸುತ್ತೇನೆ. "ಸರ್ಕಾರ ಹೇಳುವುದು ಒಂದು ಮಾಡುವುದೊಂದು" ಎಂಬ ಸಾರ್ವಜನಿಕ ಜಿಜ್ಞಾಸೆಗೆ ಒಳಗಾಗಬಾರದು.